ದಿ ಗ್ರೇಟ್ ಡೈರೆಕ್ಟರ್ ರಾಜಮೌಳಿಯ ರೌದ್ರ ರಣ ರುಧಿರ (RRR) ಚಿತ್ರ ಗ್ರ್ಯಾಂಡಾಗಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ಬರೋಬ್ಬರಿ 8000 ಸ್ಕ್ರೀನ್ಗಳಲ್ಲಿ RRR ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ರಾತ್ರಿ 12 ಗಂಟೆಯಿಂದಲೇ ಮೊದಲ ಶೋ ಶುರುವಾಗಿದ್ದು, ಬೆಂಗಳೂರಿನ ಸುತ್ತಮುತ್ತ ಒಟ್ಟು 25 ರಿಂದ 30 ಸ್ಕ್ರೀನ್ಗಳಲ್ಲಿ ಮಧ್ಯರಾತ್ರಿಯಿಂದಲೇ ಶೋ ಪ್ರಾರಂಭವಾಗಿದೆ. ಇಂದು ಬೆಳಗ್ಗೆ 4 ಗಂಟೆಯಿಂದ ಬಹಳಷ್ಟು ಕಡೆ ಮೊದಲ ಶೋ ಶುರುವಾಗಿದೆ. ಬೆಂಗಳೂರಿನಲ್ಲೊಂದೇ ದಿನಕ್ಕೆ 800 ಕ್ಕೂ ಅಧಿಕ ಶೋ ಆಗುವ ಸಾಧ್ಯತೆಗಳಿವೆ.
ಆರ್ಆರ್ಆರ್ ಚಿತ್ರಕ್ಕೆ ಅದ್ಧೂರಿ ರೆಸ್ಪಾನ್ಸ್, ಬಿಗ್ ಓಪನಿಂಗ್ ಸಿಕ್ಕಿದೆ. ರಾಜ್ಯದಲ್ಲಿ ತ್ರಿಬಲ್ ಆರ್ ಸಿನಿಮಾದ ಅಬ್ಬರ ಜೋರಾಗಿದೆ. ಅಭಿಮಾನಿಗಳಿಂದ ನಟರ ಕಟೌಟ್ಗಳಿಗೆ ಹಾಲಿನ ಅಭೀಷೇಕ ಮಾಡಿ ಹರ್ಷೋದ್ಘಾರದಲ್ಲಿ ಮುಳುಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post