ಕಳೆದ ವಾರ ಪುಟಾಣಿ ಮಕ್ಕಳು ಪ್ರೀತಿಯ ಅಮ್ಮಂದಿರಗೆ ಮುದ್ದಾಗಿ ಲೇಟರ್ ಬರೆದು, ತಾವೇ ಖುದ್ದಾಗಿ ಹೋಗಿ ಗಿಫ್ಟ್ ತಂದು ಸರ್ಪ್ರೈಸ್ ನೀಡಿದ್ರು. ಮಕ್ಕಳ ಸರ್ಪ್ರೈಸ್ ನೋಡಿ ಖುಷಿಯಿಂದ ಕಣ್ಣೀರಿಟ್ಟದ್ದರು ಅಮ್ಮಂದಿರು. ತಾಯಿ-ಮಗು ನಡುವಿನ ಬಾಂಧವ್ಯ ಆ ಸ್ನೇಹ, ಪ್ರೀತಿಗೆ ನನ್ನಮ್ಮ ಸೂಪರ್ ಸ್ಟಾರ್ ಸಾಕ್ಷಿಯಾಗಿದೆ.
ಈ ಶೋ ಕೇವಲ ಮನರಂಜನೆಗೆ ಸೀಮಿತವಾಗದೇ ಸಂಬಂಧಗಳನ್ನ ಸೆಲಬ್ರೇಷನ್ ಮಾಡುತ್ತಿರುವುದು ವಿಶೇಷ. ಮೊನ್ನೆ ಸೃಜನ್ ಒಂದು ಸ್ಪೆಷಲ್ ಮೂಮೆಂಟ್ ಅನ್ನ ಕ್ರಿಯೇಟ್ ಮಾಡಿ, ನಿರೂಪಕಿ ಅನುಪಮಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ರು. ಸೃಜನ ಪ್ರೀತಿ, ಕಾಳಜಿಗೆ ಅನು ಮಾತ್ರವಲ್ಲ ಇಡೀ ವೇದಿಕೆ ಭಾವುಕವಾಗಿತ್ತು.
ಅನುಗೆ ಮಾತ್ರ ಸೃಜಾ ಗಿಫ್ಟ್ ತಂದಿರಲಿಲ್ಲ. ಜಡ್ಜ್ಗಳಾದ ತಾರಮ್ಮ ಹಾಗೂ ಅನು ಪ್ರಭಾಕರ್ ಅವ್ರಿಗೂ ಚಂದದ ಉಡುಗೊರೆ ನೀಡಿದ್ರು. ತಾರಮ್ಮ ಅಂತೂ ಸೀರೆಯಲ್ಲಿ ಱಂಪ್ ವಾಕ್ ಮಾಡಿ, ಬೆಡಗಿನ ಝಲಕ್ ತೋರಿಸಿದ್ರು. ಇನ್ನೂ ಸೃಜ ಅನು ಪ್ರಭಾಕರ್ ಅವ್ರಿಗೂ ಕೂಡ ಸೀಲ್ವರ್ ಕೊಟೆಡ್ ನೆಕ್ ಪೀಸ್ ಗಿಫ್ಟ್ ಮಾಡಿದ್ರು. ಒಟ್ನಲ್ಲಿ ನನ್ನಮ್ಮ ಸೂಪರ್ ಸ್ಟಾರ್ನ ಸೂಪರ್ ವುಮನ್ಸ್ಗೆ ಸರ್ಪ್ರೈಸ್ ಗಿಫ್ಟ್ಸ್ ನೀಡಿ ಸ್ಪೆಷಲ್ ಮೂಮೆಂಟ್ ಕ್ರಿಯೇಟ್ ಮಾಡಿದ್ರು ಸೃಜನ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post