ಕನ್ನಡದ ಖ್ಯಾತ ನಟಿ ಸುಧಾ ಬೆಳವಾಡಿ ತಾಯಿ ಮತ್ತು ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನರಾಗಿದ್ದಾರೆ. ಭಾರ್ಗವಿ ನಾರಾಯಣ್ (84) ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಸಂಜೆ 7.30 ನಿಮಿಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಇವರು ಕನ್ನಡದ ಹಿರಿಯ ನಟಿ ಮತ್ತು ರಂಗಭೂಮಿಯ ಕಲಾವಿದೆಯೂ ಆಗಿದ್ದರು. ಭಾರ್ಗವಿ ನಾರಾಯಣ್ ಅವರು ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ ಇವರ ಹಿಟ್ ಸಿನಿಮಾಗಳು.
ಬಾಲ್ಯ ಜೀವನ
ಭಾರ್ಗವಿಯವರು 1938 ಫೆಬ್ರವರಿ 4ನೇ ತಾರೀಕಿನಂದು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಬಳಿಕ ಕನ್ನಡ ಚಲನಚಿತ್ರ ನಟ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. ಸುಜಾತಾ, ನಟ ಪ್ರಕಾಶ್ ಬೆಳವಾಡಿ, ಪ್ರದೀಪ್ ಮತ್ತು ನಟಿ ಸುಧಾ ಬೆಳವಾಡಿ ಇವರ ಮಕ್ಕಳು.
ಸಿನಿಮಾಗಳು..
- ಪ್ರೊಫೆಸರ್ ಹುಚ್ಚೂರಾಯ
- ಪಲ್ಲವಿ
- ಮುಯ್ಯಿ
- ಅಂತಿಮ ಘಟ್ಟ
- ಜಂಬೂ ಸವಾರಿ
- ಕಾದ ಬೆಳದಿಂಗಳು
- ಇದೊಳ್ಳೆ ರಾಮಾಯಣ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post