ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಅವರು ವಿರಾಟ್ ಕೊಹ್ಲಿ ಮತ್ತು MS ಧೋನಿ ನಡುವಿನ ನಾಯಕತ್ವದ ಶೈಲಿಯನ್ನು ಹೋಲಿಕೆ ಹೇಳಿದ್ದಾರೆ. ಶೇನ್ವ್ಯಾಟ್ಸನ್ ಅವರು , IPLನಲ್ಲಿ ಕೊಹ್ಲಿ ನಾಯಕತ್ವದಲ್ಲಿ RCB ಮತ್ತು ಧೋನಿ ನಾಯಕತ್ವದಲ್ಲಿ CSK ತಂಡದಲ್ಲಿ ಆಡಿದ್ದಾರೆ. ಹಾಗಾಗಿ ಇಬ್ಬರ ನಾಯಕತ್ವ ಹೇಗೆಂದು ತಿಳಿದಿರುವ ಈ ಆಲ್ರೌಂಡರ್, ಇಬ್ಬರ ನಾಯಕತ್ವದ ಶೈಲಿಯನ್ನ ಹೋಲಿಕೆ ಮಾಡಿದ್ದಾರೆ.
ಇಬ್ಬರ ನಾಯಕತ್ವ ಕೂಡ ಒಂದೇ ಆಗಿದ್ದು, ಮೈದಾನದಲ್ಲಿ ಒತ್ತಡಕ್ಕೆ ಸಿಲುಕಿದ ಆಟಗಾರರಿಗೆ ವಿಶ್ವಾಸ ತುಂಬುವ ಗುಣ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಆಟಗಾರನಿಗೇ ತನ್ನ ಮೇಲೆ ವಿಶ್ವಾಸ ಕುಸಿದಿದ್ರೂ, ಆತನ ಮೇಲೆ ಕೊಹ್ಲಿ – ಧೋನಿ ಅಪಾರ ನಂಬಿಕೆ ಇಟ್ಟಿರುತ್ತಾರೆ ಎಂದಿದ್ದಾರೆ.
ವಿರಾಟ್ ಒಬ್ಬ ಸೂಪರ್ ಹ್ಯೂಮನ್ ಆದ್ರೆ, ಧೋನಿ ರಕ್ತನಾಳಗಳಲ್ಲಿ ಮಂಜುಗಡ್ಡೆಯನ್ನೇ ಹರಿಸುವಂತ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಅಂದರೆ ಕೊಹ್ಲಿ ಅತಿಮಾನುಷ ವ್ಯಕ್ತಿತ್ವ ಹೊಂದಿದ್ರೆ, ಧೋನಿ ಮಂಜುಗಡ್ಡೆಯಂತೆ ಶಾಂತ ಸ್ವಭಾವ ಗುಣ ಹೊಂದಿದ್ದಾರೆ ಎಂದು ಹೊಗಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post