ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಅನ್ಸೋಲ್ಡ್ ಆಗಿರೋದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇನ್ಫ್ಯಾಕ್ಟ್ ಈ ಚರ್ಚೆಯಲ್ಲಿ ಧೋನಿ ಹೆಸರು ಕೂಡ ಜೋರಾಗಿ ಕೇಳಿ ಬರ್ತಿದೆ.
ಅನ್ಕ್ಯಾಪ್ಡ್ ಪ್ಲೇಯರ್ ಮಿಲೇನಿಯರ್ ಆಗಿದ್ರಿಂದ ಹಿಡಿದು, ಸ್ಟಾರ್ ಪ್ಲೇಯರ್ ಅನ್ಸೋಲ್ಡ್ ಆಗೋದ್ರವರೆಗೂ ಈವರೆಗಿನ IPL ಆಕ್ಷನ್ ಸಾಕ್ಷಿಯಾಗಿದೆ. ಅದರಿಂದ 2 ದಿನಗಳ ಹಿಂದೆ ನಡೆದ ಮೆಗಾ ಹರಾಜು ಪ್ರಕ್ರಿಯೆಯೂ ಹೊರತಾಗಿಲ್ಲ. ಆದ್ರೆ, ಈ ಬಾರಿ ಆದ ಅಚ್ಚರಿ ಅಭಿಮಾನಿಗಳಿಗೆ ಆದ ಶಾಕ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಅನ್ಸೋಲ್ಡ್ ಆಗಿದ್ದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ!
Why yrr 😭💔#SureshRaina | @ImRaina pic.twitter.com/FtGQuIO45o
— ABHISHEK BAMNAVAT 🇮🇳 (@CoverDrive001) February 13, 2022
ರೈನಾ ಅನ್ಸೋಲ್ಡ್ ಆಗುತ್ತಿದ್ದಂತೆ ರೈನಾ ಧೋನಿ ಬಗ್ಗೆ ಮಾತನಾಡಿರೋ ಹಳೆಯ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ರೈನಾ ‘ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿಯಲ್ಲಿ ಆಡದಿದ್ದರೆ ನಾನು ಕೂಡ ಆಡಲ್ಲ. ಈ ಸೀಸನ್ನಲ್ಲಿ ನಾವು ಗೆದ್ದರೆ ಮುಂದಿನ ಸೀಸನ್ನಲ್ಲಿ ಆಡುವಂತೆ ಅವರನ್ನು ವಿನಂತಿಸಿಕೊಳ್ಳುತ್ತೇನೆ’ ಎಂದು ರೈನಾ ಹೇಳಿದ್ದರು. ಇದೀಗ ಇದೆ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ:IPL ಹರಾಜು ಮುಗಿದ್ರೂ ರೈನಾ ಹಾಟ್ ಟಾಪಿಕ್.. ಧೋನಿ ಮೇಲೆ ಕೆಂಗಣ್ಣು ಬೀರಿದ ಫ್ಯಾನ್ಸ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post