ಟಾಲಿವುಡ್ನ ಹೆಸರಾಂತ ನಟರಲ್ಲಿ ರಾಮ್ ಚರಣ್ ಸಹ ಒಬ್ಬರು.ತಮ್ಮದೇ ಆದ ಪ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು, ಅವರ RRR ಮತ್ತು ಆಚಾರ್ಯ ಸಿನಿಮಾಗಳು ಬಿಡುಗಡೆಯಾಗಲು ರೆಡಿಯಾಗಿದೆ.
RC15 ಸಿನಿಮಾ ಶೋಟಿಂಗ್ಗೆ ಸಲುವಾಗಿ ರಾಮ್ ಚರಣ್ ಆಂಧ್ರಪ್ರದೇಶದ ರಾಜಮಂಡ್ರಿಗೆ ಬಂದಿದ್ದರು. ಈ ವೇಳೆಯಲ್ಲಿ ರಾಜಾಜಿನಗರ ಏರ್ಫೋರ್ಟ್ಗೆ ಬಂದಿಳಿದ ತಕ್ಷಣ ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದರು ಹಾಗೂ ರಾಮ್ ಚರಣ್ ಅವರಿಗೆ ಮುತ್ತಿಗೆ ಹಾಕಿದ ಪ್ಯಾನ್ಸ್ ಸೆಲ್ಫಿಗೆ ಮುಗಿಬಿದ್ದರು. ಚೆರ್ರಿ ಹೋಟೆಲ್‌ಗೆ ತೆರಳುವ ಮಾರ್ಗದಲ್ಲಿ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತು ಆತ್ಮೀಯ ಸ್ವಾಗತ ಕೋರಿದರು.
RC15 ಚಿತ್ರಕ್ಕೆ ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ರಾಮ್ ಚರಣ್ ಹೊರತಾಗಿ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ತಿರ್ರು, ಎಡಿಟರ್ ಆಗಿ ಶಮೀರ್ ಮುಹಮ್ಮದ್ ಮತ್ತು ಸಂಗೀತ ಸಂಯೋಜಕರಾಗಿ ಎಸ್ ಥಮನ್ ತಾಂತ್ರಿಕ ತಂಡದ ಭಾಗವಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post