ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಸಿನಿಮಾ ಮಾಡಿದ್ರೆ ಖೇಲ್ ಕತಾಮ್. ಪ್ರೊಡ್ಯೂಸರ್ಸ್ ಎರಡೆರಡು ಸಲ ಯೋಚನೆ ಮಾಡ್ಬೇಕು. ಪ್ರಭಾಸ್ಗೆ ಇನ್ಮುಂದೆ ಸಕ್ಸಸ್ ಸಿಗೋದು ತುಂಬಾ ಕಷ್ಟ ಅನ್ನೋ ಸುದ್ದಿಯೊಂದು ಈಗ ಡಾರ್ಲಿಂಗ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
‘ಬಾಹುಬಲಿ’ ಆದ್ಮೇಲೆ ಎರಡು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರು ನಟ ಪ್ರಭಾಸ್. ಆದರೆ ಆ ಎರಡೂ ಚಿತ್ರಗಳು ನಿರೀಕ್ಷೆಯಂತೆ ಗೆಲುವು ಕಾಣಲಿಲ್ಲ. ಹಾಕಿದ ಬಂಡವಾಳವನ್ನು ವಾಪಸ್ ತೆಗೆದುಕೊಳ್ಳೋಕೆ ಹರಸಾಹಸ ಪಡಬೇಕಾಯಿತು. ಬ್ಯಾಕ್ ಟು ಬ್ಯಾಕ್ ಎರಡು ಸೋಲು ಪ್ರಭಾಸ್ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಬರಿ ನಂಬಿಕೆ ಮಾತ್ರವಲ್ಲ ಡಾರ್ಲಿಂಗ್ ಫ್ಯೂಚರ್ ಬಗ್ಗೆಯೂ ನೆಗಿಟಿವ್ ವಿಷ್ಯಗಳು ಹುಟ್ಟಿಕೊಂಡಿದೆ. ಪ್ರಭಾಸ್ ಫ್ಲಾಪ್ ಸಿನಿಮಾ ಕೊಟ್ರು ಅಂತ ಆಫರ್ಗಳೇನು ಕಮ್ಮಿಯಾಗಿಲ್ಲ. ಇನ್ನು ಐದು ವರ್ಷಕ್ಕೆ ಆಗೋವಷ್ಟು ದೊಡ್ಡ ಪ್ರಾಜೆಕ್ಟ್ಗಳು ಡಾರ್ಲಿಂಗ್ ಕೈಯಲ್ಲಿದೆ. ಆದರೆ, ಆ ಸಿನಿಮಾಗಳು ಗೆಲ್ಲುತ್ತಾ? ಬಾಕ್ಸ್ ಆಫೀಸ್ನಲ್ಲಿ ಧಮಾಕ ಮಾಡುತ್ತಾ? ಅನ್ನೋ ಪ್ರಶ್ನೆ ಈಗ ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ತೆಲುಗಿನ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ. ಪ್ರಭಾಸ್ ಕುರಿತಾದ ವೇಣು ಸ್ವಾಮಿಯ ಭವಿಷ್ಯ ಈಗ ಟಾಕ್ ಆಫ್ ದಿ ಟೌನ್ ಆಗಿದೆ.
ತೆಲುಗಿನ ಖ್ಯಾತ ನಟರ ಬಗ್ಗೆ, ರಾಜಕಾರಣಿಗಳ ಬಗ್ಗೆ ಭವಿಷ್ಯ ಹೇಳೋ ಮೂಲಕ ವಿವಾದಕ್ಕೆ ಕಾರಣವಾಗಿರೋ ಹಲವು ಉದಾಹರಣೆಗಳು ವೇಣು ಸ್ವಾಮಿ ಹೆಸರಿನಲ್ಲಿದೆ. ವೇಣು ಸ್ವಾಮಿಯ ಭವಿಷ್ಯ ಟ್ರೋಲ್ ಆಗಿರೋ ಸಂಗತಿಗಳು ಇವೆ. ಆದರೂ ಈ ಜ್ಯೋತಿಷಿಯ ಭವಿಷ್ಯ ಕೆಲವೊಮ್ಮೆ ಸತ್ಯವಾಗಿ ಅಚ್ಚರಿ ಉಂಟು ಮಾಡಿರೋದು ಇದೆ. ಹಾಗಾಗಿ, ಪ್ರಭಾಸ್ ವಿಷ್ಯಕ್ಕೆ ಈಗ ವೇಣು ಸ್ವಾಮಿ ಹೇಳಿರೋ ಭವಿಷ್ಯದ ಬಗ್ಗೆ ಸಹಜವಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಪ್ರಭಾಸ್ ಜೊತೆ ಸಿನಿಮಾ ಮಾಡ್ಬೇಕು ಅಂದ್ರೆ ನಿರ್ಮಾಪಕರು ಎರಡ್ಮೂರು ಸಲ ಯೋಚಿಸಬೇಕು.
ಡಾರ್ಲಿಂಗ್ ನಟಿಸೋ ಸಿನಿಮಾಗಳು ಗೆಲ್ಲುವುದು ಕಷ್ಟ, ಬಾಕ್ಸ್ ಆಫೀಸ್ನಲ್ಲಿ ಹಣ ಮಾಡೋದಂತು ದೂರದ ಮಾತು ಅಂತ ವೇಣು ಸ್ವಾಮಿ ಫ್ಯೂಚರ್ ಹೇಳಿಬಿಟ್ಟಿದ್ದಾರೆ. ಕಾಂಟ್ರುವರ್ಸಿ ಅಸ್ಟ್ರಲಾಜರ್ ಹೇಳೋದು ನಿಜ ಆಗಿಬಿಡುತ್ತಾ ಅಂತ ಕೆಲವು ಫಾಲೋವರ್ಸ್ ಚಿಂತಿಸುತ್ತಿದ್ರೆ, ಇನ್ನು ಕೆಲವರು ಹೇ ವೇಣು ಸ್ವಾಮಿ ಭವಿಷ್ಯಕ್ಕೆ ಗೋಲಿಮಾರ್ ಅಂತಿದ್ದಾರೆ. ಅಂದ್ಹಾಗೆ, ಈ ವೇಣು ಸ್ವಾಮಿ ಹೀಗೆ ಸ್ಟಾರ್ಗಳ ಭವಿಷ್ಯ ಹೇಳಿ ಸುದ್ದಿಯಾಗಿರೋದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿಷ್ಯದಲ್ಲೂ ಬ್ರೇಕಿಂಗ್ ನ್ಯೂಸ್ ಆಗಿದ್ದರು. ಅಷ್ಟೇ ಏಕೆ, ಸಮಂತಾ ಮತ್ತು ನಾಗಚೈತನ್ಯ ಮದ್ವೆ ಆದಾಗಲೂ ಈ ಜೋಡಿ ಡಿವೋರ್ಸ್ ಮಾಡಿಕೊಳ್ತಾರೆ ಅಂತ ಹೇಳಿದ್ರು.
ಈ ವಿಷ್ಯದಲ್ಲಿ ವೇಣು ಸ್ವಾಮಿಯ ಭವಿಷ್ಯ ನಿಜ ಬೇರೆ ಆಗೋಯ್ತು. ಹಾಗಾಗಿ, ಪ್ರಭಾಸ್ ವಿಚಾರದಲ್ಲೂ ನಿಜ ಆಗುತ್ತಾ ಅಂತ ಸಣ್ಣ ಮಟ್ಟದ ಲೆಕ್ಕಾಚಾರ. ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಚಿತ್ರದಲ್ಲೂ ಆ್ಯಕ್ಟ್ ಮಾಡ್ತಿದ್ದಾರೆ. ನಾಗ್ ಅಶ್ವಿನ್ ಜೊತೆ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ನಡುವೆ ‘ತ್ರಿಬಲ್ ಆರ್’ ನಿರ್ಮಾಪಕ ಡಿವಿವಿ ದಾನಯ್ಯ ಜೊತೆನೂ ಒಂದು ಸಿನಿಮಾಗೆ ಕಮಿಟ್ ಆಗಿದ್ದಾರೆ. ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರ ಗೆಲುವಿನ ಸವಾರಿ ಮಾಡುತ್ತೆ, ಯಾವ ಚಿತ್ರ ಫ್ಲಾಪ್ ಆಗುತ್ತೆ ಅನ್ನೋದು ಈಗ ಡಿಬೇಟ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post