ಬೆಂಗಳೂರು: ಥೇಟ್ ‘ಆ ದಿನಗಳು ಸಿನಿಮಾ’ ಶೈಲಿಯಲ್ಲಿ ಬೆಂಗಳೂರಿನ ಪ್ರಭಾವಿ ರಾಜಕಾರಣಿಯೊಬ್ಬರು ಮಗನ ಪ್ರಿಯತಮೆಗೆ ಧಮ್ಕಿ ಹಾಕಿಸಿರೋ ಪ್ರಕರಣ ಬೆಳಕಿಗೆ ಬಂದಿದ್ದು, ಕೇಸ್ ಸಂಬಂಧ ನಗರದ ರೌಡಿ ಶೀಟರ್ ಒಬ್ಬನನ್ನು ಪೊಲೀಸ್ ಅರೆಸ್ಟ್ ಮಾಡಿದ್ದಾರೆ.
ನಗರದ ಪ್ರಭಾವಿ ರಾಜಕಾರಣಿ ಆಗಿರೋ ವ್ಯಕ್ತಿ ಮಗನ ಪ್ರೀತಿಯನ್ನು ಒಪ್ಪದೇ, ಪುತ್ರನ ಗರ್ಲ್ಫ್ರೆಂಡ್ಗೆ ರೌಡಿಶೀಟರ್ನಿಂದ ಧಮ್ಕಿ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಗನ ಗರ್ಲ್ಫ್ರೆಂಡ್ಗೆ ಧಮ್ಕಿ ನೀಡುವಂತೆ ರಾಜಕಾರಣಿ ನೀಡಿದ ಆದೇಶದ ಮೇರೆಗೆ, ಹುಳಿಮಾವು ರೌಡಿಶೀಟರ್ ನಂದೀಶ ಎಂಬಾತ ಯುವತಿಗೆ ಧಮ್ಕಿ ಹಾಕಿದ್ದನಂತೆ.
ಅಷ್ಟೇ ಅಲ್ಲದೇ ಯುವತಿಯ ಖಾಸಗಿ ಪೊಟೋ ಹಾಗೂ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದು, ಬೆಂಗಳೂರು ಬಿಟ್ಟು ಹೋಗಿ ಇಲ್ಲವಾದಲ್ಲಿ ಪೊಟೋ ಮತ್ತು ವೀಡಿಯೋಗಳನ್ನು ವೈರಲ್ ಮಾಡೋದಾಗಿ ಎಚ್ಚರಿಕೆ ನೀಡಿದ್ದನಂತೆ. ಬೆದರಿಕೆ ಹಿನ್ನೆಲೆಯಲ್ಲಿ ಉತ್ತರ ಭಾರತದ ಮೂಲದ 25 ವರ್ಷದ ಯುವತಿ ಪ್ರಕರಣದ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ನೀಡಿದ ದೂರಿನ ಅನ್ವಯ ಪ್ರಬಲ ರಾಜಕಾರಣಿಯ ಬಲಗೈ ಬಂಟನಾಗಿರೋ ರೌಡಿಶೀಟರ್ ನಂದೀಶ್ನನ್ನ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ನೀಡಿರೋ ಹೇಳಿಕೆ ಅನ್ವಯ ರಾಜಕಾರನಿಯ ಮಗ ಸ್ವ ಇಚ್ಛೆಯಿಂದಲೇ ಯುವತಿಯೊಂದಿಗೆ ವಾಸಿಸುತ್ತಿದ್ದಾನೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post