ಈಗ ದೊಡ್ಮನೆಯ ಮೂರನೇ ತಲೆಮಾರಿನ ಜಮಾನ ಶುರುವಾಗಿರೋ ಸಮಯ. ವಿನಯ್ ರಾಜ್ ಕುಮಾರ್ , ಯುವರಾಜ್ ಕುಮಾರ್ ಹಾಗೂ ಧನ್ಯಾ ರಾಮ್ ಕುಮಾರ್ ನಂತರ ಈಗ ಮತ್ತೊಬ್ಬ ಕಲಾವಿದನ ಆಗಮನ ಸಿರಿಗನ್ನಡ ಸಿನಿಮಾ ರಂಗಕ್ಕೆ ಆಗಿದೆ. ಯಾರು ಆ ಕಲಾವಿದ ಅನ್ನೋ ಪ್ರಶ್ನೆಗೆ ಉತ್ತರ ಧೀರೇನ್ ರಾಮ್ ಕುಮಾರ್..
ಕ್ಲಾಸ್ ಪ್ಲಸ್ ಮಾಸ್ ಎರಡು ಜಾನರ್ಗೂ ಹೊಂದುವ ಸ್ಮಾರ್ಟ್ ಆಂಡ್ ಖಡಕ್ ಹೀರೋ ಧೀರೇನ್ ರಾಮ್ ಕುಮಾರ್. ಕಳೆದ ಎರಡು ವರ್ಷದಿಂದ ಧೀರೇನ್ ‘‘ಶಿವ 143’’ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಅಪ್ಪನಂತೆ ಸ್ಮಾರ್ಟ್ ಆಗಿರೋ ಧೀರೇನ್ ಯಾವ ರೀತಿಯ ಪಾತ್ರವನ್ನ ಮಾಡಿರಬಹುದು ಅನ್ನೋ ಕುತುಹಲ ರಾಜ್ ವಂಶಭಿಮಾನಿಗಳಲ್ಲಿತ್ತು. ಈಗ ಧೀರೇನ್ ಲುಕ್ ಹೆಂಗಿದೆ ಅಂತ ನೋಡಕ್ಕು ಮುನ್ನವೆ ಧೀರೇನ್ ಆ್ಯಕ್ಟಿಂಗ್ ಹೆಂಗಿದೆ ಅಂತ ಬಣ್ಣಿಸಿ ಬರೆಯುಷ್ಟು ವಿಶೇಷವಾದ ಹಾಡಿನ ಮೂಲಕ ಚಿತ್ರಪ್ರೇಮಿಗಳ ಮುಂದೆ ಬಂದಿದ್ದಾರೆ.
ರಿಲೀಸ್ ಆಯ್ತು ಧೀರೇನ್ ನಟನೆಯ ಸಿನಿಮಾದ ಹಾಡು
ಮತ್ತೇರಿಸುವ ಮುತ್ತಿನ ಹಾಡಿನಲ್ಲಿ ಧೀರೇನ್-ಮಾನ್ವಿತಾ
ಧೀರೇನ್ ರಾಮ್ ಕುಮಾರ್ ನಟನೆಯ ಮೊಟ್ಟ ಮೊದಲ ಚಿತ್ರ ಶಿವ 143.. ಪ್ರೇಮಿಗಳ ದಿನದ ಪ್ರಯುಕ್ತ ಶಿವ 143 ಸಿನಿಮಾ ಫಸ್ಟ್ ಸಾಂಗ್ ರಿಲೀಸ್ ಆಗಿದೆ.. ಟಗರು ಪುಟ್ಟಿ ಮಾನ್ವಿತಾ ಕಾಮತ್ ಜೊತೆ ಮುತ್ತಿನ ಮಳೆಯನ್ನೇ ಹರಿಸಿದ್ದಾರೆ ಧೀರೇನ್..
ಶಿವ 143 ಸಿನಿಮಾ ಟಾಲಿವುಡ್ನಲ್ಲಿ ಹಿಟ್ ಆಗಿದ್ದ ಕಾರ್ತಿಕೇಯ , ಪಾಯಲ್ ರಾಜ್ ಪುತ್ ನಟನೆಯ ಆರ್ಎಕ್ಸ್ 100 ಸಿನಿಮಾದ ರಿಮೇಕ್. ಜಯಣ್ಣ ಕಂಬೈನ್ಸ್ನಲ್ಲಿ ಅನಿಲ್ ಕುಮಾರ್ ನಿರ್ದೇಶನದಲ್ಲಿ ಶಿವ 143 ಸಿನಿಮಾ ರಿಚ್ ಆಗಿ ಮೂಡಿಬಂದಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಕ್ರಾಂತಿ ಕುಮಾರ್ ಸಾಹಿತ್ಯದಲ್ಲಿ ನಿಹಲ್ ಮತ್ತು ಪೃಥ್ವಿ ಭಟ್ ಕಂಠಸಿರಿಯಲ್ಲಿ ಮಳೆ ಹನಿಯೇ ಹಾಡು ಮೂಡಿಬಂದಿದೆ.. ರೊಮ್ಯಾಂಟಿಕ್ ಹಾಡನ್ನ ಬಿಟ್ಟು ಪಡ್ಡೆ ಹೈದರನ್ನ ಎಚ್ಚರಿಸಿರುವ ಶಿವ 143 ಸಿನಿಮಾ ತಂಡ ಮುಂದಿನ ದಿನಗಳಲ್ಲಿ ತನ್ನ ಬತ್ತಳಿಕೆಯಿಂದ ಇನಷ್ಟು ಕುತೂಹಲದ ಕಂಟೆಂಟ್ಗಳನ್ನ ಹೊರ ಬಿಡಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
cont[email protected]
Discussion about this post