ಬೆಂಗಳೂರು: ಟ್ರಾಫಿಕ್ ಸಿಗ್ನಲ್ಗಳಲ್ಲಿ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಕೇಸ್ ಸಂಬಂಧ ಆರೋಪಿ ದಂಪತಿಯನ್ನು ಬೆಂಗಳೂರಿನ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ 3 ಗಂಟೆಯಿಂದ ಬೆಳಗ್ಗೆ 5 ಗಂಟೆ ಅವಧಿಯ ನಡುವೆ ಸಿಗ್ನಲ್ ಬಳಿಯಿದ್ದ ಲೈಟ್ ಹಾಗೂ ಸಿಸಿಟಿವಿ ಕ್ಯಾಮಾರ ಬ್ಯಾಟರಿಗಳನ್ನ ಈ ಖತರ್ನಾಕ್ ದಂಪತಿ ಎಗರಿಸುತ್ತಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಶೋಕನಗರ, ವಿಲ್ಸನ್ ಗಾರ್ಡನ್, ವೈಯಾಲಿಕಾವಲ್, ರಾಜಾಜಿನಗರ, ಇಂದಿರಾನಗರ ಸೇರಿದಂತೆ ಹಲವು ಸಿಗ್ನಲ್ ಗಳಲ್ಲಿ ಕಳ್ಳತನ ಮಾಡಿದ್ದ ದಂಪತಿಯನ್ನ ವಿಚಾರಣೆ ನಡೆಸಿದಾಗ ಬರೋಬ್ಬರಿ 68 ಪ್ರಕರಣಗಳು ಪತ್ತೆಯಾಗಿದೆ. ಸದ್ಯ ಬಂಧಿತ ಆರೋಪಿಗಳಿಂದ 20 ಲಕ್ಷ ರೂಪಾಯಿ ಬೆಲೆ ಬಾಳುವ ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post