ಹುಬ್ಬಳ್ಳಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇಟ್ಟಿರೋ ಭ್ರಷ್ಟಾಚಾರದ ಹೆಜ್ಜೆ ಹೆಜ್ಜೆಯಲ್ಲಿಯೂ ಅಧಿಕಾರದಲ್ಲಿರೋರ ನೆರಳು ಸ್ಪಷ್ಟವಾಗಿದೆ. ಹಾಗೇ ನೋಡಿದ್ರೆ, ಇದು ಕೇವಲ ಒಂದು ಮಂಡಳಿಯ ಪ್ಲಾನ್ ಆದಂತೆ ಇಲ್ಲ. ಇದರಲ್ಲಿ ಕಾಣದ ಕೈಗಳ ಕೆಲಸ ಎದ್ದು ಕಾಣಿಸುತ್ತಿದೆ. ಯಾಕಂದ್ರೆ ಅದಕ್ಕೆ ಸಂಪುಟದಲ್ಲಿಯೇ ಅನುಮೋದನೆಯನ್ನು ಪಡೆದುಕೊಂಡು ಬಿಟ್ಟಿದ್ದಾರೆ. ಇದರ ಅರ್ಥ ಏನೂ ಅನ್ನೋದು ನಿಮಗೆ ತಿಳಿಯಬೇಕಾದ್ರೆ, ಈ ರಿಪೋರ್ಟ್ ನೋಡಬೇಕು.
ಯಾವುದೇ ಯೋಜನೆ ಜಾರಿ ಆಗಬೇಕಾದ್ರೆ ಫೈಲ್‌ಗಳು ಹಲವಾರು ಹಂತಗಳನ್ನು ದಾಟಿ ಬರಬೇಕು. ಮೇಲಧಿಕಾರಿಗಳು ಪರಿಶೀಲನೆ ನಡೆಸಿ ಫೈಲ್‌ಗಳನ್ನು ಮೂವ್ ಮಾಡಬೇಕಾಗುತ್ತೆ. ಎಲ್ಲವೂ ಸರಿ ಇದ್ರೆ ಮಾತ್ರ ಒಪ್ಪಿಗೆ ನೀಡುವ ಪ್ರಕ್ರಿಯೆ ನಡೆಯುತ್ತೆ. ಒಮ್ಮೆ ಪ್ರಸ್ತಾವನೆ ಸರಿ ಇಲ್ಲದಿದ್ರೆ ತಿರಸ್ಕರಿಸುವ ಕೆಲಸಗಳು ನಡೆಯುತ್ತವೆ. ಯೆಸ್, ಇದೇ ವಿಚಾರದಲ್ಲಿ ಮತ್ತಷ್ಟು ಸ್ಫೋಟಕ ಆರೋಪಗಳು ಕೇಳಿ ಬರುತ್ತಿವೆ. ಹಂತ ಹಂತದಲ್ಲಿಯೂ ಭ್ರಷ್ಟಾಚಾರದ ವಾಸನೆ ಕೇಳಿ ಬರ್ತಾ ಇದೆ.
ಪರಿಶೀಲನೆ ಸತ್ಯ ಏನು?
- ಬಿಡ್ನ ದಾಖಲಾತಿ ಪರಿಶೀಲನೆ ಕೆಎಸ್ಡಿಬಿಯ ಟಿಇಸಿ ಹೊಣೆ
- ಈ ಎಲ್ಲಾ ದಾಖಲೆ ಪರಿಶೀಲಿಸಲು ಟಿಇಸಿಗೆ 3-4 ತಿಂಗಳ ಸಮಯ ಬೇಕು
- ಆದರೆ ದಾಖಲೆ ಪರಿಶೀಲನೆ ನಡೆಸದೇ ಸಕ್ರಮ ಎಂದು ಶರಾ ಆರೋಪ
- ಬೇಕಾದ ಏಜೆನ್ಸಿಗಳ ದಾಖಲೆ ಸಕ್ರಮ ಎಂದು ಶರಾ ಬರೆಯಿತಾ ಟಿಇಸಿ?
- ಟಿಇಸಿಯಿಂದ ಸ್ಟೇಟ್ ಲೆವಲ್ ನೋಡಲ್ ಏಜೆನ್ಸಿಗೆ ದಾಖಲೆ ರವಾನೆ
- ಎಸ್ಎಲ್ಎನ್ಎ ಬೇಱವದೂ ಅಲ್ಲ ರಾಜೀವ್ ಗಾಂಧಿ ವಸತಿ ನಿಗಮ
- ಎಲ್ಲವೂ ಕ್ರಮ ಬದ್ಧವಾಗಿದ್ದರೆ ಮಾತ್ರವಷ್ಟೇ SLSMCಗೆ ಕಳುಹಿಸಬೇಕು
- ದಾಖಲೆ ಪರಿಶೀಲಿಸದೇ ಕಾಟಾಚಾರಕ್ಕೆ ಪ್ರಕ್ರಿಯೆ ಮುಗಿಸಿದ ಆರೋಪ
ತಾಂತ್ರಿಕ ಬಿಡ್ ದಾಖಲಾತಿ ಪರಿಶೀಲಿಸುವುದು ಕೆಎಸ್ಡಿಬಿಯ ಟಿಇಸಿ ಹೊಣೆಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲು ಟಿಇಸಿಗೆ 3 ರಿಂದ 4 ತಿಂಗಳ ಸಮಯಬೇಕು. ಆದರೆ ಇಲ್ಲಿ ದಾಖಲೆ ಪರಿಶೀಲನೆ ನಡೆಸದೇ ಸಕ್ರಮ ಎಂದು ಶರಾ ಬರೆದ ಆರೋಪ ಕೇಳಿ ಬರ್ತಾ ಇದೆ. ಹೌದು, ಬೇಕಾದ ಏಜೆನ್ಸಿಗಳ ದಾಖಲೆ ಸಕ್ರಮ ಎಂದು ಶರಾ ಬರೆಯಿತಾ ಟಿಇಸಿ ಅನ್ನೋ ಅನುಮಾನವಿದೆ. ಇನ್ನು ಟಿಇಸಿಯಿಂದ ಸ್ಟೇಟ್ ಲೆವಲ್ ನೋಡಲ್ ಏಜೆನ್ಸಿಗೆ ಅಂದ್ರೆ ಎಸ್‌ಎಲ್‌ಎನ್‌ಎಗೆ ದಾಖಲೆ ರವಾನೆ ಮಾಡಲಾಗಿದೆ. ಎಸ್ಎಲ್ಎನ್ಎ ಬೇಱವದೂ ಅಲ್ಲ ರಾಜೀವ್ ಗಾಂಧಿ ವಸತಿ ನಿಗಮ. ದಾಖಲೆಗಳು ಎಲ್ಲವೂ ಕ್ರಮ ಬದ್ಧವಾಗಿದ್ದರೆ ಮಾತ್ರವಷ್ಟೇ SLSMCಗೆ ಕಳುಹಿಸಬೇಕು. ಆದ್ರೆ, ಇಲ್ಲಿ ದಾಖಲೆ ಪರಿಶೀಲಿಸದೇ ಕಾಟಾಚಾರಕ್ಕೆ ಪ್ರಕ್ರಿಯೆ ಮುಗಿಸಿದೆ ಅನ್ನೋ ಆರೋಪ ಕೇಳಿ ಬರ್ತಾ ಇದೆ.
ಯೆಸ್, ಅದಕ್ಕೆ ಹೇಳಿದ್ದು, ಇದರ ಹಿಂದೆ ಒಬ್ಬರ ಕೈವಾಡ ಇದ್ದಂತೆ ಇಲ್ಲ. ಹಲವಾರು ಕಾಣದ ಕೈಗಳು ತನ್ನದೇ ರೀತಿಯಲ್ಲಿ ಕೆಲಸ ಮಾಡಿರೋ ಸಾಧ್ಯತೆ ಇದೆ ಅಂತ. ಯಾಕೆಂದ್ರೆ ದಾಖಲೆಗಳನ್ನು ಪರೀಶಿಲಿಸದೇ ಒಪ್ಪಿಗೆ ನೀಡಿಲು ಸಾಧ್ಯವೇ ಇಲ್ಲ. ಒಮ್ಮೆ ಪರಿಶೀಲನೆ ನಡೆಸಿದ್ರೆ ಟೆಂಡರ್‌ಗೆ ಒಪ್ಪಿಗೆಯೇ ಸಿಗಲು ಸಾಧ್ಯವೇ ಇರಲಿಲ್ಲ.
ಸಾಥ್ ಕೊಟ್ಟಿದ್ದು ಯಾರು?
ಭ್ರಷ್ಟಾಚಾರಕ್ಕೆ ಅಕ್ರಮಕ್ಕೆ ತಾಂತ್ರಿಕ ಪರಿಶೀಲನಾ ಸಮಿತಿ ಸಾಥ್ ಕೊಡ್ತಾ ಅನ್ನೋದು ಕೇಳಿ ಬರ್ತಾ ಇದೆ. ಹೌದು, ಟೆಂಡರ್ ಪರಿಶೀಲನೆಯಲ್ಲೂ ತಾಂತ್ರಿಕ ಸಮಿತಿ ಅಕ್ರಮ ಎಸಗಿದೆ. ಅದು, ಪರಿಶೀಲನೆ ಮಾಡಿದ ಬಳಿಕವೇ SLSMC ಮುಂದೆ ಟೆಂಡರ್ ಫೈಲ್ ಬಂದಿತ್ತು. ಆ ದಾಖಲೆಗಳು ಸರಿಯಾಗಿವೆ ಎಂದು SLSMCಗೆ ರವಾನೆ ಮಾಡಲಾಗಿದೆ. ಇನ್ನು ಅದ್ಯಾವಾಗ ಟೆಂಡರ್ ದಾಖಲೆ SLSMC ಮುಂದೆ ಬಂತೋ ಆವಾಗಲೇ ದೂರು ದಾಖಲಾಗಿದೆ.
ದಾಖಲೆಗಳು ಅದ್ಯಾವಾಗ ಎಸ್‌ಎಲ್‌ಎಸ್‌ಎಂಸಿ ಮುಂದೆ ಪ್ರತ್ಯಕ್ಷವಾಯ್ತೋ ಅದು ಸಾಮಾಜಿಕ ಕಾರ್ಯಕರ್ತ ಹೊನ್ನಪ್ಪ ಗಮನಕ್ಕೆ ಬಂದಿದೆ. ಟೆಂಡರ್ ನಿಯಮ ಉಲ್ಲಂಘಿಸಲಾಗಿದೆ. ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಇದರಲ್ಲಿ ಭ್ರಷ್ಟಾಚಾರ ಕಾಣಿಸುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಿ ಅಂತ ಈ ಹಿಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ದೂರು ಸಲ್ಲಿಸಿದ್ದಾರೆ.
ಕಳ್ಳಾಟ ತಡೆದಿದ್ದ ವಿಜಯಭಾಸ್ಕರ್
SLSMC ಅಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರ್ತಾರೆ
SLSMC ಅಧ್ಯಕ್ಷರಾದವರೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರ್ತಾರೆ. ಅಂದು ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ.ವಿಜಯಭಾಸ್ಕರ್ ಅಧಿಕಾರದಲ್ಲಿ ಇದ್ರು. ಇನ್ನು ಟೆಂಡರ್ ದಾಖಲೆ ಎಸ್‌ಎಲ್‌ಎಸ್‌ಎಂಸಿ ಮುಂದೆ ಬರ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ದೂರು ನೀಡಿದ್ದಾರೆ. ಅದನ್ನು ಸ್ವೀಕರಿಸಿದ ವಿಜಯಭಾಸ್ಕರ್ ಟೆಂಡರ್ ನಿಯಮಗಳನ್ನು ಉಲ್ಲಂಘನೆ ಮಾಡಿರೋದನ್ನು ಪತ್ತೆ ಹಚ್ಚಿಸಿದ್ದಾರೆ. ಇದೇ ಕಾರಣಕ್ಕೆ 2020 ಸೆ.16ರಂದು ನಡೆದ 24ನೇ SLSMC ಸಭೆಯಲ್ಲಿ ತಿರಸ್ಕಾರ ಮಾಡಿದ್ರು. ಎಲ್ಲಾ ದಾಖಲೆಗಳ ಮರುಪರಿಶೀಲನೆ ಮಾಡುವಂತೆ ಟಿಇಸಿಗೆ ಆದೇಶ ನೀಡಿದ್ರು.
ಅಕ್ರಮ ಟೆಂಡರ್ ಕೊಡಲು ಷಡ್ಯಂತ್ರ ರೂಪಿಸಿದ್ದವರಿಗೆ ಮರ್ಮಾಘಾತ
ಹೇಗಾದ್ರೂ ಪ್ರಪೋಸಲ್ ಅಪ್ರೂವಲ್ ಮಾಡಿಸಿಕೊಳ್ಳಬೇಕೆಂದು ಪಣ
ಅದು ಯಾವಾಗ ವಿಜಯಭಾಸ್ಕರ್ ಪರಿಶೀಲನೆಗೆ ಆದೇಶ ನೀಡಿದ್ರೋ ಆಕ್ರಮ ಆಟಗಾರರಿಗೆ ನಡುಕ ಶುುವಾಗಿದೆ. ಅಕ್ರಮ ಟೆಂಡರ್ ಕೊಡಲು ಷಡ್ಯಂತ್ರ ರೂಪಿಸಿದ್ದವರಿಗೆ ಮರ್ಮಾಘಾತ ಉಂಟಾಗಿದೆ. ಆದ್ರೆ, ಅವರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಹೇಗಾದ್ರೂ ಮಾಡಿ ಪ್ರಪೋಸಲ್ ಅಪ್ರೂವಲ್ ಮಾಡಿಸಿಕೊಳ್ಳಬೇಕೆಂದು ಪಣ ತೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಅಷ್ಟೊತ್ತಿಗೆ ಬಿಎಸ್ವೈ ಸರ್ಕಾರ ಹೋಗಿ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇನ್ನೊಂದೆಡೆ ಟಿ.ಎಂ.ವಿಜಯಭಾಸ್ಕರ್ ಸೇವೆಯಿಂದ ನಿವೃತ್ತರಾಗುತ್ತಾರೆ. ಆ ಜಾಗಕ್ಕೆ ಪಿ.ರವಿಕುಮಾರ್ ಬರುತ್ತಾರೆ. ಪಿ.ರವಿಕುಮಾರ್ ಮೇಲೆ ಒತ್ತಡ ತಂದು ಅನುಮೋದನೆ ಪಡೆಯಲು ಯತ್ನ ನಡೆಸುತ್ತಾರೆ. ಆದ್ರೆ, 2 ಬಂದ ಮನವಿಯನ್ನು ಪಿ.ರವಿಕುಮಾರ್ ಹಿಂದಿನ ಆದೇಶ ಪಾಲಿಸುವಂತೆ ಸೂಚನೆ ನೀಡುತ್ತಾರೆ. ಪರಿಶೀಲನೆಗೆ ಆದೇಶ ನೀಡುತ್ತಾರೆ. ಇದರಿಂದಾಗಿ ಸಂಚುಕೋರರಿಗೆ ಮತ್ತೊಂದು ಆಘಾತ ಎದುರಾಗಿ ಬಿಡುತ್ತದೆ.
ಅಲ್ಲಿಗೆ ಅಕ್ರಮಕ್ಕೆ ಮಾಡಿದ ಪ್ರಯತ್ನವೆಲ್ಲಾ ವಿಫಲವಾಯ್ತು ಅಂದುಕೊಳ್ಳಬೇಡಿ. ಯಾಕೆಂದ್ರೆ ಅಕ್ರಮಕ್ಕೆ ಮುಂದಾದವರು ಸಾಮಾನ್ಯ ವ್ಯಕ್ತಿಗಳು ಅಲ್ಲವೇ ಅಲ್ಲ. ಯಾಕೆಂದ್ರೆ, ಅದನ್ನು ಹೇಗಾದ್ರೂ ಮಾಡಿ ಒಪ್ಪಿಗೆ ಪಡೆಯಲೇಬೇಕು ಅಂತ ವಾಮಮಾರ್ಗಗಳನ್ನು ಹುಡುಕುತ್ತಾರೆ. ಅಕ್ರಮದ ಬಾಗಿಲನ್ನು ಒಪನ್ ಮಾಡಲು ಇರುವ ದಾರಿಯ ದರ್ಶನ ಆಗಿಯೇ ಬಿಡುತ್ತದೆ.
ಸಂಪುಟ ಸಭೆಯಲ್ಲಿ ಅನುಮೋದನೆ!
ವಿಶೇಷ ಅಂದ್ರೆ SLSMC ಸಮಿತಿ ಅಧ್ಯಕ್ಷರಿಂದ ತಿರಸ್ಕಾರವಾಗಿದ್ದ ಪ್ರಪೋಸಲ್ ನಾನಾ ಮಾರ್ಗಗಳನ್ನು ಬಳಸಿಕೊಂಡು ಸಂಪುಟದ ಮುಂದೆ ಪ್ರಸ್ತಾಪವಾಗುತ್ತದೆ. ಹಾಗೇ 2021ರ ಸೆಪ್ಟೆಂಬರ್ 4ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಅಸ್ತು ಸಿಗುತ್ತದೆ. ಅನುಮೋದನೆ ಸಿಕ್ಕ ಬೆನ್ನಲ್ಲೇ ಅಕ್ರಮದ ಬಾಗಿಲು ಓಪನ್ ಆಗಿ ಬಿಡುತ್ತದೆ. ಅಲ್ಲಿಯವರೆಗೆ ಒಪ್ಪಿಗೆಗಾಗಿ ಹರಸಾಹಸ ಪಡ್ತಾ ಇದ್ದವರು ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ರೇಂಜ್ ಖುಷಿಪಡ್ತಾರೆ. ತಡ ಮಾಡದೇ 87 ಏಜೆನ್ಸಿಗಳು ವರ್ಕ್ ಆರ್ಡರ್ ಕೊಟ್ಟೇಬಿಡುತ್ತಾರೆ.
ಇದನ್ನೂ ಓದಿ:PM ಆವಾಸ್ ಯೋಜನೆಯಲ್ಲಿ ಭಾರೀ ಹಗರಣ; ಫಲಾನುಭವಿಗಳು ಇಲ್ಲದೆಯೇ ಮನೆ ಕಟ್ಟೋಕೆ ಸಿದ್ಧತೆ..?
ಯಾಱರ ಮೇಲಿದೆ ಗೊತ್ತಾ ಆರೋಪ?
ಸಚಿವರು, ಅಧಿಕಾರಿಗಳ ಮೇಲೂ ಇದೆ ಆರೋಪ
ಇನ್ನು ಈ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಅನೇಕ ಜನರ ಮೇಲೆ ಆರೋಪಗಳು ಕೇಳಿ ಬಂದಿವೆ. ಅದರಲ್ಲಿ ಪ್ರಮುಖವಾಗಿ ವಸತಿ ಸಚಿವ ವಿ.ಸೋಮಣ್ಣ, ವಸತಿ ಇಲಾಖೆಯ ಹಿಂದಿನ ಸಿಎಸ್ ಎಸ್.ಡಿ.ಮೀನಾ, ವಸತಿ ಇಲಾಖೆಯ ಸಿಎಸ್ ಕೆ.ರವಿಶಂಕರ್, ಕೆಎಸ್ಡಿಬಿ ಅಧ್ಯಕ್ಷ, ಶಾಸಕ ಮಹೇಶ ಕುಮಟಳ್ಳಿ, ಕೆಎಸ್ಡಿಬಿ ಹಿಂದಿನ ಆಯುಕ್ತ ಶಿವಪ್ರಸಾದ್, ಕೆಎಸ್ಡಿಬಿ ಆಯುಕ್ತ ವೆಂಕಟೇಶ್, ಟಿಇಸಿ ನಿರ್ದೇಶಕ ಎನ್.ಪಿ.ಬಾಲರಾಜ್, ಟಿಇಸಿ ಸದಸ್ಯ ಎಚ್.ಪಿ.ಸುಧೀರ ಇಡೀ ಟೆಂಡರ್ ಪ್ರಕ್ರಿಯೆಯ ಭಾಗವಾಗಿದ್ದಾರೆ. ಹಾಗಾಗಿ ಇವರೆಲ್ಲರ ಮೇಲೂ ಈ ಅಕ್ರಮದಲ್ಲಿ ಭಾಗಿಯಾದ ಆರೋಪವಿದೆ. ಒಂದು ವೇಳೆ ಸಾಮಾಜಿಕ ಕಾರ್ಯಕರ್ತರ ಆರೋಪ ಸತ್ಯ ಅಂತಾದ್ರೆ ಇದು ಸರ್ಕಾರದ ಅಕ್ಷಮ್ಯ ಅಪರಾಧ. ಆದರೆ, ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ ಮೇಲೆ ಈ ಪ್ರಕರಣದ ಪ್ರಾಮಾಣಿಕ ತನಿಖೆಯಾಗುತ್ತಾ? ತನಿಖೆಯಾದ್ರೂ ಕೂಡ ತಪ್ಪಿತಸ್ತರನ್ನ ಗುರುತಿಸಿ ಶಿಕ್ಷೆ ಕೊಡಲಾಗುತ್ತಾ? ಇದು ಮಿಲಿಯನ್ ಡಾಲರ್ ಪ್ರಶ್ನೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನ್ಯಾಯಯುತವಾಗಿ ಟೆಂಡರ್ ಕರೆದು, ಕಾಮಗಾರಿ ಕೈಗೊಂಡಿದ್ರೆ ಖುಷಿಪಡಬಹುದಿತ್ತು. ಲಕ್ಷಾಂತರ ಜನರಿಗೆ ಆಸರೆ ಸಿಗುತ್ತಿದೆ ಅಂತ ಹೆಮ್ಮೆ ಪಡಬಹುದಿತ್ತು. ಆದ್ರೆ, ನಿಯಮಗಳನ್ನು ಗಾಳಿಗೆ ತೂರಿ ಅನುಮೋದನೆ ಪಡೆದಿರೋದು ಅಪರಾಧ. ವಸತಿ ಸಚಿವ ಸೋಮಣ್ಣ ಹಾಗೂ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಆದಿಯಾಗಿ ಹಿರಿಯ ಅಧಿಕಾರಿಗಳೇ ಇದು ಕ್ರಮಬದ್ಧವೋ ಅಕ್ರಮವೋ ಎನ್ನುವುದಕ್ಕೆ ಉತ್ತರ ನೀಡಬೇಕಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post