ಬಾಲಿವುಡ್ನ ಖ್ಯಾತ ನಟಿ ಸೋನಂ ಕಪೂರ್ ಪತಿ ಆನಂದ್ ಅಹುಜಾ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಅಮೆರಿಕ ಮೂಲದ ಶಿಪ್‌ಮೆಂಟ್ ಕಂಪನಿಯೊಂದು ಉದ್ಯಮಿಯಾಗಿರುವ ಆನಂದ್ ಅಹುಜಾ ಮೇಲೆ ತೆರಿಗೆ ವಂಚನೆಯ ಆರೋಪ ಮಾಡಿದೆ. ಇತ್ತೀಚಿಗೆ ಆನಂದ್ ಅಹುಜಾ ಅವರು ಅಂತರಾಷ್ಟ್ರೀಯ ಕಂಪನಿಯ ವಿರುದ್ಧ, ಗ್ರಾಹಕ ಸೇವೆಯ ಕುರಿತು ವಿರುದ್ಧ ಟ್ವಿಟರ್ನಲ್ಲಿ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ಅದೇ ಕಂಪನಿ ಆನಂದ್ ಅಹುಜಾ ಅವರು ತೆರಿಗೆ ಮತ್ತು ಕಸ್ಟಮ್ ಸುಂಕವನ್ನು ತಪ್ಪಿಸಲು, ನಕಲಿ ದಾಖಲೆಗಳನ್ನು ಬಳಿಸಿದ್ದಾರೆ ಎಂದು ಆರೋಪಿಸಿದೆ.
Unfortunately, this is not a customer service issue, as Mr. Ahuja attempted to use doctored invoices on international shipments, which we were not able to allow. https://t.co/KZzuw4MrX1
— MyUS.com (@MyUS_Shopaholic) February 1, 2022
2022ರ ಜನವರಿಯಲ್ಲಿ ಟ್ವೀಟ್ ಮಾಡಿದ್ದ ಆನಂದ್ ಅಹುಜಾ ಅವರು, ಇದರಲ್ಲಿ ಕಂಪನಿಯೊಂದರಿಂದ ಸಾಗಣೆಕೆಯ ವಿಳಂಬವನ್ನು ಉಲ್ಲೇಖಿಸಿ, ಅಧಿಕೃತ ದಾಖಲೆಗಳನ್ನು ಕಂಪನಿ ತಿರಸ್ಕರಿಸುತ್ತಿದೆ. ಈ ಅಡಚಣೆಗೆ ಪ್ರಮುಖ ಕಾರಣ ಕಂಪನಿಯ ನಿರ್ಲಕ್ಷ್ಯವೇ ಎಂದು ಆರೋಪ ಮಾಡಿದ್ದರು. ಇನ್ನು ಇವರ ಆರೋಪಕ್ಕೆ ಉತ್ತರಿಸಿದ್ದ ಕಂಪನಿ ಟ್ವೀಟ್ ಮಾಡಿ ‘ಅಸಲಿಗೆ ಸಮಸ್ಯೆಯಾಗಿರುವುದು ಅವರಿಗೆ ಒದಗಿಸಲಾದ ಸೇವೆಗಳಿಂದಲ್ಲ. ಅದರ ಬದಲಾಗಿ ಅವರು ಒದಗಿಸಿದ ದಾಖಲೆಗಳು ನಿಖರತೆಯಿಂದ ಕೂಡಿಲ್ಲ’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ 2 ಬೆಡಗಿ ಸುಷ್ಮಿತಾ ಗೌಡ
ಈ ಹಿಂದೆ ಕೂಡ ಆನಂದ್ ಅಹುಜಾ ಕಂಪನಿಯ ಮೇಲೆ ಆರೋಪಿಸಿದ್ದಾಗ ಸೋನಂ ಕಪೂರ್ ಅವರ ಬೆಂಬಲಕ್ಕೆ ನಿಂತಿದ್ದರು.ಸದ್ಯ ಈ ವಿಚಾರ ಟ್ವಿಟರ್ ವೇದಿಕೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಅಹುಜಾ ಈ ಕಂಪನಿಯೊಂದಿಗೆ ಇನ್ಮುಂದೆ ವ್ಯವಹಾರ ಮಾಡುವುದನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post