ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ.. ನಿನ್ನೆಯ ದಿನ ಪ್ರೇಮಿಗಳು ಸೆಲಬ್ರೆಷನ್ ಮೂಡ್ನಲ್ಲಿದ್ದವು. ತಮ್ಮ ಸಂಗಾತಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಡುತ್ತಿದ್ದರು. ಆದರೆ ಬಿಹಾರದ ದರ್ಭಾಂಗ್ನ ಇಂಜಿನಿಯರಿಂಗ್ ಕಾಲೇಜಿನ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರಿಯಾಂಶು ಬೇರೆಯೇ ವಿಚಾರಕ್ಕೆ ಸುದ್ದಿಯಾಗಿದ್ದಾನೆ.
ಏನಂದ್ರೆ ಪ್ರೇಮಿಗಳ ದಿನದಂದು ನೀವು ಒಂಟಿಯಾಗಿದ್ದೀರಾ? ಇಂದು ಬಾಡಿಗೆಗೆ ಬಾಯ್‌ಫ್ರೆಂಡ್ ಬೇಕಾದರೆ, ನೀವು ಖಂಡಿತವಾಗಿಯೂ ಬಿಹಾರದ ದರ್ಭಾಂಗಕ್ಕೆ ಭೇಟಿ ನೀಡಬಹುದು. ಏಕೆ ಎಂದು ಆಶ್ಚರ್ಯಪಡುತ್ತೀರಾ? ಬಾಡಿಗೆಗೆ ಬಾಯ್‌ಫ್ರೆಂಡ್ ಆಗಲು ನಾನು ತಯಾರಿದ್ದೇನೆ ಎಂದು ಪೋಸ್ಟರ್ ಹಿಡಿದು ನಿಂತಿದ್ದ. ಮಾತ್ರವಲ್ಲ, ಕಳೆದ ಕೆಲವು ದಿನಗಳಿಂದ ಕೊರಳಲ್ಲಿ ‘ಬಾಯ್‌ಫ್ರೆಂಡ್ ಆನ್ ರೆಂಟ್’ ಎಂಬ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದ ಅಂತಾ ವರದಿಯಾಗಿದೆ.
ಒಂದೊಳ್ಳೆ ಉದ್ದೇಶ
ಆಸಕ್ತಿದಾಯಕ ಅಭಿಯಾನದ ಬಗ್ಗೆ ಕೇಳಿದಾಗ ಪ್ರಿಯಾಂಶು ಈ ರೀತಿ ಹೇಳಿದ್ದಾನೆ.. ನನ್ನ ಈ ಅಭಿಯಾನದ ಉದ್ದೇಶವೆಂದರೆ ನಾವು ಜನರಲ್ಲಿ ಪ್ರೀತಿಯನ್ನು ಹಂಚಿಕೊಳ್ಳಬೇಕು. ಇಂದಿನ ಯುವಕರು ಹೆಚ್ಚಿನ ಒತ್ತಡ ಮತ್ತು ಡಿಫ್ರೆಷನ್ಗೆ ಒಳಗಾಗುತ್ತಿದ್ದಾರೆ. ಒಂಟಿಯಾಗಿರುವ ಯುವ ಜನತೆಗೆ ಪ್ರೀತಿಯನ್ನು ಹೆಚ್ಚಿಸುವುದು ನನ್ನ ಉದ್ದೇಶ ಎಂದಿದ್ದಾನೆ.
“ಬಾಯ್‌ಫ್ರೆಂಡ್ ಆನ್ ರೆಂಟ್” ಬೋರ್ಡ್‌ನೊಂದಿಗೆ ಪ್ರಿಯಾಂಶು ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ರಾಜ್ ಕೋಟೆ, ಚರ್ಚ್, ದರ್ಭಾಂಗ ಟವರ್, ಬಿಗ್ ಬಜಾರ್ ಸೇರಿದಂತೆ ದರ್ಭಾಂಗದ ಹಲವು ಪ್ರಸಿದ್ಧ ಪ್ರದೇಶಗಳಲ್ಲಿ ಚಿತ್ರಗಳಿಗೆ ಪೋಸ್ ನೀಡಿದ್ದಾನೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post