ಚೆನೈ : ಫುಡ್ ಡೆಲಿವರಿ ಕಂಪನಿಗಳ ಬಾಯ್ಸ್ಗಳಿಂದ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಟ್ರಾಫಿಕ್ ನಿಯಮ ಪಾಲಿಸದೇ ಬೇಕಾಬಿಟ್ಟಿಯಾಗಿ ವಾಹನ ಸಂಚಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೇ ದಿನ ಫುಡ್ ಡೆಲಿವರಿ ಬಾಯ್ಸ್ಗಳ ವಿರುದ್ಧ 978 ಕೇಸ್ ದಾಖಲಿಸಲಾಗಿದೆ.
ಅತೀ ವೇಗದಲ್ಲಿ ಆಹಾರ ತಲುಪಿಸಲು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾಗಿದೆ. ಇನ್ನೂ ಚೆನ್ನೈ ಪೊಲೀಸರಿಂದ ಬರೋಬ್ಬರಿ 1 ಲಕ್ಷ 35 ಸಾವಿರದಷ್ಟು ದಂಡ ವಸೂಲಿ ಮಾಡಲಾಗಿದೆ. ಫುಡ್ ಡೆಲಿವರಿ ಕಂಪನಿಗಳು 20 ರಿಂದ 25 ನಿಮಿಷದಲ್ಲಿ ಫುಡ್ ಡೆಲಿವರಿ ಆಗಬೇಕು ಎಂದು ಕಂಪನಿಗಳು ಒತ್ತಡ ಹೇರಿರುವುದರಿಂದ ಈ ಎಲ್ಲಾ ನಿಯಮಗಳು ಬ್ರೇಕ್ ಮಾಡಿರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಾರ್ಚ್ 30ನೇ ತಾರೀಕಿನಂದು ಪ್ರಕರಣ ದಾಖಲಾಗಿವೆ.
ಯಾಱರ ವಿರುದ್ಧ ಎಷ್ಟು ಕೇಸ್..?
ಸ್ವಿಗ್ಗಿ 450 ಕೇಸ್
ಡೊನ್ಜೋ 188 ಕೇಸ್
ಜೊಮ್ಯಾಟೋ 278 ಕೇಸ್
ಇನ್ನಿತರ 62
ಯಾವ್ಯಾವ ನಿಯಮ ಉಲ್ಲಂಘನೆ.?
ಸಿಗ್ನಲ್ ಜಂಪ್ 581
ಸ್ಟಾಪ್ ಲೈನ್ 131
ಹೆಲ್ಮೆಟ್ ಇಲ್ಲದೆ ಸಂಚಾರ 115
ತಪ್ಪು ದಾರಿ 70
ಫೋನ್ ಬಳಸುತ್ತಾ ಸಂಚಾರ 20
ಒವರ್ ಸ್ಪಿಡ್ 61
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post