ಟೀಮ್ ಇಂಡಿಯಾದ ಪ್ಯೂಚರ್ ಸ್ಟಾರ್ಗಳ ಅಬ್ಬರ ರಣಜಿ ಟೂರ್ನಿಯಲ್ಲಿ ಜೋರಾಗಿದೆ. ಅದರಲ್ಲೂ ಮುಂಬೈನ ಸರ್ಫರಾಜ್ ಖಾನ್ ಬ್ಯಾಟಿಂಗ್ ಅನ್ನ ಎಲ್ಲರೂ ಗುಣಗಾನ ಮಾಡ್ತಿದ್ದಾರೆ. ಇಷ್ಟೇ ಅಲ್ಲ…, ರಣಜಿ ಟೂರ್ನಿಯ ಮಿಸ್ಟರ್ ಕನ್ಸಿಸ್ಟೆಂಟ್ ಎಂದು ಹಾಡಿ ಹೊಗಳ್ತಿದ್ದಾರೆ.
ಕೊರೊನಾ ಸಂದಿಗ್ಧತೆಯ ನಡುವೆಯೂ ಆರಂಭವಾಗಿರುವ ದೇಶಿ ಕ್ರಿಕೆಟ್ನ ರಾಜ ರಣಜಿ ಟ್ರೊಫಿ ಟೂರ್ನಿಯ ಸದ್ದು ದಿನದಿಂದ ದಿನಕ್ಕೆ ಜೋರಾಗಿದೆ. ಒಂದೆಡೆ ಸ್ಟಾರ್ ಆಟಗಾರರ ಫಾರ್ಮ್ ಕಂಡುಕೊಳ್ಳುವ ಪ್ರಯತ್ನವಾದ್ರೆ, ಇನ್ನೊಂದೆಡೆ ಯುವ ಆಟಗಾರರು ದಾಖಲೆಗಳನ್ನೇ ಪುಡಿಗಟ್ಟುತ್ತಿದ್ದಾರೆ. ಕೆಲ ಆಟಗಾರರಂತೂ ಕ್ರಿಕೆಟ್ ದಿಗ್ಗಜರೇ ಬೆರಗಾಗುವಂತಾ ಪ್ರದರ್ಶನ ನೀಡ್ತಿದ್ದಾರೆ. ಅದರಲ್ಲೂ ಮುಂಬೈನ ಸರ್ಫರಾಜ್ ಖಾನ್ ಆಟಕ್ಕೆ ಶಹಬ್ಬಾಸ್ ಅಂತಿದ್ದಾರೆ.
ಮೊದಲ ಪಂದ್ಯದಲ್ಲೇ ಗಮನ ಸೆಳೆದ ಸರ್ಫರಾಜ್ ಖಾನ್.!
YES..! ಮುಂಬೈ ರಣಜಿ ತಂಡದ ಯಂಗ್ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪಡೆ 44 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಕಣಕ್ಕಿಳಿದ ಸರ್ಫರಾಜ್ ಖಾನ್ ಜವಾಬ್ಧಾರಿಯುತ ಇನ್ನಿಂಗ್ಸ್ ಕಟ್ಟಿದ್ರು. ಸೌರಾಷ್ಟ್ರ ಬೌಲಿಂಗ್ ಯುನಿಟ್ನ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಸರ್ಫರಾಜ್ ಮೊದಲ ದಿನದಾಟದಲ್ಲೇ ಶತಕ ಸಿಡಿಸಿದ್ರು. ಇನ್ನು 2ನೇ ದಿನದಾಟದಲ್ಲಿ ಅದನ್ನ ದ್ವಿಶತಕಕ್ಕೆ ಕನ್ವರ್ಟ್ ಮಾಡುವಲ್ಲೂ ಯಶಸ್ವಿಯಾದ್ರು.
ಸರ್ಫರಾಜ್ ಖಾನ್ ಇನ್ನಿಂಗ್ಸ್
ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 401 ಎಸೆತಗಳನ್ನ ಎದುರಿಸಿದ ಸರ್ಫರಾಜ್ ಖಾನ್, ಒಟ್ಟು 275 ರನ್ ಸಿಡಿಸಿದ್ರು. 68.58ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸರ್ಫರಾಜ್ ಇನ್ನಿಂಗ್ಸ್ನಲ್ಲಿ 30 ಬೌಂಡರಿ ಹಾಗೂ 7 ಸಿಕ್ಸರ್ಗಳು ಒಳಗೊಂಡಿದ್ವು.
The moment when Sarfaraz Khan reached his ton v Saurashtra in Ahmedabad pic.twitter.com/KXiwEm92wc
— Sarang Bhalerao (@bhaleraosarang) February 17, 2022
ರಣಜಿ ಟೂರ್ನಿಯ ಮಿಸ್ಟರ್ ಕನ್ಸಿಸ್ಟೆಂಟ್ ಈ ಸರ್ಫರಾಜ್..!
ಯೆಸ್..! ಒಂದು ಡಬಲ್ ಹಂಡ್ರೆಡ್ ಇನ್ನಿಂಗ್ಸ್ನಿಂದ ಸರ್ಫರಾಜ್ ಖಾನ್, ಅವರನ್ನ ದಿಗ್ಗಜರೆಲ್ಲಾ ಹೊಗಳ್ತಿಲ್ಲಾ. ಕನ್ಸಿಸ್ಟೆನ್ಸಿ ಕಾರಣದಿಂದ ಸರ್ಫರಾಜ್ ಎಲ್ಲರಲ್ಲೂ ಬೆರಗು ಮೂಡಿಸಿರೋದು. ಕಳೆದ ರಣಜಿ ಋತುವಿನಲ್ಲಿ ಸರ್ಫರಾಜ್ ಖಾನ್ ಬ್ಯಾಟ್ ಅಕ್ಷರಶಃ ರನ್ ಕೊಳ್ಳೆ ಹೊಡೆದಿತ್ತು. ಕೇವಲ 6 ಪಂದ್ಯಗಳಲ್ಲಿ 928 ರನ್ ಗಳಿಸಿದ್ದರು. 112 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳನ್ನ ಸಿಡಿಸಿದ್ದ ಯಂಗ್ ಗನ್ 154 ಕ್ಕಿಂತ ಹೆಚ್ಚಿನ ಬ್ಯಾಟಿಂಗ್ ಸರಾಸರಿಯನ್ನ ಹೊಂದಿದ್ರು.
ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಸರ್ಫರಾಜ್ ಈ ಆವೃತ್ತಿಯಲ್ಲೂ ರನ್ ಕೊಳ್ಳೆ ಹೊಡೀತಿದ್ದಾರೆ. ಈ ಸೀಸನ್ನ ಶತಕವನ್ನೂ ಸೇರಿಸಿದ್ರೆ, ಕಳೆದ 5 ರಣಜಿ ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಹೆಗ್ಗಳಿಕೆ ಸರ್ಫರಾಜ್ದ್ದಾಗಿದೆ. ಫಸ್ಟ್ ಕ್ಲಾಸ್ಗೆ ಮರಳಿದ ಬಳಿಕ ಆಡಿದ 12 ಇನ್ನಿಂಗ್ಸ್ಗಳೂ ಯುವ ಬ್ಯಾಟ್ಸ್ಮನ್ ಪಾಲಿಗೆ ಅವಿಸ್ಮರಣೀಯ ಅಂದ್ರೆ ತಪ್ಪಾಗಲ್ಲ.
ಕಳೆದ 12 ಇನ್ನಿಂಗ್ಸ್ಗಳಲ್ಲಿ ಸರ್ಫರಾಜ್
ಕಳೆದ 12 ಇನ್ನಿಂಗ್ಸ್ಗಳಿಂದ ಸರ್ಫರಾಜ್, 1288 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ , 2 ದ್ವಿಶತಕ ಹಾಗೂ ಇನ್ನೊಂದು ತ್ರಿಶತಕ ಇನ್ನಿಂಗ್ಸ್ ಸೇರಿವೆ.
ಚೋಟಾ ಸ್ಕೋರ್ ಯಾದ್ ನಹೀ ರಕ್ತಾ, ಬಡಾಯಿ ಮಾರ್ ನಾ ಪಡ್ತಾ ಹೈ.!
ಚೋಟಾ ಸ್ಕೋರ್ ಕೋಯಿ ಯಾದ್ ನಹೀ ರಕ್ತಾ, ಬಡಾಯಿ ಮಾರ್ ನಾ ಪಡ್ತಾ ಹೈ.! ಯೆಸ್..! ಇದೇ ಸರ್ಫರಾಜ್ ಖಾನ್ರ ಸಕ್ಸಸ್ನ ಮಂತ್ರ. ಸಣ್ಣ ಸ್ಕೋರ್ ಮಾಡಿದ್ರೆ, ಯಾರೂ ನಮ್ಮನ್ನ ನೆನಪಿನಲ್ಲಿ ಇಟ್ಟು ಕೊಳ್ಳಲ್ಲ. ದೊಡ್ಡ ಸ್ಕೋರ್ ಕಲೆ ಹಾಕಿದ್ರೆ ಮಾತ್ರ ಗುರುತಿಸಿಕೊಳ್ಳೋಕೆ ಸಾಧ್ಯ ಅನ್ನೋದು ಸರ್ಫರಾಜ್ ಖಾನ್ ಲೆಕ್ಕಾಚಾರ. ಹೀಗಾಗಿಯೇ ಆತ ಸದಾ ಬಿಗ್ ಸ್ಕೋರ್ ಅನ್ನೇ ಎದುರು ನೋಡ್ತಾನೆ ಸರ್ಫರಾಜ್ ಸ್ನೇಹಿತರು ಹೇಳೋ ಮಾತಾಗಿದೆ.
ಯಂಗ್ಸ್ಟರ್ಗೆ ತೆರೆಯುತ್ತಾ ಟೀಮ್ ಇಂಡಿಯಾ ಬಾಗಿಲು.?
ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸ್ತಾ ಇರೋ ಸರ್ಫರಾಜ್ ಖಾನ್ ಈಗಾಗಲೇ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ. ಇದರೊಂದಿಗೆ ಸೆಲೆಕ್ಷನ್ ಕಮಿಟಿ, ಬಿಸಿಸಿಐ ಪ್ರಮುಖರ ಗಮನವನ್ನೂ ಸೆಳೆದಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಮಿಡಲ್ ಆರ್ಡರ್ ಸಮಸ್ಯೆಯನ್ನೂ ಎದುರಿಸ್ತಾ ಇರೋದ್ರಿಂದ ಸರ್ಫರಾಜ್ ಆ ಸಮಸ್ಯೆಗೆ ಪರಿಹಾರವಾಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ, ಪೈಪೋಟಿಯ ನಡುವೆ ಅವಕಾಶ ಸಿಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.
ಸದ್ಯ ಮುಂಬೈ ಪರ ಮಿಂಚ್ತಾ ಇರೋ ಸರ್ಫರಾಜ್ ಖಾನ್, ಕಳೆದ ಕೆಲ ಸೀಸನ್ನ ಹಿಂದೆ ಉತ್ತರ ಪ್ರದೇಶ ತಂಡಕ್ಕೆ ವಲಸೆ ಹೋಗಿದ್ರು. ಅಲ್ಲಿ ಸರಿಯಾಗಿ ಅವಕಾಶ ಸಿಗದ ಕಾರಣ ಮತ್ತೆ ತವರಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರು. ಅಂದು ತೆಗೆದುಕೊಂಡಿದ್ದ ಮುಂಬೈ ತಂಡಕ್ಕೆ ಮರಳೋ ನಿರ್ಧಾರ ಇಂದು ಸಾಧನೆಗೆ ವೇದಿಕೆ ಒದಗಿಸಿದೆ. ಸಿಕ್ಕ ಅವಕಾಶದಲ್ಲಿ ಸರ್ಫರಾಜ್, ಸಾಮರ್ಥ್ಯವನ್ನೂ ನಿರೂಪಿಸಿದ್ದಾರೆ. ಇದೇ ಕನ್ಸಿಸ್ಟೆನ್ಸಿ ಮುಂದುವರೆದ್ರೆ, ಟೀಮ್ ಇಂಡಿಯಾದಲ್ಲಿ ಕಾಣಿಸಕೊಂಡರೂ ಅಚ್ಚರಿ ಪಡಬೇಕಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post