ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಂತೆ ಇದೀಗ ನೆಟ್ಟಿಗರನ್ನ ವಿದೇಶಿ ಮದುಮಗಳೊಬ್ಬಳು ಗಮನ ಸೆಳೆಯುತ್ತಿದ್ದಾಳೆ. ವಿದೇಶಿಯರಾಗಿದ್ದರೂ ದೇಸಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡಿರೋದು ಎಲ್ಲರ ಅಟ್ರ್ಯಾಕ್ಸನ್. ಹೀಗಾಗಿ ಆಕೆಯನ್ನ ಎಲ್ಲರೂ ಮೆಚ್ಚಿ ಹೊಗಳುತ್ತಿದ್ದಾರೆ.
ಅಂದ್ಹಾಗೆ ವೈರಲ್ ಆಗುತ್ತಿರುವ ಮಹಿಳೆಯ ಹೆಸರು ರಿಯಾನಾನ್ ಹ್ಯಾರಿಸ್. ಈಕೆ ಭಾರತೀಯ ಮೂಲದ ವ್ಯಕ್ತಿಯನ್ನ ಮದುವೆ ಆಗಿದ್ದಾರೆ. ವರನೊಂದಿಗೆ ಕೆಂಪು ಲೆಹೆಂಗಾದಲ್ಲಿ ದೇಸಿ ವಧುವಿನಂತೆ ಕಂಗೊಳಿಸುತ್ತಿರುವ ಈ ವಿದೇಶಿ ಮಹಿಳೆ, ಟ್ವಿಟರ್‌ನಲ್ಲಿ ಮದುವೆಯ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಫೋಟೊದಲ್ಲಿ ರಿಯಾನನ್ ಕೆಂಪು ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಭಾರತೀಯ ವಧುವಿನಂತೆಯೇ ಸೊಗಸಾದ ಆಭರಣಗಳನ್ನು ಧರಿಸಿದ್ದರು. ದಕ್ಷಿಣ ಏಷ್ಯಾದ ಡೆಪ್ಯುಟಿ ಟ್ರೇಡ್ ಕಮಿಷನರ್ ಆಗಿರುವ ಹ್ಯಾರಿಸ್ ಅವರು ಟ್ವೀಟರ್ನಲ್ಲಿ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.
4 ವರ್ಷಗಳ ಹಿಂದೆ ನಾನು ಭಾರತಕ್ಕೆ ಬಂದಾಗ ಒಂದಷ್ಟು ಕನಸುಗಳನ್ನ ಕಂಡೆ. ನನ್ನ ಜೀವನದ ಪ್ರೀತಿಯನ್ನು ಭೇಟಿಯಾಗುತ್ತೇನೆ ಮತ್ತು ಮದುವೆಯಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ರಿಯಾನನ್ ಹೇಳಿದ್ದಾರೆ.
When I arrived in #India nearly 4 years ago, I had many hopes & dreams for my time here. But never did I imagine I would be meeting & marrying the love of my life. ❤️ I found such happiness in #IncredibleIndia & so glad it will always be a home. 🇮🇳 #shaadi #livingbridge #pariwar pic.twitter.com/mfECCj3rWi
— Rhiannon Harries (@RhiannonUKGov) February 18, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post