ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾಯ್ ನನ್ನ ಕ್ರಿಕೆಟ್ ಜೀವನದ ಆಧಾರ ಸ್ತಂಭ ಎಂದು ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಹೇಳಿದ್ದಾರೆ. ಸಿಎಸ್‌ಕೆ ತಂಡದಲ್ಲಿ ಧೋನಿ ಜತೆಗಿನ ಸುದೀರ್ಘ ಪಯಣದ ಬಗ್ಗೆ ಮೆಲುಕು ಹಾಕಿರುವ ಜಡೇಜಾ, ತಮ್ಮ ಭಾವನಾತ್ಮಕ ಕ್ಷಣಗಳನ್ನು ನೆನೆದರು.
ಈ ಸಂಬಂಧ ಮಾತಾಡಿದ ಜಡ್ಡು, ಧೋನಿ ಭಾಯ್ ನನ್ನ ಕ್ರಿಕೆಟ್ ಜೀವನದ ಆಧಾರ ಸ್ತಂಭ. ನನ್ನ ವೃತ್ತಿಜೀವನದ ಆರಂಭದಿಂದಲೂ ಧೋನಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಸಿಎಸ್‌ಕೆ ಪರ ಆಡೋ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಆಕ್ಷನ್ಗೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ಯಾಪ್ಟನ್ ಎಂ.ಎಸ್ ಧೋನಿ ಜತೆಗೆ ಸ್ಟಾರ್ ಆಲ್ರೌಂಡರ್ ರವೀಂದ್ರಾ ಜಡೇಜಾರನ್ನು ರೀಟೈನ್ ಮಾಡಿಕೊಂಡಿದೆ. ಸುಮಾರು ಬರೋಬ್ಬರಿ 10 ವರ್ಷಗಳಿಂದ ಚೆನ್ನೈ ತಂಡದ ಪರ ಆಡುತ್ತಿರೋ ಜಡೇಜಾ, ಎಂ.ಎಸ್ ಧೋನಿಗೆ ಸ್ಪೆಷಲ್ ಥ್ಯಾಂಕ್ಸ್ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post