ಅಶ್ಲೀಲ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ರಾಜ್ ಕುಂದ್ರಾರನ್ನು ಬಿಡಿಸಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕೊನೆಗೂ ರಾಜ್ ಕುಂದ್ರಾಗೆ ಬೇಲ್ ಸಿಕ್ಕ ಬಳಿಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ನಾರ್ಮಲ್ ಆಗಿ ತಮ್ಮ ಕೆಲಸ ಕಾರ್ಯಗಳತ್ತ ಮುಖ ಮಾಡಿದ್ದರು.
ಕಳೆದ ತಿಂಗಳು ತನ್ನ ಪತಿಯೊಂದಿಗೆ ಸೇರಿ ನ್ಯೂ ಇಯರ್ ಕೂಡ ಸೆಲೆಬ್ರೇಟ್ ಮಾಡಿದ್ದರು. ಎಲ್ಲವೂ ಸರಿಹೋಯ್ತು ಎನ್ನುವ ಹೊತ್ತಿಗೆ ಈಗ ಮತ್ತೆ ಶಿಲ್ಪಾ ಶೆಟ್ಟಿಗೆ ಕೋರ್ಟ್ ಶಾಕ್ ನೀಡಿದ್ದಾರೆ.
ಹೌದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮುಂಬೈನ ಅಂಧೇರಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಉದ್ಯಮಿ ಒಬ್ಬರು ನೀಡಿದ ದೂರಿನ ಅನ್ವಯ ನ್ಯಾಯಾಲಯವು ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಗೆ ಸಮನ್ಸ್ ನೀಡಿದೆ.
21 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಲ್ಲ ಅಂತ ಆರೋಪಿಸಿ ಉದ್ಯಮಿ ದೂರು ನೀಡಿದ್ರು. ಈ ಹಿನ್ನೆಲೆ ಅಂಧೇರಿ ನ್ಯಾಯಾಲಯವು ಫೆಬ್ರವರಿ 28 ರಂದು ಮೂವರಿಗೂ ಕೋರ್ಟ್ಗೆ ಹಾಜರಾಗುವಂತೆ ತಿಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post