ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಭೀಕರ ದುರ್ಘಟನೆ ನಡೆದಿದ್ದು, ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತವ್ಯಕ್ತಿಯನ್ನು ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಶಹಬಾಝ್ ಅಹಮದ್ ಎಂದು ಗುರ್ತಿಸಲಾಗಿದೆ. ಮಾಲೂರು ತಾಲೂಕಿನ ಟೇಕಲ್ ರೈಲು ನಿಲ್ದಾಣದಲ್ಲಿ ಈ ಅವಘಡ ನಡೆದಿರೋದು. ತಾಂತ್ರಿಕ ದೋಷದಿಂದಾಗಿ ನಿಂತಿದ್ದ ಸ್ವರ್ಣ ಪ್ಯಾಸೆಂಜರ್ ರೈಲಿನಿಂದ ಪ್ರಯಾಣಿಕರು ಇಳಿದು ಹಳಿಗಳ ಮೇಲೆ ನಿಂತಿದ್ದರು. ಈ ವೇಳೆ ಏಕಾಏಕಿ ಬಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ ಶಹಬಾಝ್ ಸ್ಥಳದಲ್ಲೇ ಸಾವನ್ನಪಿದ್ದಾರೆ. ಅಪಘಾತದ ಭೀಕರತೆಗೆ ಮೃತನ ದೇಹ ಛಿದ್ರ ಛಿದ್ರವಾಗಿದೆ.
ಸಿಗ್ನಲ್ ಸಿಗದ ಕಾರಣ ಬೆಂಗಳೂರು ಮಾರಿಕುಪ್ಪಂ ಸ್ವರ್ಣ ಪ್ಯಾಸೆಂಜರ್ ರೈಲು ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿತ್ತು. ರೈಲಿನಲ್ಲಿದ್ದ ಪ್ರಯಾಣಿಕರು ರೈಲಿನಿಂದ ಇಳಿದು ರೈಲ್ವೆ ಟ್ರ್ಯಾಕ್ಗಳ ಮೇಲೆ ಹಾಗೂ ಪ್ಲಾಟ್ ಫಾರಂ ಗಳ ಮೇಲೆ ಕುಳಿತಿದ್ದರು.
ಈ ವೇಳೆ ಏಕಾಏಕಿ ಬಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಅಲ್ಲಿದ್ದ ಜನರಲ್ಲಿ ಗಾಬರಿ ಹುಟ್ಟಿಸಿತ್ತು. ಆಗ ಚೆಲ್ಲಾಪಿಲ್ಲಿಯಾಗಿ ಜನರು ಓಡಿದ್ದು, ಗುಂಪಿನಲ್ಲಿದ್ದ ಶಹಬಾಜ್ ಅಹಮದ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಕಂಟ್ರೋನ್ಮೆಂಟ್ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸ್ಟೇಷನ್ ಮಾಸ್ಟರ್ ಕರ್ಥವ್ಯ ಲೋಪದ ಆರೋಪ ಕೂಡ ಕೇಳಿ ಬಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post