ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಕ್ಯಾಪ್ಟನ್ ಮೆಟಿರಿಯಲ್ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ನಾಯಕನನ್ನ ಕಳೆದುಕೊಂಡಿದ್ದ ಪ್ರಮುಖ ತಂಡಗಳು ಯಾರನ್ನ ಸಾರಥಿಯಾಗಿ ಆಯ್ಕೆ ಮಾಡಿಕೊಳ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡಿತ್ತು. ಇದೀಗ ಹರಾಜಿನ ಅಂತ್ಯದೊಂದಿಗೆ ಈ ಡಿಬೇಟ್ಗೂ ತೆರೆ ಬಿದ್ದಿದೆ.
ಐಪಿಎಲ್ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ತಂಡಕ್ಕೆ ಬೇಕಾದ ಆಟಗಾರರನ್ನ ಸೆಳೆದಿವೆ. ಬ್ಯಾಟ್ಸ್ಮನ್, ಆಲ್ರೌಂಡರ್, ಬೌಲರ್ ಇದೆಲ್ಲದರ ಜೊತೆಗೆ ಕೆಲ ತಂಡಗಳು ನಾಯಕನ ಹುಡಕಾಟವನ್ನ ನಡೆಸಿದ್ವು. ಪಂಜಾಬ್, ಆರ್ಸಿಬಿ, ಕೊಲ್ಕತ್ತಾ ಈ ಲಿಸ್ಟ್ನಲ್ಲಿದ್ದ ಮೊದಲ ತಂಡಗಳು. ಅಂತಿಮವಾಗಿ ಈ ತಂಡಗಳೂ ಈಗ ಬೆಸ್ಟ್ ಕ್ಯಾಪ್ಟನ್ ಮೆಟಿರಿಯಲ್ ಅನ್ನ ಪಿಕ್ ಮಾಡಿವೆ.
ಫಾಫ್ ಡು ಪ್ಲೆಸಿಸ್ RCB ನೂತನ ನಾಯಕ..?
ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋದು ಹರಾಜಿಗೂ ಮುನ್ನ ಆರ್ಸಿಬಿ ಕ್ಯಾಂಪ್ನಲ್ಲಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಕಳೆದ ಕೆಲ ದಿನಗಳಿಂದ ಹಲವು ಆಟಗಾರರನ್ನ ಆರ್ಸಿಬಿ ಟಾರ್ಗೆಟ್ ಮಾಡಿದೆ ಎಂದೂ ಕೂಡ ಹೇಳಲಾಗ್ತಿತ್ತು. ಅಂತಿಮವಾಗಿ ಆರ್ಸಿಬಿ ಸೌತ್ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ರನ್ನ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನ ಮುನ್ನಡೆಸಿದ ಅನುಭವವಿರುವ ಡು ಪ್ಲೆಸಿಸ್ಗೆ ನಾಯಕನ ಹೊಣೆಗಾರಿಕೆಯನ್ನೂ ನೀಡಲು ಸಜ್ಜಾಗಿದೆ.
Empowering youth + Backing experience is what our #PlayBold philosophy is all about.
A job well done in assembling our #BoldSquad for #IPL2022. 👊🏻#WeAreChallengers pic.twitter.com/DI2X4KLWc2
— Royal Challengers Bangalore (@RCBTweets) February 14, 2022
ಪಂಜಾಬ್ ಪಡೆಗೆ ಶಿಖರ್ ಧವನ್ ಕ್ಯಾಪ್ಟನ್..?
ಕೆಎಲ್ ರಾಹುಲ್ ತಂಡ ತೊರೆದಿದ್ದರಿಂದ ಪಂಜಾಬ್ ಕಿಂಗ್ಸ್ ಪಾಳೆಯ ಕೂಡ ಹರಾಜಿನಲ್ಲಿ ಕ್ಯಾಪ್ಟನ್ ಮೆಟಿರಿಯಲ್ ಟಾರ್ಗೆಟ್ ಮಾಡಿತ್ತು. ತಂಡದಲ್ಲಿ ಮಯಾಂಕ್ ಇದ್ರೂ ಕೂಡ ಆತ ನಾಯಕನ ಸ್ಥಾನದ ಮೊದಲ ಆಯ್ಕೆಯಲ್ಲ ಎಂದು ತಂಡ ಮೊದಲೇ ಸ್ಪಷ್ಟಪಡಿಸಿದೆ. ಇದೀಗ ಶಿಖರ್ ಧವನ್ರನ್ನ ಹರಾಜಿನಲ್ಲಿ ತಂಡ ಖರೀದಿ ಮಾಡಿದ್ದು, ಬಹುತೇಕ ಅವರೇ ತಂಡವನ್ನ ಲೀಡ್ ಮಾಡಲಿದ್ದಾರೆ ಎನ್ನಲಾಗ್ತಿದೆ.
Job half done ✅
Send a 🦁 if you can’t wait to see the #SaddaSquad in action at #IPL2022 👇#TATAIPLAuction #IPLAuction #SaddaPunjab #PunjabKings pic.twitter.com/JzbwvsMD8Z
— Punjab Kings (@PunjabKingsIPL) February 13, 2022
ಕೊಲ್ಕತ್ತಾ ನೈಟ್ ರೈಡರ್ಸ್ಗೆ ಶ್ರೇಯಸ್ ಸಾರಥಿ..?
ಐಪಿಎಲ್ ಹರಾಜಿಗೂ ಮೊದಲೇ ಶ್ರೇಯಸ್ ಅಯ್ಯರ್ ಹಾಟ್ ಕೇಕ್ಗಾಗಿ ಗುರುತಿಸಿಕೊಂಡಿದ್ದೇ ನಾಯಕತ್ವದ ಗುಣಗಳ ಕಾರಣಕ್ಕೆ. ಯಶಸ್ವಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮುನ್ನಡೆಸಿದ ಹೆಗ್ಗಳಿಕೆ ಶ್ರೇಯಸ್ ಬೆನ್ನಿಗಿತ್ತು. ಹೀಗಾಗಿ ಹಲವು ಫ್ರಾಂಚೈಸಿಗಳು ಅಯ್ಯರ್ ಮೇಲೆ ಕಣ್ಣಿಟ್ಟಿದ್ವು. ಹೀಗಾಗಿಯೇ ಖರೀದಿಯಲ್ಲಿ ಬಿರುಸಿನ ಪೈಪೋಟಿ ಕೂಡ ನಡೀತು. ಅಂತಿಮವಾಗಿ ಕೆಕೆಆರ್ ತಂಡ ಶ್ರೇಯಸ್ರನ್ನ ತೆಕ್ಕೆಗೆ ಹಾಕಿಕೊಂಡಿದ್ದು, ನಾಯಕತ್ವದ ಜವಾಬ್ದಾರಿಯನ್ನ ನೀಡಲೂ ಮುಂದಾಗಿದೆಯಂತೆ.
ಒಟ್ಟಿನಲ್ಲಿ ನಾಯಕನ ಹುಡುಕಾಟ ನಡೆಸಿದ ಮೂರು ತಂಡಗಳಿಗೂ ಸಿಕ್ಕಿರುವ ಆಟಗಾರರು ಸಾಲಿಡ್ ಕ್ಯಾಪ್ಟನ್ ಮೆಟಿರಿಯಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಫ್ರಾಂಚೈಸಿಗಳು ಇವರಿಗೇ ಮಣೆ ಹಾಕ್ತವಾ ಅಥವಾ ಬೇರೆ ಆಯ್ಕೆಯನ್ನ ನೋಡ್ತವಾ ಅನ್ನೋದನ್ನ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post