ನಟಿ ಕಂಗಾನಾ ರಣಾವತ್ ಯಾವಾಗಲೂ ಸುದ್ದಿಯಲ್ಲಿರುವ ಬಿಟೌನ್ ಬೆಡಗಿ. ಒಂದಿಲ್ಲೊಂದು ವಿಚಾರವಾಗಿ ಪ್ರತಿಕ್ರಿಯೆ ನೀಡೋ ಕಂಗನಾ ಕಣ್ಣು ಇದೀಗ ರಾಜಕೀಯದ ಮೇಲೆ ಬಿದ್ದಿದೆ.
ಸದ್ಯ ಕಂಗನಾ ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕ್ತಾರೆ. ಕಳ್ಳರಾದವರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ವಿವಾದದಲ್ಲಿ ಸಿಲುಕುತ್ತಿರುವ ನಟಿ ಕಂಗನಾ ಕೆಲ ದಿನಗಳಿಂದ ಸುಮ್ಮನಿದ್ದರು. ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ಟ್ವೀಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಜೀವನದ ನಾಲ್ಕು ಸೂತ್ರಗಳನ್ನು ನೆನಪಿಡಿ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, 4 ಸೂತ್ರವನ್ನು ಕಾಂಗ್ರೆಸ್ ಹಾಗೂ ಬಿಜೆಪಿಗೆ ಅನುಕರಣೆ ಮಾಡಿದ್ದಾರೆ. ಎಲ್ಲರಿಗೂ ಅವರವರ ಮನಸ್ಥಿತಿಗೆ ತಕ್ಕಂತಹ ಗುರು ಸಿಗುತ್ತಾನೆ. ಒಳ್ಳೆಯವರಾಗಿದ್ರೆ ಒಳ್ಳೆಯ ಗುರು ಸಿಗುತ್ತಾರೆ. ಕೆಟ್ಟವರಾಗಿದ್ರೆ ಕೆಟ್ಟ ಗುರು ಸಿಗುತ್ತಾನೆ. ಈ ಹಿನ್ನೆಲೆಯಲ್ಲಿ ಕಳ್ಳರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post