ಪ್ರಭಾಸ್ ಸಿನಿಮಾಗಳ ಬಜೆಟ್ ಆಲ್ಮೋಸ್ಟ್ 400-500 ಕೋಟಿ ಇರ್ತವೆ. ಇಷ್ಟು ದೊಡ್ಡ ಬಜೆಟ್ ಅಂದ್ಮೇಲೆ ಪ್ರೊಡ್ಯೂಸರ್ಗಳು ಅಷ್ಟೇ ದೊಡ್ಡವರು ಆಗಿಬಿರಬೇಕು ಅಲ್ವಾ? ಪ್ರಭಾಸ್-ದೀಪಿಕಾ ನಟಿಸುತ್ತಿರುವ ಚಿತ್ರವೊಂದು ಶೂಟಿಂಗ್ ಸ್ಟಾರ್ಟ್ ಮಾಡಿದೆ. ಇದೀಗ, ಈ ಚಿತ್ರಕ್ಕಾಗಿ ಜಗತ್ತಿನ ಬಹುದೊಡ್ಡ ಬಿಸಿನೆಸ್ಮ್ಯಾನ್ ಒಬ್ಬರ ಬಳಿ ಹೆಲ್ಫ್ ಕೇಳಿ ಹೋಗಿದ್ದಾರೆ ಡೈರೆಕ್ಟರ್ ನಾಗ್ ಅಶ್ವಿನ್. ಅಷ್ಟಕ್ಕೂ, ಪ್ರಭಾಸ್ ಚಿತ್ರಕ್ಕೆ ಬೇಕಾಗಿರೋ ಸಹಾಯ ಏನು?
ಪ್ರಭಾಸ್ ನಟನೆಯ ರಾಧೆಶ್ಯಾಮ್ ರಿಲೀಸ್ಗೆ ರೆಡಿಯಾಗಿದೆ. ಆದಿಪುರುಷ್ ಮತ್ತು ಸಲಾರ್ ಚಿತ್ರಗಳು ಶೂಟಿಂಗ್ ಮಾಡ್ತಿವೆ. ಈ ಚಿತ್ರಗಳ ಬಜೆಟ್ ಆಲ್ಮೋಸ್ಟ್ 400 ರಿಂದ 500 ಕೋಟಿ. ಈ ಮೂರು ಚಿತ್ರದ ಜೊತೆ ಜೊತೆಗೆ ಪ್ರಭಾಸ್-ದೀಪಿಕಾ ಪಡುಕೋಣೆ ಆ್ಯಕ್ಟ್ ಮಾಡ್ತಿರೋ ಚಿತ್ರವೂ ಚಿತ್ರೀಕರಣ ಮಾಡ್ತಿದೆ. ನಾಗ್ ಅಶ್ವಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸಹ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
‘ಪ್ರಾಜೆಕ್ಟ್K’ ಅನ್ನೋ ಹೆಸರಿನಲ್ಲಿ ಸಿನಿಮಾ ಕೆಲಸ ಮಾಡ್ತಿದ್ದು, ಇದು ಸೈನ್ಸ್ ಫಿಕ್ಷನ್ ಕಥೆ ಹೊಂದಿದ್ಯಂತೆ. ಬಹಳ ರಿಚ್ ಆಗಿ, ಅತ್ಯಾಧುನಿಕ ಟೆಕ್ನಾಲಜಿ ಬಳಸಿ ಶೂಟ್ ಮಾಡ್ತಿದ್ದಾರೆ. ಮೇಕಿಂಗ್ ಹಂತದಲ್ಲಿ ತುಂಬಾ ಎಕ್ಸ್ಪೆಕ್ಟೇಷನ್ ಹುಟ್ಟುಹಾಕಿರುವ ‘ಪ್ರಾಜೆಕ್ಟ್K’ ಈಗ ಥ್ರಿಲ್ಲಿಂಗ್ ವಿಚಾರಕ್ಕೆ ಸುದ್ದಿಯಾಗಿದೆ. ಪ್ರಭಾಸ್-ನಾಗ್ ಅಶ್ವಿನ್ ಚಿತ್ರಕ್ಕೆ ಈಗ ವಿಶ್ವದ ದೊಡ್ಡ ಬಿಸಿನೆಸ್ಮ್ಯಾನ್ಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಸಾಥ್ ಕೊಡ್ತಿದ್ದಾರೆ ಅನ್ನೋ ವಿಷ್ಯ ಹೊರಬಿದ್ದಿದೆ.
ಇದನ್ನೂ ಓದಿ: ‘ರಾಧೆ ಶ್ಯಾಮ್’ಗೆ ಸಿಕ್ತು ಬಚ್ಚನ್ ಬೂಸ್ಟರ್..ಪ್ರಭಾಸ್ ಪ್ರೇಮಕಥೆಯನ್ನ ಹೇಳ್ತಾರಂತೆ ಬಿಗ್ ಬಿ
ಆನಂದ್ ಮಹೀಂದ್ರಾ ಬಳಿ ಸಹಾಯ ಕೇಳಿದ ನಾಗ್ ಅಶ್ವಿನ್
‘ಪ್ರಾಜೆಕ್ಟ್K’ ಚಿತ್ರದ ಕಥೆ ಭವಿಷ್ಯದ ಬಗ್ಗೆ ಹೇಳುತ್ತಾ ಹೋಗುತ್ತೆ. ಅದಕ್ಕಾಗಿ ಅತ್ಯಾಧುನಿಕ ಟೆಕ್ನಾಲಜಿ ಹಾಗೂ ಫ್ಯೂಚರ್ ಕಾರ್ಗಳ ಅವಶ್ಯಕತೆ ಇದೆಯಂತೆ. ಹಾಗಾಗಿ, ದೇಶದ ಅತಿ ದೊಡ್ಡ ಕಾರ್ ಕಂಪನಿಯಾಗಿರುವ ಮಹೀಂದ್ರಾ ಬಳಿ, ‘ಪ್ರಾಜೆಕ್ಟ್K’ ಚಿತ್ರಕ್ಕಾಗಿ ಫ್ಯೂಚರ್ ಕಾರ್ ಸಿದ್ದಪಡಿಸಿಕೊಡುವಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ನಾಗ್ ಅಶ್ವಿನ್ ಮನವಿಗೆ ಆನಂದ್ ಮಹೀಂದ್ರಾ ಕೂಡ ರಿಯಾಕ್ಟ್ ಮಾಡಿ, ”ಫ್ಯೂಚರ್ ಕಾರ್ ರೆಡಿ ಮಾಡೋಕೆ ನಾವು ಹೆಲ್ಫ್ ಮಾಡಲ್ಲ ಅಂತೀವಾ” ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಆನಂದಾ ಮಹೀಂದ್ರಾ-ನಾಗ್ ಅಶ್ವಿನ್ ನಡುವಿನ ಈ ಒಪ್ಪಂದ ನೋಡಿದ್ಮೇಲೆ ‘ಪ್ರಾಜೆಕ್ಟ್K’ ಚಿತ್ರದಲ್ಲಿ ಫ್ಯೂಚರ್ ಕಾರ್ಗಳನ್ನು ನೋಡೋ ಚಾನ್ಸ್ ಸಿಗುತ್ತೆ ಅಂತ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯಕ್ಕೆ ಈ ಚಿತ್ರ ಶೂಟಿಂಗ್ ಹಂತದಲ್ಲಿದೆ. ಈಗ ಲೈನ್ ಅಪ್ ಆಗಿರೋ ಸಿನಿಮಾ ತೆರೆಕಂಡ ಮೇಲೆಷ್ಟೇ ಪ್ರಾಜೆಕ್ಟ್ K ತೆರೆಮೇಲೆ ಬರಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post