ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಹುವೈ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ಸುಮಾರು 6,500 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ ಕೇಳಿ ಬಂದ ಕಾರಣ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಗುರುಗ್ರಾಮ, ಕರ್ನಾಟಕ ಸೇರಿದಂತೆ ಹತ್ತಾರು ರಾಜ್ಯಗಳಲ್ಲಿ ಹುವೈಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ತೆರಿಗೆ ಇಲಾಖೆ ಅಧಿಕಾರಿಗಳ ಶೋಧಕಾರ್ಯ ಮುಂದುವರಿದಿದೆ. ಹುವೈ ಸುಮಾರು 6 ಸಾವಿರ ಕೋಟಿಗೂ ಅಧಿಕ ಮೌಲ್ಯದ ವಂಚನೆ ಮಾಡಿದ್ದು, ಈ ನೆಲದ ತೆರಿಗೆ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಅಧಿಕಾರಿಗಳು ದಾಳಿಯಲ್ಲಿ ಈ ಸಂಬಂಧ ಸಾಕಷ್ಟು ಕಡತಗಳನ್ನು ಸಂಗ್ರಹಿಸಿದ್ದಾರೆ. ಮುಂದೆ ಈ ಕಂಪನಿಗೆ ತೆರಿಗೆ ವಂಚನೆ ಆರೋಪದ ಮೇರೆಗೆ ಸಾವಿರಾರು ಕೋಟಿ ರೂಪಾಯಿ ಭಾರೀ ದಂಡ ಹಾಕೋ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post