ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ ಸದಾ ಟ್ವಿಟರ್ನಲ್ಲಿ ಆ್ಯಕ್ಟೀವ್ ಆಗಿರ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಫಾರ್ವರ್ಡ್ಸ್ ಆಗಿ ಬಂದ ಕೆಲವೊಂದು ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನ ಅವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಳ್ತಾ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ.
ಅವರ ‘ಮಂಡೇ ಮೊಟಿವೇಷನ್’ಹ್ಯಾಶ್ಟ್ಯಾಗ್ ಈಗ ತುಂಬಾ ಫೇಮಸ್. ಇದೇ ಹ್ಯಾಶ್ಟ್ಯಾಗ್ನಿಂದ ಅವರು ಈಗ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದು ತುಂಬಾ ವೈರಲ್ ಆಗುವುದರ ಜೊತೆಗೆ ಉದ್ಯಮಿ ಮಹೀಂದ್ರಾ ಅವರನ್ನ ಪೇಚಿಗೆ ಸಿಲುಕಿಸಿದೆ.
Dream big….#MondayMotivation pic.twitter.com/rHKmq0Wynq
— anand mahindra (@anandmahindra) February 28, 2022
ಮಾರ್ಫ್ ಫೋಟೋ ಪೋಸ್ಟ್ ಮಾಡಿದ ಮಹಿಂದ್ರಾ..!
ದೇಶದ ಪ್ರತಿಷ್ಠಿತ ಕಂಪನಿಗಳ ಸಮೂಹ ಸಂಸ್ಥೆ ‘ಓಬೆರಾಯ’ ಹೆಸರಿನಲ್ಲಿ ಇರುವ ರೋಡ್ ಪಕ್ಕದಲ್ಲಿನ ಹೊಟೇಲ್ ಪೋಟೋವನ್ನ ಅವರು ಶೇರ್ ಮಾಡಿದ್ದಾರೆ. ಆದರೆ ಈ ಚಿತ್ರ ಅಸಲಿಗೆ ಪೋಟೋಶಾಪ್ ತಂತ್ರಾಂಶದಲ್ಲಿ ಎಡಿಟ್ ಆಗಿರುವ ಚಿತ್ರವಾಗಿದೆ. ಇದನ್ನ ಕಂಡ ನೆಟ್ಟಿಗರು ಖ್ಯಾತ ಉದ್ಯಮಿಯನ್ನು ಸಿಕ್ಕಾಪಟ್ಟೆ ಕಾಮೆಂಟ್ಗಳ ಮೂಲಕ ಕಾಳೆಲೆಯುತ್ತಿದ್ದಾರೆ. ಇದರಿಂದ ಮಹೀಂದ್ರಾ ತೀವ್ರ ಮುಜುಗರಕ್ಕೊಳಗಾಗಿದ್ದಾರೆ..
I wonder how you can come up with humorous pics every week…
— Sagar Jain (@sagarjainmp) February 28, 2022
ಇದನ್ನೂ ಓದಿ:ದೈತ್ಯ ಸೇನೆಯ ದಾಳಿಗೆ ಬದುಕು ಕಳೆದುಕೊಂಡ ಉಕ್ರೇನಿಯರು.. 500000 ಹೆಚ್ಚು ಮಂದಿ ಪಲಾಯನ..!
ಅಸಲಿಗೆ ಈ ಪೋಟೋ ದೆಹಲಿಯಲ್ಲಿನ ರೋಡ್ ಪಕ್ಕದ ಹೊಟೇಲ್ನದ್ದಾಗಿದ್ದು ಇದರ ನಿಜವಾದ ಹೆಸರು ‘ಬೈರುನಾಥ್ ಹೊಟೇಲ್’. ಇನ್ನು ಈ ಕುರಿತು ಓಬೆರಾಯ್ ಕಂಪನಿ ಕೂಡ ಸ್ಪಷ್ಟೀಕರಣ ನೀಡಿದ್ದು ತಾವು ಯಾವುದೇ ರೀತಿಯ ಬ್ರ್ಯಾಂಚ್ಗಳನ್ನು ಹೊಂದಿಲ್ಲ ಎಂದ ಬೆನ್ನಲ್ಲೆ ಮಹಿಂದ್ರಾ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದ್ದಾರೆ.
Best part is they don't have any branch in Delhi. 😂👍🏻
— Geetikanthaa Daas (@ItsGK007) February 28, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post