ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ತಮ್ಮ ತಂಡದ ಮಾಜಿ ಆಟಗಾರ ಆವೇಶ್ ಖಾನ್ಗೆ SORRY ಕೇಳಿದ್ದಾರೆ. ನಿನ್ನನ್ನ ಡೆಲ್ಲಿ ತಂಡದಲ್ಲಿ ಉಳಿಸಿಕೊಳ್ಳಲಾಗಲಿಲ್ಲ ದಯವಿಟ್ಟು ಕ್ಷಮಿಸು ಎಂದು ಹೇಳುವ ಮೂಲಕ ಆವೇಶ್ ಖಾನ್ ಮುಂದೆ ತಮ್ಮ ಬೇಸರ ವಕ್ತಪಡಿಸಿದ್ದಾರೆ. ನಾನು ಕೋಲ್ಕತ್ತಾದಲ್ಲಿ ರಿಷಭ್ ಪಂತ್ರನ್ನ ಭೇಟಿಯಾದ ವೇಳೆ ಪಂತ್, ನನ್ನನ್ನು ತಬ್ಬಿಕೊಂಡರು. ಬಳಿಕ SORRY ನಾವು ನಿನ್ನನ್ನು ಖರೀದಿಸಲು ಸಾಧ್ಯವಾಗಲಿಲ್ಲ ಅಂದ್ರು ಎಂದು ಆವೇಶ್ ಖಾನ್ ಹೇಳಿದ್ದಾರೆ.
ನಾನು ಮತ್ತು ರಿಷಭ್ ಪಂತ್ ಅಂಡರ್-19 ತಂಡದಲ್ಲಿ ಒಟ್ಟಿಗೆ ಆಡಿದ್ದೆವು. ಪ್ರತಿ ಪಂದ್ಯದ ನಂತರ ನಾವಿಬ್ರು ಕೂತು ಮಾತಾಡುತ್ತಿದ್ವಿ. ನಮ್ಮಿಬ್ಬರ ಭಾಂದವ್ಯ ತುಂಬಾ ಗಟ್ಟಿಯಾಗಿದೆ ಎಂದು ಆವೇಶ್ ತಮ್ಮ ಹಾಗೂ ರಿಷಬ್ ಪಂತ್ ಸ್ನೇಹ ಸಂಬಂಧದ ಕುರಿತು ಮಾತನಾಡಿದ್ದಾರೆ.
2017ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಆವೇಶ್, ತಮ್ಮ ಮೊದಲ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ರು. ನಂತರ 2018 ರಿಂದ ಕಳೆದ ಸೀಸನ್ವರೆಗೂ ಡೆಲ್ಲಿ ತಂಡದ ಪರ ಕಣಕ್ಕಿಳಿದಿದ್ರು. ಈ ಬಾರಿ ಆವೇಶ್ ಖಾನ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಲಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ಆವೇಶ್ ಖಾನ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post