ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಮ್ಮನ್ನ ಆಯ್ಕೆ ಮಾಡದಿರೋದಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಶಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಮುಖ್ಯ ಕೋಚ್ ದ್ರಾವಿಡ್ ವಿರುದ್ಧ ತೀವ್ರ ಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ವೃದ್ಧಿಮಾನ್ ಶಾ ಆಡಿರುವ ಮಾತುಗಳಿಂದ ನನಗೆ ಬೇಸರ ಆಗಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.
ನನಗೆ ಯಾವುದೇ ಹರ್ಟ್ ಆಗಿಲ್ಲ. ನನಗೆ ವೃದ್ಧಿ ಮೇಲೆ ಗೌರವ ಇದೆ. ಅವರು ಭಾರತೀಯ ಕ್ರಿಕೆಟ್ಗೆ ನೀಡಿರುವ ಕೊಡುಗೆ ಮತ್ತು ಸಾಧನೆಯನ್ನ ಗೌರವಿಸುತ್ತೇನೆ. ನಮ್ಮಿಬ್ಬರ ಸಂಭಾಷಣೆ ಬಗ್ಗೆ ಬಂದಿರುವ ಮಾತುಗಳು ಅಲ್ಲಿಂದ. ನನ್ನ ಪ್ರಕಾರ ಅವರು ನಂಬಿಕೆ, ಪ್ರಾಮಾಣಿಕತೆಗೆ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ಭಾವಿಸಿದ್ದೇನೆ.
ರಾಹುಲ್ ದ್ರಾವಿಡ್, ಹೆಡ್ ಕೋಚ್
ಅದು ಆಟಗಾರರೊಂದಿಗೆ ನಡೆಸುವ ಸಂಭಾಷಣೆ. ನಾನು ಹೇಳುವುದನೆಲ್ಲವನ್ನೂ ಆಟಗಾರರು ಒಪ್ಪುತ್ತಾರೆ ಅಂತಾ ನಾನು ನಿರೀಕ್ಷೆ ಮಾಡಲ್ಲ. ಹಾಗೆ ನಿರೀಕ್ಷೆ ಮಾಡೋದು ಕೂಡ ತಪ್ಪು ಅಂತಾ ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಬಗ್ಗೆ ವೃದ್ಧಿಮಾನ್ ಶಾ ಏನ್ ಹೇಳಿದ್ದರು..?
ಶ್ರೀಲಂಕಾ ಸರಣಿಗೆ ಪ್ರಕಟವಾದ ಭಾರತ ಟೆಸ್ಟ್ ತಂಡದಲ್ಲಿ ಅನುಭವಿ ಆಟಗಾರರನ್ನ ಕೈಬಿಡಲಾಗಿದೆ. ಆದ್ರೆ ಇದೇ ವಿಚಾರವಾಗಿ ತಂಡದಿಂದ ಕೈ ಬಿಡಲಾದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ನೀಡಿದ ಹೇಳಿಕೆ, ಕ್ರಿಕೆಟ್ ಸರ್ಕಲ್ನಲ್ಲಿ ಭಾರೀ ಸಂಚಲನ ಮೂಡಿಸಿದೆ. ತ್ ಆಫ್ರಿಕಾ ಸರಣಿಗೆ ಡ್ರಾಪ್ ಆಗಿದ್ದ ಸಾಹಗೆ ಹೆಡ್ಕೋಚ್ ರಾಹುಲ್ ದ್ರಾವಿಡ್ ಬೇಜವಾಬ್ದಾರಿಯುತ ಸಲಹೆ ನೀಡಿದ್ದಾರೆ. ಇನ್ಮುಂದೆ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಲ್ಲ. ಮ್ಯಾನೇಜ್ಮೆಂಟ್ ಈ ಬಗ್ಗೆ ತೀರ್ಮಾನಿಸಿದೆ. ಹಾಗಾಗಿ ನಿವೃತ್ತಿ ಕುರಿತು ಯೋಚಿಸಿ ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ದ್ರಾವಿಡ್ ವಿರುದ್ಧ ಕೆಂಡಕಾರಿದ ಬೆನ್ನಲ್ಲೇ ಕ್ರಿಕೆಟರ್ ವೃದ್ಧಿಮಾನ್ ಸಾಹಗೆ ಬೆದರಿಕೆ..!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post