ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗೂಂಡಾಗಳಿಗೆ ಜಗದ್ಗುರು ಇದ್ದ ಹಾಗೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆಯಾದ ಬಿಜೆಪಿ ಸರ್ಕಾರ ಇದೆ. ತ್ರಿವರ್ಣ ಧ್ವಜ ಇರೋ ಕಡೆ ಕೇಸರಿ ಬಾವುಟ ಹಾರಿಸ್ತೀನಿ ಅನ್ನೋದು ತಪ್ಪು. ಆ ಮೂಲಕ ನಾವು ರಾಷ್ಟ್ರಧ್ವಜ ಒಪ್ಪಲ್ಲ ಎಂಬ ಸ್ಪಷ್ಟವಾದ ಸಂದೇಶ ರವಾನೆ ಮಾಡಿದ್ದಾರೆ.
ಇದನ್ನೂ ಓದಿ:ಬರೀ ಧರಣಿ ಮಾಡ್ತಿದ್ರೆ ಜನ್ರ ಸಮಸ್ಯೆ ಬಗ್ಗೆ ಚರ್ಚೆ ಮಾಡೋದು ಯಾವಾಗ?.. ಸಿದ್ದರಾಮಯ್ಯಗೆ ಪ್ರಶ್ನೆ
ಅವರು ಗೂಂಡಾ ಪ್ರವೃತ್ತಿಯನ್ನು ಹೊಂದಿದ್ದು, ಕೆ.ಎಸ್.ಈಶ್ವರಪ್ಪ ಗೂಂಡಾಗಳಿಗೆ ಜಗದ್ಗುರು. ಪ್ರಚೋದನಕಾರಿಯಾದ ಕರೆಗಳ ಮೂಲಕ ಬೆದರಿಕೆ ಹಾಕುವ ಯತ್ನ ನಡೆಸುತ್ತಿದ್ದಾರೆ. ಇನ್ನು ಬಿಜೆಪಿಯವ್ರು ಇಂತಹ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿಯನ್ನು ಕೆಡಿಸುತ್ತಿದ್ದಾರೆ. ನಮ್ಮ ಪೂರ್ವಜರು ಬ್ರಿಟಿಷರ ಗುಂಡಿಗೆ ಭಯಪಟ್ಟಿಲ್ಲ. ಇನ್ನು ಇವರ ಇಂತಹ ಹೇಳಿಕೆಗೆ ನಾವು ಜಗ್ಗಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post