ರಾಜಸ್ತಾನ: ವಿವಾಹವಾದ ನಂತರ ವಧುವನ್ನು ವರನ ಮನೆ ಕರೆದುಕೊಂಡು ಹೋಗುವ ಶಾಸ್ತ್ರ ಎಲ್ಲೆಡೆ ಇದ್ದೆ ಇದೆ. ಸಾಮಾನ್ಯವಾಗಿ ಬಸ್, ಕಾರ್ ಈ ರೀತಿ ಅವರವರ ಅನುಕೂಲಕ್ಕೆ ತಕ್ಕಂತೆ ವರನ ಮನೆಗೆ ಕರೆದುಕೊಂಡು ಹೋಗಿರುವುದನ್ನು ನೋಡಿದ್ದೀವಿ.
ಆದರೆ ರಾಜಸ್ತಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಹೌದು, ಕರೌಲಿ ಜಿಲ್ಲೆಯ ಕ್ಯಾಮ್ರಿ ಗ್ರಾಮದ ನಿವಾಸಿ ವಿಜೇಂದರ್ ಸೈನಿ ತನ್ನ ವಧುವನ್ನು ಕರೆದುಕೊಂಡು ಹೋಗಲು ಹೆಲಿಕಾಪ್ಟರ್‌ನಲ್ಲಿ ಆಗಮಿಸಿರುವ ಘಟನೆ ನಡೆದಿದೆ. ಮದುವೆಯಾದ ನಂತರ ವರ ವಿಜೇಂದರ್ ಸೈನಿ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆದುಕೊಂಡು ಭರತ್‌ಪುರ ಗ್ರಾಮಕ್ಕೆ ಬಂದಿಳಿದಿದ್ದಾರೆ.
ವಿಜೇಂದರ್ ಭರತ್‌ಪುರದ ನವರ್ ಗ್ರಾಮದ ನಿವಾಸಿ ಖುಷ್ಬೂ ಅವರನ್ನು ವಿವಾಹವಾದರು. ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ ಅವರು ತಮ್ಮ ಕುಟುಂಬದ ಮಗುವಿನೊಂದಿಗೆ ಆಟವಾಡುತ್ತಿದ್ದಾಗ ಮಗುವಿನ ಬಳಿ ಒಂದು ಚಿಕ್ಕ ಆಟಿಕೆ ಹೆಲಿಕಾಪ್ಟರ್ ಇತ್ತು. ಅಲ್ಲಿನ ಗ್ರಾಮಸ್ಥರೊಬ್ಬರು ರಾಧೇಶ್ಯಾಮ್ ಅವರನ್ನು ಗೇಲಿ ಮಾಡಿ ತಮ್ಮ ಮಗನ ಮದುವೆಗೆ ಹೆಲಿಕಾಪ್ಟರ್ ತರುವಂತೆ ಹೇಳಿದರು.
ಈ ಗೇಲಿಯಿಂದಾಗಿ ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ 6.5 ಲಕ್ಷ ರೂಪಾಯಿ ವ್ಯಯಿಸಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ ಸೊಸೆಯನ್ನು ಕರೆದುಕೊಂಡು ಬಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post