ಬಾಹುಬಲಿ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರ ತೆರೆಗೆ ಅಪ್ಪಳಿಸಿದೆ. ಭಾರತ ಹಾಗೂ ವಿದೇಶಗಳಲ್ಲಿ ಸೇರಿ ಒಟ್ಟು 8 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.
ಮೊದಲ ದಿನವೇ ಸುಮಾರು 30 ಕೋಟಿಗೂ ಹೆಚ್ಚು ಗಳಿಕೆ ಆಗುವ ಸಾಧ್ಯತೆ ಇದೆ ಅಂತ ಸಿನಿಮಾ ಪಂಡಿತರು ಹೇಳ್ತಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಚಿತ್ರ ನೋಡಿರುವ ಸಿನಿರಸಿಕರು ಪ್ರಭಾಸ್, ಪೂಜಾ ಆ್ಯಕ್ಟಿಂಗ್ಗೆ ಫಿದಾ ಆಗಿದ್ದಾರೆ. 1970ರಲ್ಲಿ ಯೂರೋಪ್ನಲ್ಲಿ ನಡೆಯುವ ಪ್ರೇಮಕಥೆ ಆಧಾರಿತ ಚಿತ್ರ ಇದಾಗಿದೆ.
ನಿರ್ದೇಶಕ ರಾಧ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು ಚಿತ್ರಕ್ಕೆ ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. ಕನ್ನಡ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಲ್ಲಿ ‘ರಾಧೆ ಶ್ಯಾಮ್’ ಚಿತ್ರ ರಿಲೀಸ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post