ಮೆಗಾ ಹರಾಜು ಮುಕ್ತಾಯಗೊಂಡು ವಾರ ಕಳೆದಿದೆ. ಸದ್ಯ ನಾಯಕನ ಹುಡುಕಾಟ ನಡೆಸುತ್ತಿರುವ ಆರ್ಸಿಬಿ ತಂಡ, ಮುಂದಿನ ನಾಯಕ ಯಾರು ಅನ್ನೋ ಸುಳಿವು ನೀಡಿದೆ. ಅವರು ಬೇರೆ ಯಾರು ಅಲ್ಲ, ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿಸ್.
ಹೌದು..! ಆರ್ಸಿಬಿ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ತಂಡದ ಡೈರೆಕ್ಟರ್ ಮೈಕ್ ಹೆಸನ್ ಈ ಸುಳಿವನ್ನು ನೀಡಿದ್ದಾರೆ. ಫಾಫ್ ಡು ಪ್ಲೆಸಿಸ್ ಒಬ್ಬ ಅನುಭವಿ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಳಗಿದ್ದಾರೆ. ಅಲ್ಲದೆ ರಾಷ್ಟ್ರೀಯ ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
Every important decision needs preparation, and the think tank planned Faf du Plessis’s auction pick well ahead of the #IPLAuction, considering the experience and the leadership value he brings to the group. Watch to find out how it all unfolded.#PlayBold #WeAreChallengers pic.twitter.com/JpnvWCcT7Y
— Royal Challengers Bangalore (@RCBTweets) February 20, 2022
ಮೆಗಾ ಹರಾಜಿಗೂ ಮುನ್ನ ಯಾರನ್ನೆಲ್ಲಾ ಖರೀದಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಪೋಸ್ಟ್ ಮಾಡಿದೆ. ಹರಾಜಿಗೂ ಮುನ್ನವೇ ಫಾಫ್ ಡು ಪ್ಲೆಸಿಸ್ರನ್ನು ಖರೀದಿಸಲು ಮ್ಯಾನೇಜ್ಮೆಂಟ್ ಪ್ಲಾನ್ ರೂಪಿಸಿತ್ತು. ಅದರಂತೆ ಡು ಪ್ಲೆಸಿಸ್ರನ್ನ ಖರೀದಿಸಿದೆ.
ಅಲ್ಲದೆ ಡು ಪ್ಲೆಸಿಸ್ರ ಆಟದ ಕೌಶಲದ ಕುರಿತು ಮಾತನಾಡಿದ್ದಾರೆ. ಐಪಿಎಲ್ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರನ್ನ ತಂಡಕ್ಕೆ ಖರೀದಿಸಲು ಮೆಗಾ ಪ್ಲಾನ್ ಹಾಕಿಕೊಂಡಿದ್ದ ರೆಡ್ ಆರ್ಮಿ, ಅವರಿಗಾಗಿ ದೊಡ್ಡ ಮೊತ್ತವನ್ನೇ ತೆಗೆದಿಡಲು ನಿರ್ಧರಿಸಿತ್ತು.
ಆದರೆ ಇದೆಲ್ಲವನ್ನೂ ನೋಡುತ್ತಿದ್ದರೆ ಡು ಪ್ಲೆಸಿಸ್ಗೆ ನಾಯಕನ ಪಟ್ಟ ಕಟ್ಟೋದು ನಿಶ್ಚಿತ ಎಂದು ಹೇಳಲಾಗ್ತಿದೆ. ಖರೀದಿಯಲ್ಲಿ ಉಳಿದ ಆಟಗಾರರಿದ್ದರೂ ಆತನ ಖರೀದಿಗೆ ಯೋಜನೆ ಹಾಕಿದ್ದು ಯಾಕೆ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post