ಇಂದಿಗೂ ಕೂಡ ಕನ್ನಡಿಗರಿಗೆ.. ಕಲಾಪ್ರೇಮಿಗಳಿಗೆ ಡಾ.ರಾಜ್ಕುಮಾರ್ ಅನ್ನೋ ಹೆಸರು ಎಂದೂ ಮರೆಯಾಗದ ನಕ್ಷತ್ರ. ಅಸಂಖ್ಯೆ ಜನರು, ದೇಶಾದ್ಯಂತ ಇರೋ ಸೆಲೆಬ್ರಿಟಿಗಳು ಡಾ.ರಾಜ್ಕುಮಾರ್ ಬದುಕಿದ್ದಾಗ, ಅವರನ್ನು ಭೇಟಿಯಾಗಬೇಕು ಎಂದು ಬಯಸುತ್ತಿದ್ರು. ಅದು ದಿ ಗ್ರೇಟ್ ಆರ್ಟಿಸ್ಟ್ಗಳಾದ ಅಮಿತಾಭ್ ಬಚ್ಚನ್ ಇರಬಹುದು, ದಿಲೀಪ್ ಕುಮಾರ್ ಇರಬಹುದು, ಸುನೀಲ್ದತ್, ಶತ್ರುಘ್ನ ಸಿನ್ಹಾ, ವಿನೋದ್ ಖನ್ನಾ ಮುಂತಾದವರು ಡಾ.ರಾಜ್ಕುಮಾರ್ ಜೊತೆ ಭೇಟಿಯಗಿ ರೋಮಾಂಚನ ಪಟ್ಟಿದ್ರು.
ನಿಮಗೆ ಇನ್ನೊಂದು ವಿಷಯ ಗೊತ್ತಾ? ಈಗ ಅಧೀರನಾಗಿ ಕೆಜಿಎಫ್-2 ಮೂಲಕ ಕನ್ನಡ ಇಂಡಸ್ಟ್ರೀಗೆ ಬಂದಿರೋ ಸಂಜಯ್ ದತ್, ಅಂದೇ ಡಾ.ರಾಜ್ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಪುಳಕಿತರಾಗಿದ್ರು. ಕಾರ್ಯಕ್ರಮವೊಂದರಲ್ಲಿ ಯಂಗ್ ಸಂಜಯ್ ದತ್ ಅಣ್ಣಾವ್ರನ್ನ ಭೇಟಿಯಾಗಿ ಕೈ ಕೂಡ ಕುಲಕಿದ್ರು.
ಇದೇ ಸಂಜಯ್ ದತ್ ನಿನ್ನೆ, ಮತ್ತೊಂದು ಬಾರಿ ಡಾ.ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ರು. ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಅತ್ಯಂತ ದುಃಖವನ್ನು ಕೂಡ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ ಸಂಜಯ್ದತ್ ಅವರು ಅಣ್ಣಾವ್ರನ್ನ ಭೇಟಿಯಾಗಿದ್ದ ಫೋಟೋವನ್ನು ರಾಘವೇಂದ್ರ ರಾಜ್ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ನೆನ್ನೆ ಅಪ್ಪು ನಿವಾಸದಲ್ಲಿ ಶ್ರೀ ಸಂಜಯ್ ದತ್ತ್ ಅವರನ್ನು ಭೇಟಿಯಾದ ಸಮಯ. pic.twitter.com/1q92sNNBdT
— Raghavendra Rajkumar (@RRK_Official_) March 28, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post