ನಾವು ಶಾಪಿಂಗ್ಗೆ ಹೋಗಬೇಕು ಅಂದ್ರೆ ಬ್ಯಾಗನ್ನ ತೆಗೆದುಕೊಂಡು ಹೋಗೋದನ್ನ ಕೆಲವೊಮ್ಮೆ ಮರೆತು ದುಡ್ಡು ಕೊಟ್ಟು ಬ್ಯಾಗ್ ಖರೀದಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತೆ. ಆದ್ರೆ ಇಂಗ್ಲೆಂಡ್ನಲ್ಲಿ ವಿಜ್ಞಾನಿಗಳು ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದು, ರೋಬೊಟ್ ಕ್ಯಾರಿ ಬ್ಯಾಗನ್ನ ವಿಜ್ಞಾನಿಗಳು ತಯಾರಿಸಿದ್ದಾರೆ. ಈ ರೋಬೊಟ್ ಬ್ಯಾಗ್ ನಾವು ಹೋದಲೆಲ್ಲಾ ನಮ್ಮನ್ನ ಹಿಂಬಾಲಿಸಿ ನಮಗೆ ವಸ್ತುಗಳನ್ನ ಬ್ಯಾಗ್ನಲ್ಲಿರಿಸೋಕೆ ಸಹಾಯ ಮಾಡುತ್ತೆ. ಸದ್ಯ ಈ ರೋಬೋ ಬ್ಯಾಗನ್ನ ಇಂಗ್ಲೆಂಡ್ನಲ್ಲಿ ಸಾಕಷ್ಟು ಮಂದಿ ಬಳಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post