ಡೈರೆಕ್ಟರ್ ಸುಕುಮಾರ್ಗೆ ‘ಪುಷ್ಪ’ ದೊಡ್ಡ ಹಿಟ್ ಕೊಟ್ಟಿದೆ. ಈಗ ‘ಪುಷ್ಪ’ ಸೀಕ್ವೆಲ್ ಮೇಲೆ ಚಿತ್ರಜಗತ್ತಿನ ಕಣ್ಣು ಬಿದ್ದಿದೆ. ಸುಕುಮಾರ್ ಇಷ್ಟೋತ್ತಿಗಾಲೇ ಪುಷ್ಪ ಪಾರ್ಟ್್ 2 ಕೆಲಸದಲ್ಲಿ ಬ್ಯುಸಿ ಇರ್ತಾರೆ, ಶೂಟಿಂಗ್ ಪ್ಲಾನ್ ಮಾಡ್ತಿರ್ತಾರೆ ಅಂತ ಅಂದುಕೊಂಡಿದ್ರು ಫ್ಯಾನ್ಸ್. ಆದರೆ, ನಿರ್ದೇಶಕ ಸುಕುಮಾರ್ ನಿರೀಕ್ಷೆನೇ ಮಾಡದಂತಹ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಸುದ್ದಿ ನೋಡಿದ್ರೆ ನೀವು ಅಷ್ಟೇ ಸರ್ಪ್ರೈಸ್ ಆಗೋದು ಪಕ್ಕಾ.
ಸೌತ್ ಇಂಡಸ್ಟ್ರಿಯ ಸ್ಟಾರ್ ನಿರ್ದೇಶಕ ಸುಕುಮಾರ್ ‘ಪುಷ್ಪ ದಿ ರೈಸ್’ ಮೂಲಕ ಪ್ಯಾನ್ ಇಂಡಿಯಾ ಸಕ್ಸಸ್ ಕಂಡರು. ಈಗ ಈ ಚಿತ್ರ ಸೀಕ್ವೆಲ್ ರೆಡಿ ಮಾಡ್ತಿದ್ದಾರೆ. ಮಾರ್ಚ್ಗೆ ಶೂಟಿಂಗ್ ಸ್ಟಾರ್ಟ್ ಮಾಡಿ ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಪ್ಲಾನ್ನಲ್ಲಿದ್ದಾರೆ. ಆದ್ರೀಗ, ಟಾಲಿವುಡ್ ಮೆಗಾಸ್ಟಾರ್ ಜೊತೆ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ ಅನ್ನೋ ಬ್ಲಾಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ.
‘ಡ್ರೀಮ್ ಕಮ್ ಟ್ರು’ ಎಂದ ನಿರ್ದೇಶಕ ಸುಕುಮಾರ್
ನಿರ್ದೇಶಕ ಸುಕುಮಾರ್ ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪುಷ್ಪ ಡೈರೆಕ್ಟರ್ ”ಡ್ರೀಮ್ ಕಮ್ ಟ್ರು, ಸದ್ಯದಲ್ಲೇ ಹೆಚ್ಚಿನ ಅಪ್ಡೇಟ್ ಕೊಡ್ತೀನಿ” ಅಂತ ಪೋಸ್ಟ್ ಹಾಕಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ವಾಹ್, ಇವರಿಬ್ಬರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾನಾ ಅಂತ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ:ನಾಳೆಯಿಂದ ರಾಜ್ಯದ್ಯಾಂತ ಪ್ರೇಮ್ ‘ಪ್ರೇಮೋತ್ಸವ’ ಶುರು.. ಬಂಪರ್ ಬಾರಿಸ್ತಾರಾ ಬಾವಾ-ಬಾಮೈದ?
ಸುಕುಮಾರ್ ಮೊದಲಿನಿಂದಲೂ ಮೆಗಾಸ್ಟಾರ್ ದೊಡ್ಡ ಫ್ಯಾನ್. ಚಿರು ಜೊತೆ ಸಿನಿಮಾ ಮಾಡ್ಬೇಕು ಅಂತ ಕಾಯುತ್ತಿರುವ ನಿರ್ದೇಶಕ. ಚಾನ್ಸ್ ಸಿಕ್ರೆ ಬಿಡ್ತಾರಾ? ಹಿಟ್ ಚಿತ್ರಗಳ ಸರದಾರ ಸುಕುಮಾರ್, ಚಿರಂಜೀವಿ ಜೊತೆ ಸಿನಿಮಾ ಮಾಡಿದ್ರೆ ಅದು ಮೆಗಾ ಹಿಟ್ ಆಗೋದು ಪಕ್ಕಾ ಅನ್ನುವ ಲೆಕ್ಕಾಚಾರಗಳು ಅದಾಗಲೇ ಹುಟ್ಟಿಕೊಂಡಿದೆ. ಆದರೆ, ಈ ಲೆಕ್ಕಾಚಾರಗಳು ತುಂಬಾ ಸಮಯ ಇರಲಿಲ್ಲ ಎನ್ನುವುದು ನಿರಾಸೆಗೆ ಕಾರಣವಾಗಿದೆ.
ಹೌದು, ಮೆಗಾಸ್ಟಾರ್ ಮತ್ತು ಸುಕುಮಾರ್ ಒಟ್ಟಿಗೆ ಕೆಲಸ ಮಾಡೋದು ಪಕ್ಕಾ. ಆದರೆ, ಅದು ಫೀಚರ್ ಸಿನಿಮಾ ಅಲ್ಲ, ಅದೊಂದು ಕಮರ್ಷಿಯಲ್ ಜಾಹೀರಾತು ಎನ್ನಲಾಗಿದೆ. ಓಹ್ ಇದು ಸಿನಿಮಾ ಅಲ್ವಾ ಅಂತ ಗೊತ್ತಾದ್ಮೇಲೆ, ಅಯ್ಯೋ ಈ ಜೋಡಿ ಬೇಗ ಒಂದು ಪಿಕ್ಚರ್ ಮಾಡಲಿ ಅಂತ ಕೇಳ್ತಿದ್ದಾರೆ ಫ್ಯಾನ್ಸ್. ಇನ್ನು ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಗಾಡ್ಫಾದರ್, ಭೋಲೋ ಶಂಕರ್ ಹಾಗೂ ರವೀಂದ್ರ ಜೊತೆ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದು, ಈ ವರ್ಷ ಮೆಗಾ ಫ್ಯಾನ್ಸ್ ಭರ್ಜರಿ ಮನರಂಜನೆ ಸಿಗೋದು ಪಕ್ಕಾ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post