ಯಾವುದೋ ಒಂದೇ ಒಂದು ರೀತಿಯ ಅಜೆಂಡಾ ಇಟ್ಟಕೊಂಡು ಬಹಳ ವರ್ಷ ರಾಜಕೀಯ ಮಾಡಲು ಸಾಧ್ಯವೇ ಇಲ್ಲ. ಜನ ಬದಲಾದಂತೆ ರಾಜಕೀಯ ಪಕ್ಷಗಳ ಅಜೆಂಡಾವೂ ಬದಲಾಗಲೇಬೇಕಿದೆ. ಉತ್ತರ ಪ್ರದೇಶದಲ್ಲಿಯೂ ಅಷ್ಟೇ, ಬಿಜೆಪಿ ಹಿಂದುತ್ವದ ಜೊತೆ ಜೊತೆಗೆ ಅಭಿವೃದ್ಧಿ ಮಂತ್ರವನ್ನು ಪಠಿಸಿತ್ತು. ಹೀಗಾಗಿ ಯೋಗಿ ಎರಡನೇ ಬಾರಿಗೆ ಸಿಎಂ ಗದ್ದುಗೆ ಏರಲು ನೆರವಾಯ್ತು. ಬಟ್, ಈಗ ಯೋಗಿ 2027ರ ಗದ್ದುಗೆ ಮೇಲೂ ಕಣ್ಣಿಟ್ಟಿದ್ದಾರೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದ ಆರ್ಥಿಕಥೆಯನ್ನು 1 ಟ್ರಿಲಿಯನ್ ಡಾಲರ್‌ಗೆ ಅಂದ್ರೆ 76 ಲಕ್ಷ ಕೋಟಿಗೆ ಏರಿಸಲು ಶಪಥ ಮಾಡಿದ್ದಾರೆ.
ರಾಜಕಾರಣಿಗಳಾದವರಿಗೆ ದೂರದೃಷ್ಟಿ ಅನ್ನೋದು ಇರಬೇಕು. ಹಾಗಾದ್ರೆ ಮಾತ್ರ ಆತನ ಪಕ್ಷವೂ ಅಸ್ಥಿತ್ವ ಉಳಿಸಿಕೊಳ್ಳುತ್ತೆ, ದೇಶವೂ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎತ್ತಿದ್ದ ಕೈ….. ಆತ್ಮ ನಿರ್ಭರ ಭಾರತ್ ಸ್ಥಾಪನೆ ಮಾಡಿ ಭಾರತಕ್ಕೆ ವಿದೇಶ ಬಂಡವಾಳ ಹರಿದು ಬರುವಂತೆ ಮಾಡಿದ್ದಾರೆ. ಉದ್ಯೋಗವಕಾಶ ಹೆಚ್ಚಾಗುವಂತೆ ಮಾಡಿದ್ದಾರೆ. ಹೀಗಾಗಿಯೇ ಭಾರತ 2021-2022 ರ ಅವಧಿಯಲ್ಲಿ ದಾಖಲೆಯ 30 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. ಇದು ಭಾರತವೇ ಎದೆ ತಟ್ಟಿ ಹೇಳಿಕೊಳ್ಳುವ ಹೆಮ್ಮೆಯ ವಿಚಾರ. ಬಟ್, ಯೋಗಿ ಕೂಡ ಮೋದಿ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಉತ್ತರ ಪ್ರದೇಶದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಅಂದ್ರೆ 76 ಲಕ್ಷ ಕೋಟಿಗೆ ಏರಿಸಲು ಶಪಥ ಮಾಡಿದ್ದಾರೆ. ಮುಂದಿನ 5 ವರ್ಷದಲ್ಲಿ ಈ ಗುರಿಯನ್ನು ಮುಟ್ಟಬೇಕು ಅನ್ನೋದು ಯೋಗಿಯ ಪ್ಲಾನ್. ಹಾಗಾದ್ರೆ, ಕೇಸರಿ ಪುತ್ರನ ಕನಸನ್ನು ನನಸು ಮಾಡಲು ಯಱರು ಸಾಥ್ ನೀಡ್ತಾರೆ ಗೊತ್ತಾ?
ಯೋಗಿ ಟಾರ್ಗೆಟ್
- ಉತ್ತರ ಪ್ರದೇಶದ ಆರ್ಥಿಕತೆ 76 ಲಕ್ಷ ಕೋಟಿಗೆ ಪ್ಲಾನ್
- ಮುಂದಿನ 5 ವರ್ಷದಲ್ಲಿ ಸಾಧಿಸಲು ಯೋಗಿ ಟಾರ್ಗೆಟ್
- ಅಭಿವೃದ್ಧಿಯಲ್ಲಿ ನಂಬರ್ 1 ಸ್ಥಾನಕ್ಕೇರಿಸಲು ಯೋಗಿ ಸ್ಕೆಚ್
- ಉತ್ತರ ಪ್ರದೇಶ ಅಭಿವೃದ್ಧಿಗೆ ಶಪಥ ಮಾಡಿದ್ದಾರೆ ಯೋಗಿ
ಯೋಗಿಯ ಶಪಥ ನಿಜಕ್ಕೂ ದೇಶವೇ ಹೆಮ್ಮೆ ಪಡುವಂತಹ ವಿಚಾರ. ಉತ್ತರ ಪ್ರದೇಶ ಅಂದ್ರೆ ಹಿಂದುಳಿದ ರಾಜ್ಯ, ಗೂಂಡಾ ರಾಜ್ಯ ಅನ್ನೋ ಮಾತುಕಳು ಕೇಳಿ ಬರ್ತಾ ಇತ್ತು. ಆದ್ರೆ, ಯೋಗಿ ಕಳೆದ 5 ವರ್ಷದಲ್ಲಿ ಜನರಲ್ಲಿರೋ ಅಂತಹ ಭಾವನೆಯನ್ನು ಅಳಿಸಿ ಹಾಕಿದ್ದಾರೆ. ಅದರಲ್ಲಿಯೂ ಮುಂದಿನ 5 ವರ್ಷದಲ್ಲಿ ಉತ್ತರ ಪ್ರದೇಶವನ್ನು ಅಭಿವೃದ್ಧಿಯಲ್ಲಿ ನಂಬರ್ 1 ಸ್ಥಾನಕ್ಕೆ ಏರಿಸಲು ಪ್ಲಾನ್ ಹಾಕಿಕೊಂಡಿದ್ದಾರೆ. ಹಾಗಾದ್ರೆ, ಯೋಗಿಗೆ ಯಾವ ಯಾವ ಉದ್ಯಮಿಗಳು ನೆರವಾಗುತ್ತಾರೆ. ಪ್ರಮುಖ ಉದ್ಯಮಿಗಳು ಬಗ್ಗೆ ನೋಡೋಣ ಬನ್ನಿ.)
ಯೋಗಿಗೆ ಅಂಬಾನಿ ಸಾಥ್
- ಭಾರತದ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ
- ಪ್ರಮಾಣ ವಚನಕ್ಕೆ ಅಂಬಾನಿ ಆಹ್ವಾನಿಸಿದ ಯೋಗಿ
- ಯೋಗಿಯ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸಾಥ್
ಮುಖೇಶ್ ಧೀರೂಭಾಯಿ ಅಂಬಾನಿ. ಇವರು ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಆಗಿದ್ದಾರೆ. ವಾರ್ಷಿಕವಾಗಿ ಇವರ ನಿವ್ವಳ ಲಾಭ 93 ಶತಕೋಟಿ ಡಾಲರ್. ಏಷ್ಯಾದ, ಭಾರತದ ನಂಬರ್ ಓನ್ ಶ್ರೀಮಂತ ಉದ್ಯಮಿ ಇವರಾಗಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ತಮ್ಮ ಪ್ರಮಾಣ ವಚನಕ್ಕೆ ಅಂಬಾನಿಯವರನ್ನು ಆಹ್ವಾನಿಸಿದ್ದು, ಉತ್ತರ ಪ್ರದೇಶದಲ್ಲಿ ದೊಡ್ಡ ಮತ್ತದ ಬಂಡವಾಳ ಹೂಡುವಂತೆ ಕೊರಿಕೆ ಸಲ್ಲಿಸಲಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಅಂಬಾನಿ ಅದಕ್ಕೆ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ.
ಬಂಡವಾಳ ಹೂಡ್ತಾರೆ ಅದಾನಿ
- ಗೌತಮ್ ಅದಾನಿ ಭಾರತದ ಖ್ಯಾತ ಕೈಗಾರಿಕೋದ್ಯಮಿ
- ಅದಾನಿ ಕಂಪನಿಯ ನಿವ್ವಳ ಲಾಭ 92 ಶತಕೋಟಿ ಡಾಲರ್
- ಯೋಗಿಯ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸಾಥ್
ಅದಾನಿ ಗ್ರೂಪ್ ಸಂಸ್ಥಾಪಕರೂ, ಅಧ್ಯಕ್ಷರಾಗಿರೋ ಆಗಿರೋ ಗೌತಮ್ ಅದಾನಿ ಭಾರತದ ಖ್ಯಾತ ಕೈಗಾರಿಕೋದ್ಯಮಿ. ಅದಾನಿ ಗ್ರೂಪ್ ಪ್ರಮುಖವಾಗಿ ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ, ಲೋಕೋಪಯೋಗಿ ಕಾರ್ಯಗಳನ್ನು ಮಾಡುತ್ತದೆ. ವಿದೇಶಗಳಲ್ಲಿಯೂ ದೊಡ್ಡ ಮಟ್ಟದ ಬಂದಾವಳವನ್ನು ಈ ಕಂಪನಿ ಹೂಡಿದೆ. ಸುಮಾರು 92 ಶತಕೋಟಿ ಡಾಲರ್ ನಿವಳ ಲಾಭಾಂಶವನ್ನು ಕಂಪನಿ ಹೊಂದಿದೆ. ಇದೀಗ ಯೋಗಿಯ 1 ಟ್ರಿಲಿಯನ್ ಆರ್ಥಿಕತೆಯ ಗುರಿಗೆ ಅದಾನಿ ಕೂಡ ಸಾಥ್ ನೀಡಲಿದ್ದಾರೆ. ಮಾರ್ಚ್ 25 ರಂದು ನಡೆಯಲಿರುವ ಯೋಗಿಯ ಪ್ರಮಾಣ ವಚನಕ್ಕೂ ಅದಾನಿಗೆ ಆಹ್ವಾನ ನೀಡಲಾಗಿದೆ.)
ಕೈ ಜೋಡಿಸುತ್ತೆ ಮಹೀಂದ್ರಾ
- ಆನಂದ್ ಮಹೀಂದ್ರಾ ಬಿಲಿಯನೇರ್ ಉದ್ಯಮಿ
- ಮಹೀಂದ್ರಾ ಗ್ರೂಪ್ ಅಧ್ಯಕ್ಷರಿಗೆ ಯೋಗಿ ಆಹ್ವಾನ
- ಯೋಗಿ ಕನಸು ನನಸು ಮಾಡಲು ಮಹೀಂದ್ರಾ ಸಾಥ್
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರೋ ಆನಂದ್ ಮಹೀಂದ್ರಾ ಬಿಲಿಯನೇರ್ ಉದ್ಯಮಿ. ಮೋಟಾರ್ ವಾಹನ, ಏರೋಸ್ಪೇಸ್, ಕೃಷಿ ಉಪಕರಣ, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ರೀತಿಯ ಉದ್ಯಮದಲ್ಲಿ ಮಹೀಂದ್ರಾ ಗ್ರೂಪ್ ಬಂಡವಾಳ ಹೂಡುತ್ತಿದೆ. ಆನಂದ್ ಮಹೀಂದ್ ಅವರು ಮಹೀಂದ್ರಾ ಗ್ರೂಪ್‌ನ ಸಹ-ಸಂಸ್ಥಾಪಕ ಜಗದೀಶ್ ಚಂದ್ರ ಮಹೀಂದ್ರ ಅವರ ಮೊಮ್ಮಗ. ಇದೀಗ ಯೋಗಿ ಇವರನ್ನು ಪ್ರಮಾಣ ವಚನಕ್ಕೆ ಆಹ್ವಾನ ನೀಡಿದ್ದಾರೆ. ಉತ್ತರ ಪ್ರದೇಶದ ದೊಡ್ಡ ಮಟ್ಟದ ಬಂಡವಾಳ ಹೂಡಲು ಆನಂದ್ ಮಹೀಂದ್ರಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.)
ಯೋಗಿ ಕೈ ಹಿಡಿದ ಟಾಟಾ
- ಪ್ರಮಾಣ ವಚನಕ್ಕೆ ರತನ್ ಟಾಟಾಗೆ ಯೋಗಿ ಆಹ್ವಾನ
- ಉತ್ತರ ಪ್ರದೇಶದಲ್ಲಿ ಟಾಟಾ ಗ್ರೂಪ್‌ನಿಂದ ಬಂಡವಾಳ
- ಯೋಗಿ ಕನಸಿಗೆ ನೆರವು ನೀಡುತ್ತಾರೆ ರತನ್ ಟಾಟಾ
ದೇಶದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಮುಂಚೂಣಿಯದ್ದು ಅಂದ್ರೆ ಅದು ಟಾಟಾ ಗ್ರೂಪ್. ಯೋಗಿ ಆದಿತ್ಯನಾಥ್ ಪ್ರಮಾಣ ವಚನಕ್ಕೆ ರತನ್ ಟಾಟಾ ಆಹ್ವಾನಿಸಿದ್ದಾರೆ. ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿರೋ ಟಾಟಾ ಗ್ರೂಪ್‌ನಲ್ಲಿ ಇಂದಿಗೂ ರತನ್ ಟಾಟಾ ಮಾತು ನಡೆಯುತ್ತೆ. ಏರ್ ಇಂಡಿಯಾ, ಟಾಟಾ ಕಮ್ಯುನಿಕೇಷನ್ಸ್, ಸ್ಟೀಲ್ಸ್ ಸೇರಿದಂತೆ ಹಲವಾರು ಉದ್ಯಮದಲ್ಲಿ ಟಾಟಾ ಗ್ರೂಪ್ ತೊಡಗಿಕೊಂಡಿದೆ. ಮುಂದಿನ 5 ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಲು ಟಾಟಾ ಗ್ರೂಪ್ ಗ್ರಿನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
76 ಲಕ್ಷ ಕೋಟಿ ರೂಪಾಯಿ ಆರ್ಥಿಕತೆ ಸಾಧ್ಯನಾ ?
ಹೇಗಿದೆ ಗೊತ್ತಾ ಉತ್ತರ ಪ್ರದೇಶದ ಆರ್ಥಿಕ ಲೆಕ್ಕಾಚಾರ?
ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಿಲ್ಲ ಅನ್ನೋದೆನೋ ಸತ್ಯ. ಆದ್ರೆ, ಉತ್ತರ ಪ್ರದೇಶದ ಕಳೆದ 5 ವರ್ಷದ ಬೆಳವಣಿಗೆ ನೋಡಿದ್ರೆ ಅನುಮಾನ ಬರೋದು ಸಹಜ. ಹೌದು, ಕಳೆದ 5 ವರ್ಷದಲ್ಲಿ ಉತ್ತರ ಪ್ರದೇಶದ ಆರ್ಥಿಕತೆ 9 ಲಕ್ಷ ಕೋಟಿಯಿಂದ 18 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದ್ರೆ ಡಬಲ್ ಆಗಿದೆ. ಈಗ ಇರೋ 18 ಲಕ್ಷ ಕೋಟಿ ಆರ್ಥಿಕತೆ ಮುಂದಿನ 5 ವರ್ಷದಲ್ಲಿ 76 ಲಕ್ಷ ಕೋಟಿಗೆ ಏರಿಕೆಯಾಗಬೇಕು. ಹೀಗಾಗಿ ಯೋಗಿ ಟಾರ್ಗೆಟ್ ಅಷ್ಟು ಸುಲಭದಲ್ಲಿ ಇಲ್ಲ ಅನ್ನೋದು ಸತ್ಯ. ಇನ್ನು ಉದ್ಯಮಿಗಳನ್ನು ದೊಡ್ಡ ಪ್ರಮಾಣದಲ್ಲಿ ಆಹ್ವಾನ ನೀಡಿದ್ರೆ ಅವರಿಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸಬೇಕಾಗುತ್ತೆ. ಅದರಲ್ಲಿ ಪ್ರಮುಖವಾಗಿ ಬರೋದು ಲ್ಯಾಂಡ್ ಸಮಸ್ಯೆ. ಒಮ್ಮೆ ರೈತರ ಭೂಮಿಯ ಭೂಸ್ವಾಧೀನಕ್ಕೆ ಪ್ರಯತ್ನಿಸಿದ್ರೆ ಆಟೋಮೆಟಿಕ್ ಅಂತಹ ಸರ್ಕಾರ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ಹೀಗಾಗಿ ಯೋಗಿ ಟಾರ್ಗೆಟ್ ಸುಲಭದ್ದಲ್ಲ.
ಇಲ್ಲಿ ಕ್ಲಿಕ್ ಮಾಡಿ: PART-1 ಎರಡನೇ ಬಾರಿ ಸಿಎಂ ಆಗಿ ನಾಳೆ ಅಧಿಕಾರ; ಯೋಗಿ ಮಾಡಿರೋ ಶಪಥ ಏನ್ಗೊತ್ತಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post