ಪ್ರಭಾಸ್-ಪೂಜಾ ಹೆಗ್ಡೆ ನಟನೆ ‘ರಾಧೆಶ್ಯಾಮ್’ ಈ ವಾರವೇ ರಿಲೀಸ್ ಆಗ್ತಿದೆ. ರಾಧೆಶ್ಯಾಮ್ ಎಂಟ್ರಿಗೆ ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಇದೆ. ಇಂತಹ ಟೈಮ್ಮಲ್ಲಿ ವಾಹ್ ಅನ್ನೋ ಸುದ್ದಿಯೊಂದು ಹೊರಬಿದ್ದಿದೆ. ತುಂಬಾ ಜನರಿಗೆ ಗೊತ್ತಿಲ್ದೆ ಇರೋ ವಿಷ್ಯ ಏನಪ್ಪಾ ಅಂದ್ರೆ ರಾಧೆಶ್ಯಾಮ್ ಚಿತ್ರಕ್ಕೆ ರಾಜಮೌಳಿ ಡೈರೆಕ್ಷನ್ ಮಾಡಿದ್ದಾರೆ. ಸಿನಿಮಾದ ಕೊನೆಯ ಮೂಮೆಂಟ್ನಲ್ಲಿ ರಾಜಮೌಳಿ ಆಕ್ಷನ್ ಕಟ್ ಹೇಳಿರೋ ಸಂಗತಿ ಈಗ ಬಯಲಾಗಿದೆ. ಅರೇ, ರಾಧೆಶ್ಯಾಮ್ ಚಿತ್ರಕ್ಕೂ ರಾಜಮೌಳಿಗೂ ಏನ್ ಸಂಬಂಧ?
ಪ್ರಭಾಸ್-ಪೂಜಾ ಹೆಗ್ಡೆ ಆ್ಯಕ್ಟ್ ಮಾಡಿರೋ ರಾಧೆಶ್ಯಾಮ್ ಸಿನಿಮಾ ಮಾರ್ಚ್ 11ಕ್ಕೆ ವರ್ಲ್ಡ್ವೈಡ್ ತೆರೆಗೆ ಬರ್ತಿದೆ. ತುಂಬಾ ಕಡೆ ಇವತ್ತೇ ಪೇಯ್ಡ್ ಪ್ರೀಮಿಯರ್ ಶೋ ಆಗೋ ಸಾಧ್ಯತೆ ಇದೆ. ಇಂತಹ ಲಾಸ್ಟ್ ಮೂಮೆಂಟ್ನಲ್ಲಿ ರಾಧೆಶ್ಯಾಮ್ ಚಿತ್ರಕ್ಕೆ ರಾಜಮೌಳಿ ಮೇಜರ್ ಸರ್ಜರಿ ಮಾಡಿದ್ದಾರೆ ಅನ್ನೋ ವಿಷ್ಯ ಬಹಿರಂಗವಾಗಿದೆ.
ರಾಧೆಶ್ಯಾಮ್ ಚಿತ್ರಕ್ಕೆ ರಾಜಮೌಳಿ ಡೈರೆಕ್ಷನ್ ನಿಜನಾ?
ರಾಧೆಶ್ಯಾಮ್ ರಿಲೀಸ್ ಆಗುವ ಒಂದು ದಿನದ ಹಿಂದೆ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ, ಪ್ರಭಾಸ್ ನಟನೆಯ ರಾಧೆಶ್ಯಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಅರೇ, ಆಕ್ಷನ್ ಕಟ್ ಅಂದ್ರೆ ಖುದ್ದು ಸೆಟ್ಗೆ ಹೋಗಿ ಡೈರೆಕ್ಷನ್ ಮಾಡಿರೋದಲ್ಲ. ಸಿನಿಮಾ ನೋಡಿದ್ಮೇಲೆ ಕೆಲವು ಬದಲಾವಣೆಗಳನ್ನು ಮಾಡಿ ಅಂತ ಡೈರೆಕ್ಟ್ ಮಾಡಿರೋದು. ಹೀಗಾಗಿ, ರಾಧೆಶ್ಯಾಮ್ಗೆ ಕೊನೆ ಸಮಯದಲ್ಲಿ ರಾಜಮೌಳಿಯ ಬಲ ಸಿಕ್ಕಿದೆ ಅಂತ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ರಾಧೆಶ್ಯಾಮ್ ಸಿನಿಮಾ ಕಂಪ್ಲೀಟ್ ಆದ್ಮೇಲೆ ನಿರ್ದೇಶಕ ರಾಜಮೌಳಿ ಅವರಿಗೆ ಸಿನಿಮಾ ತೋರಿಸಲಾಗಿದೆ. ಲೆಜೆಂಡ್ ಡೈರೆಕ್ಟರ್ಗಾಗಿ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಿ ಚಿತ್ರ ತೋರಿಸಲಾಗಿದೆ. ರಾಧೆಶ್ಯಾಮ್ ವೀಕ್ಷಿಸಿದ ರಾಜಮೌಳಿ, ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿದರಂತೆ. ರಾಜಮೌಳಿಯ ಸೂಚನೆಯಂತೆ ಆ ಬದಲಾವಣೆಗಳನ್ನು ಮಾಡಿಕೊಂಡಿರುವ ಚಿತ್ರತಂಡ ಹತ್ತು ನಿಮಿಷ ಟ್ರಿಮ್ ಮಾಡಿದೆಯಂತೆ.
ರಾಧೆಶ್ಯಾಮ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗ್ತಿದೆ. ಪ್ಯಾನ್ ಇಂಡಿಯಾ ಆಡಿಯೆನ್ಸ್ಗೆ ಈ ಕಥೆ ಸಲ್ಲಬೇಕು ಅನ್ನೋ ಕಾರಣಕ್ಕೆ ಕೊನೆ ಸಮಯದಲ್ಲಿ ಕೆಲವು ಚೇಂಜಸ್ ಮಾಡಲು ರಾಜಮೌಳಿ ಸೂಚಿಸಿದ್ದರು ಅಂತ ವರದಿಯಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ರಾಜಮೌಳಿ ಮೇಲೆ ಪ್ರಭಾಸ್ಗೆ ಹೆಚ್ಚು ನಂಬಿಕೆ. ಇನ್ನು ಪ್ಯಾನ್ ಇಂಡಿಯಾ ಚಿತ್ರ ಅಂದ್ಮೇಲೆ ದೃಶ್ಯಬ್ರಹ್ಮನ ಸಲಹೆ ಅಗತ್ಯ. ಈ ವಿಚಾರದಲ್ಲಿ ರಾಜಮೌಳಿಯನ್ನು ಗಾಡ್ಫಾದರ್ ರೀತಿ ನೋಡೋ ಪ್ರಭಾಸ್, ಆಲ್ಮೋಸ್ಟ್ ಎಲ್ಲಾ ಚಿತ್ರಗಳಿಗೂ ಸಲಹೆ ತಗೋತಾರೆ ಅನ್ನೋ ಮಾತಿದೆ. ರಾಧೆಶ್ಯಾಮ್ ವಿಚಾರದಲ್ಲೂ ರಾಜಮೌಳಿಯ ಸಾಥ್ ಸಿಕ್ಕಿದೆ. ಸೋ, ರಾಧೆಶ್ಯಾಮ್ ಗೆಲ್ಲುತ್ತಾ? ಇನ್ನು ಒಂದೇ ದಿನದಲ್ಲಿ ಈ ಚಿತ್ರದ ಹಣೆಬರೆಹ ಬಯಲಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post