ಮಧ್ಯಪ್ರದೇಶದಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗವೊಂದು ಇಬ್ಬರು ಕುಸಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜಧಾನಿ ಭೂಪಾಲ್‌ನಿಂದ ಸುಮಾರು 450 ಕಿಮೀ ದೂರದಲ್ಲಿರುವ ಸ್ಲೀಮನಾಬಾದ್‌ನಲ್ಲಿ ಸುರಂಗವು ಬಾರ್ಗಿ ಕಾಲುವೆ ಯೋಜನೆಯ ಒಂದು ಭಾಗವಾಗಿತ್ತು ಎನ್ನಲಾಗಿದೆ.
ಇನ್ನು, ಭಾನುವಾರ ರಾತ್ರಿ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದಾರೆ.ಹಿಂದಿನ ಅಷ್ಟೇ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ ಏಳು ಕಾರ್ಮಿಕರನ್ನು ರಕ್ಷಿಸಿತ್ತು. ಮೃತ ಪಟ್ಟವರನ್ನು ಸಿಂಗ್ರೌಲಿ ಜಿಲ್ಲೆಯ ಗೋರಾಲಾಲ್ ಕೋಲ್ (30) ಮತ್ತು ನಾಗ್ಪುರ ಮೂಲದ ಮೇಲ್ವಿಚಾರಕ ರವಿ ಮಸಲ್ಕರ್ (26) ಎಂದು ಗುರ್ತಿಸಲಾಗಿದೆ ಹಾಗೂ ಅವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆಂದು ಮಧ್ಯಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಾಜೋರಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಘಟನೆಯ ಕುರಿತು ಕಟ್ನಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಗಾಯಗೊಂಡ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post