ಮಾಜಿ ಕಾರ್ಪೊರೇಟರ್ ಪತಿ ಶೋಧಕ್ಕೆ ವಿಶೇಷ ತಂಡ
ಬೆಂಗಳೂರಲ್ಲಿ ಜೆಡಿಎಸ್ ಮಾಜಿ ಕಾರ್ಪೋರೇಟರ್ ಪತಿ ನಾಪತ್ತೆಯಾಗಿದ್ದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಬಿನ್ನಿಪೇಟೆ ವಾರ್ಡ್ನ ಮಾಜಿ ಕಾರ್ಪೋರೇಟರ್ ಐಶ್ವರ್ಯಾ ಪತಿ ಲೋಹಿತ್ ಕಾಣಿಯಾಗಿದ್ರು. ಇದೀಗ ನಂದಗುಡಿ ಬಳಿಯ ಹಳೇವೂರಿನಲ್ಲಿ ಲೋಹಿತ್ನ ಐ10 ಕಾರು ಪತ್ತೆಯಾಗಿದೆ. ಕಾರಿನ ಬಳಿ ರಕ್ತದ ಗುರುತುಗಳು ಇದ್ದು, ಲೋಹಿತ್ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಹಲವು ಬೈಕ್ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದ ಲೋಹಿತ್, ಕಮಲಾನಗರದಲ್ಲಿ ಬೈಕ್ ಶಾಪ್ ಕೂಡ ಇಟ್ಟಿದ್ರು ಎನ್ನಲಾಗಿದೆ. ಸದ್ಯ 35ಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿರೋ ಪೊಲೀಸರು ಲೋಹಿತ್ ಪತ್ತೆಯಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇಂಧನ ಬೆಲೆಯೇರಿಕೆ ಸಮರ್ಥಿಸಿಕೊಂಡ ಡಾ.ಅಶ್ವತ್ಥ್ ನಾರಾಯಣ್
ಇಂಧನ ದರ ಏರಿಕೆ ಬಗ್ಗೆ ಸಚಿವ ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ. ವಿಶ್ವವ್ಯಾಪಿ ಯುದ್ಧದ ಛಾಯೆಯಿದೆ. ಸುತ್ತಮುತ್ತಲ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ ಅಂತಾ ನೋಡಿ ಎಂದಿದ್ದಾರೆ. ಭಾರತ ನೆಮ್ಮದಿ ಶಾಂತಿಯಿಂದ ಇದೆ. ಈ ಮೂಲಕ ಇಡೀ ಪ್ರಪಂಚವೇ ನಮ್ಮ ಕಡೆ ತಿರುಗಿ ನೋಡುವ ಹಾಗೇ ಮಾಡಿದೆ ಎಂದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಯೇರಿಕೆಯಾಗಿದೆ ಎಂದಿರುವ ಅವರು, ಬೆಲೆಯೇರಿಕೆಯಿಂದ ಸ್ವಲ್ಪ ತೊಂದರೆಯಾಗಿದೆ. ಕಾಲ ಕ್ರಮೇಣ ಸರಿಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನವ ವೃಂದಾವನ ಗಡ್ಡಿಗೆ ಸಂಸದ ತೇಜಸ್ವಿಸೂರ್ಯ ಭೇಟಿ
ಕೊಪ್ಪಳ ಜಿಲ್ಲೆ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡಿಗೆ ಸಂಸದ ತೇಜಸ್ವಿಸೂರ್ಯ ಭೇಟಿ ನೀಡಿದ್ರು. ಬೋಟ್ ಮೂಲಕ ನದಿ ದಾಡಿದ ತೇಜಸ್ವಿ ಸೂರ್ಯಗೆ ಬಿಜೆಪಿ ಯುವಮೋರ್ಚಾದ 40 ಜನ ಪದಾಧಿಕಾರಿಗಳು ಸಾಥ್ ನೀಡಿದ್ರು. ಭಾರತ ದರ್ಶನ ಯಾತ್ರೆ ಭಾಗವಾಗಿ ಬೃಂದಾವನಕ್ಕೆ ತೇಜಸ್ವಿ ಸೂರ್ಯ ಭೇಟಿ ನೀಡಿದ್ರು. ಇದೇ ವೇಳೆ ಹನುಮಂತನ ಜನ್ಮಸ್ಥಳ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ರಾಮಾಯಣ ಆಧಾರದ ಮೇಲೆ ಹನುಮನ ಜನ್ಮ ಸ್ಥಳ ಕರ್ನಾಟಕದ ಕಿಷ್ಕಿಂದಾ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದಿದ್ದಾರೆ.
ರಾಜಪಕ್ಸೆ ರಾಜೀನಾಮೆ ತಳ್ಳಿ ಹಾಕಿದ ಲಂಕಾ ಪ್ರಧಾನಿ ಕಚೇರಿ
ಆರ್ಥಿಕ ಬಿಕ್ಕಟ್ಟು ದ್ವೀಪ ರಾಷ್ಟ್ರವನ್ನ ಆರಾಜಕತೆಯತ್ತ ಕೊಂಡೊಯುತ್ತಿದೆ. ತುತ್ತು ಅನ್ನ, ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಶ್ರೀಲಂಕಾ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶದ ಜ್ವಾಲೆ ಸ್ಫೋಟಿಸಿದೆ. ಆರ್ಥಿಕ ಬಿಕ್ಕಟ್ಟಿಗೆ ಕಂಗಾಲಾಗಿರೋ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಕುರ್ಚಿಗೂ ಕುತ್ತು ತಂದಿದೆ. ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ದೇಶದ ಜನ ಹಾಗೂ ವಿರೋಧ ಪಕ್ಷದ ಒತ್ತಾಯಕ್ಕೆ ಮಣಿದು ರಾಜಪಕ್ಸೆ ರಾಜೀನಾಮೆ ಸಲ್ಲಿಸಿದ್ದಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಈ ಸುದ್ದಿಯನ್ನ ಶ್ರೀಲಂಕಾ ಪ್ರಧಾನಿ ಕಚೇರಿ ತಳ್ಳಿ ಹಾಕಿದೆ..
ರಾಜಪಕ್ಸೆ ಸಂಪುಟದ 26 ಸಚಿವರು ರಾಜೀನಾಮೆ!
ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಸುದ್ದಿ ನಡುವೆ ಸಂಪುಟದ ಎಲ್ಲಾ 26 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಕಳೆದ ರಾತ್ರಿ ನಡೆದ ಮೀಟಿಂಗ್ ಬಳಿಕ ಎಲ್ಲಾ ಸಚಿವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಪಕ್ಸೆ ಪುತ್ರ ಕೂಡ ರಿಸೈನ್ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಲಂಕಾದಲ್ಲಿ ಪರಿಸ್ಥಿತಿ ಬಿಗಾಡಾಯಿಸ್ತಿದೆ. ಇದರಿಂದ ಕಂಗೆಟ್ಟ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರ ಪತನ.. ಅಮೆರಿಕಾ ಷಡ್ಯಂತ್ರ?
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಗೊಂಡಿದೆ. ಪಾಕ್ ಅಧ್ಯಕ್ಷ ಆರಿಫ್ ಅಲ್ವಿ, ಇಮ್ರಾನ್ವನ್ನ ವಿಸರ್ಜಿಸಿದ್ದಾರೆ. ಆದ್ರೆ ಇದರ ಹಿಂದೆ ವಿದೇಶಿ ಷಡ್ಯಂತ ಇದೆ ಅಂತ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಅಮೆರಿಕಾದ ಹಿರಿಯ ರಾಜತಾಂತ್ರಿಕ ಅಧಿಕಾರಿ ಡೋನಾಲ್ಡ್ ಲು ಅವರ ಕೈವಾಡ ಇದೆ. ನನ್ನ ಸರ್ಕಾರ ಕೆಡವಲು ಹಲವು ತಿಂಗಳಿಂದ ಪ್ರಯತ್ನಿಸಲಾಗ್ತಿತ್ತು. ಕಳೆದ ಆಗಸ್ಟ್, ಸೆಪ್ಟೆಂಬರ್ನಲ್ಲೇ ನನಗೆ ಇದರ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇಮ್ರಾನ್ ಸರ್ಕಾರ ವಿಸರ್ಜಿಸಿರೋ ಸಂಬಂಧ ವಿಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದಿನಿಂದ ವಿಚಾರಣೆ ನಡೆಯಲಿದೆ.
ಉಕ್ರೇನ್ ರಾಜಧಾನಿ ಕೀವ್ನಲ್ಲಿ 410 ನಾಗರೀಕರ ಶವ ಪತ್ತೆ!
ರಷ್ಯಾ ದಾಳಿಯಿಂದ ನಲುಗಿದ ಕೀವ್ನಲ್ಲಿ 410 ನಾಗರೀಕರ ಶವಪತ್ತೆಯಾಗಿದೆ ಅಂತ ಉಕ್ರೇನ್ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸೇನೆ ವಾಪಸ್ ಆದ ನಂತರ ನಗರದಲ್ಲಿ ಇದುವರೆಗೆ 410 ನಾಗರೀಕರ ಶವವಾಗಿ ಪತ್ತೆಯಾಗಿದ್ದಾರೆ. ಇದರಲ್ಲಿ 140 ಜನರ ಶವ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
7ನೇ ಬಾರಿಗೆ ಆಸೀಸ್ ಮಹಿಳಾ ಪಡೆಗೆ ವಿಶ್ವಕಪ್ ಕಿರೀಟ!
7ನೇ ಬಾರಿಗೆ ಆಸ್ಟ್ರೇಲಿಯಾ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದು ಬೀಗಿದೆ. ನ್ಯೂಜಿಲೆಂಡ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಸೀಸ್ ಮಹಿಳೆಯರು ಜಯ ದಾಖಲಿಸಿದ್ದಾರೆ. ಬರೋಬ್ಬರಿ 71 ರನ್ ಅಂತರದಿಂದ ಗೆಲ್ಲೋ ಮೂಲಕ ವಿಶ್ವಕಪ್ ಕಿರೀಟ್ ತನ್ನದಾಗಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟಾರ್ಕ್ ಜೋಡಿ
ಆಸ್ಟ್ರೇಲಿಯಾದ ಮಹಿಳಾ ತಂಡ ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಫೋಟೋ ಫುಲ್ ವೈರಲ್ ಆಗ್ತಿದೆ. ಸ್ಟಾರ್ಕ್ ಜೋಡಿ ಈ ಫೋಟೋ ನೆಟ್ಟಿಗರನ್ನ ಇಂಪ್ರೆಸ್ ಮಾಡ್ತಿದೆ. ಆಸೀಸ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಪುರುಷರ ಕ್ರಿಕೆಟ್ ವಿಶ್ವಕಪ್ ಗೆದ್ದಿದ್ರೆ, ಪತ್ನಿ ಅಲ್ಯಾಸಾ ಹೇಲಿ ಆಸೀಸ್ ಮಹಿಳಾ ತಂಡಕ್ಕೆ ವರ್ಲ್ಡ್ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ 170 ರನ್ ಬಾರಿಸಿದ್ದ ಅಲ್ಯಾಸಾ ಹೇಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದಾರೆ.
3ನೇ ಪಂದ್ಯದಲ್ಲೂ ಚೆನ್ನೈಗೆ ಸೋಲು.. ಫ್ಯಾನ್ಸ್ ಕಂಗಾಲು..
ಐಪಿಎಲ್ ಸೀಸನ್ 15ರಲ್ಲಿ ಸತತ ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಶರಣಾಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ 54 ರನ್ಗಳ ಹೀನಾಯ ಸೋಲು ಕಂಡಿದೆ. ಪಂಜಾಬ್ ನೀಡಿದ್ದ 181 ರನ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ತಂಡ ಕೇವಲ126 ರನ್ಗಳಿಗೆ ಆಲೌಟ್ ಆಗದೆ. ಶಿವಮ್ ದೂಬೆ ಅರ್ಧ ಶತಕ ಬಿಟ್ಟರೆ ಚೆನ್ನೈನ ಯಾವೊಬ್ಬ ಆಟಗಾರರು 25 ರನ್ ಬಾರಿಸಿಲ್ಲ. ಈ ಮೂಲಕ 3 ಪಂದ್ಯಗಳಲ್ಲಿ ಪಂಜಾಬ್ 2ನೇ ಗೆಲುವು ದಾಖಲಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post