ಉಡುಪಿ: ಭಾರೀ ವಿವಾದ ಸೃಷ್ಟಿಸಿರುವ ಸಮವಸ್ತ್ರ ಸಂಘರ್ಷದಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಸ್ಫಸ್ಟ್ನ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಈ ಮೊದಲು ಕಾಲೇಜ್ಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೆವು. ಆಗಿಲ್ಲದ ಸಮಸ್ಯೆ ಇದೀಗ ದಿಢೀರ್ನೆ ಏಕೆ ಬಂತು? ಈ ಸಂಘರ್ಷದಿಂದ ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಸದ್ಯದಲ್ಲೇ ಪರೀಕ್ಷೆಯಿದೆ. ಇದರ ಮೇಲೆ ನಮಗೆ ಫೋಕಸ್ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮನುಷ್ಯರಂತೆಯೇ ಹುಲಿಯೂ ನಗುತ್ತದೆ.. ಯಾವಾಗ? ಇದರ ಹಿಂದಿನ ರಹಸ್ಯವೇನು?
ಇನ್ನು, ನಮಗೆ ಧರ್ಮ ಮತ್ತು ಶಿಕ್ಷಣ ಎರಡು ಬೇಕು. ಯಾಕಂದ್ರೆ ಧರ್ಮ ಒಂದು ಕಣ್ಣಾದರೆ, ಶಿಕ್ಷಣ ಇನ್ನೊಂದು ಕಣ್ಣು. ಇವೆರಡರಲ್ಲಿ ಒಂದಿಲ್ಲವಾದರು ದೇಹಕ್ಕೆ ಲಕ್ವಾ ಹೊಡೆಯುತ್ತೆ, ಆಗ ಏನು ಮಾಡೋದು. ಇವತ್ತು ಹಿಜಾಬ್ ಬೇಡ ಅಂದೋವ್ರು ನಾಳೆ ಬುರ್ಖಾ ಬೇಡಾ ಅಂತಾರೆ. ನಮಗೆ ಉತ್ತಮವಾದ ಶಿಕ್ಷಣ ಕೊಡಿ ಇದೆಲ್ಲ ವಿವಾದಗಳಿಂದ ನಮ್ಮನ್ನು ಮುಕ್ತಗೊಳಿಸಿ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post