ನ್ಯಾಟೋ ಗುಂಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾದ ಯುದ್ಧ ಮುಂದುವರಿಸಿದೆ. ಬರೋಬ್ಬರಿ ಒಂದು ವಾರದಿಂದ ರಷ್ಯಾ ಮಾಡುತ್ತಿರೋ ಯುದ್ಧದಿಂದ 2 ಸಾವಿರಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ. ಇನ್ನೊಂದೆಡೆ ರಷ್ಯಾ ಇಡೀ ಉಕ್ರೇನ್ ರಾಷ್ಟ್ರವನ್ನು ವಶಪಡಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ.
ಈಗಾಗಲೇ ಉಕ್ರೇನ್ ಸೇನೆಗೆ ಸೇರಿದ ಪ್ರಮುಖ ಶಸ್ತ್ರಾಸ್ತ್ರಗಳು ವಶಪಡಿಸಿಕೊಂಡಿರೋ ರಷ್ಯಾ, ತನ್ನ ವಾಯುದಾಳಿಯಲ್ಲಿ ವಿಶ್ವದ ಬೃಹತ್ ಕಾರ್ಗೋ ವಿಮಾನ ‘ಮ್ರಿಯಾ’ವನ್ನು ನಾಶಪಡಿಸಿತ್ತು. ಈಗ ಮ್ರಿಯಾ ವಿಶುವಲ್ಸ್ ರಾಷ್ಟ್ರೀಯ ಮಧ್ಯಮಗಳಿಗೆ ಸಿಕ್ಕಿವೆ. ಈ ಮ್ರಿಯಾ ವಿಮಾನ ನಾಶದಿಂದ ನೂರಾರು ಕೋಟಿ ಉಕ್ರೇನ್ ಸರ್ಕಾರಕ್ಕೆ ನಷ್ಟವಾಗಿದೆ ಎನ್ನಲಾಗಿದೆ.
ರಷ್ಯಾ 4ನೇ ದಿನದ ದಾಳಿಯಲ್ಲಿ ಉಕ್ರೇನ್ ದೇಶದ ಕನಸಿನ ವಿಶ್ವದ ಅತಿ ದೊಡ್ಡ AN-225 ಮ್ರಿಯಾ ಸರಕು ಸಾಗಣೆ ವಿಮಾನವನ್ನು ಹೊಡೆದು ಹಾಕಿವೆ. ಒಂದೆಡೆ ಉಕ್ರೇನ್ ಸರ್ಕಾರ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದರೆ, ಇನ್ನೊಂದೆಡೆ ರಾಷ್ಟ್ರೀಯ ಮಾಧ್ಯಮಗಳ ಇದರಿಂದ ನೂರಾರು ಕೋಟಿ ನಷ್ಟ ಆಗಿದೆ ಎಂದು ವರದಿ ಮಾಡಿದೆ. ಉಕ್ರೇನ್ ಭಾಷೆಯಲ್ಲಿ ಮ್ರಿಯಾ ಎಂದರೆ ಕನಸು, ಈಗ ಮ್ರಿಯಾ ನಾಶದಿಂದ ಉಕ್ರೇನ್ ಕನಸು ನುಚ್ಚುನೂರಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post