ಕೇಳಿದ್ರಲ್ಲಾ ರಕ್ಷ್ ಅವ್ರಿಗೆ ಬೈಕ್, ಕಾರ್ ಕ್ರೇಜ್ ಎಷ್ಟಿದೆ ಅಂತಾ. ನಾವು ಈ ಬಗ್ಗೆನೇ ಇವತ್ತು ಹೇಳೊಕೆ ಹೊರಟಿರೊದು. ನಿಮಗೊತ್ತಾ. ಸೀರಿಯಲ್‌ಗೆ ಬರೋಕೆ ಮುನ್ನ ತಮ್ಮ ಬಹುಪಾಲು ಸಮಯವನ್ನ ರಕ್ಷ್ ಗ್ಯಾರೇಜ್ನಲ್ಲಿ ಕಳೀತಾ ಇದ್ರಂತೆ. ಮತ್ತೊಂದು ತಮಾಷೆಯ ವಿಷ್ಯ ಅಂದ್ರೇ ಎಲ್ರೂ ಗರ್ಲ್ಫ್ರೆಂಡ್ನ ಪಾರ್ಕ್, ಹೋಟೆಲ್, ಸಿನಿಮಾ ಅಂತಾ ಸುತ್ತಿಸಿದ್ರೇ ನಮ್ಮ ರಕ್ಷ್ ಮಾತ್ರ ಅನು ಅವ್ರನ್ನ ಗ್ಯಾರೇಜ್ಗೆ ಕರ್ಕೊಂಡು ಹೋಗೋರಂತೆ. ಬೆಂಗಳೂರ್ನಲ್ಲಿ ಅಷ್ಟು ಗ್ಯಾರೇಜ್ ಡಿಟೈಲ್ಸ್ ನನಗೇ ಗೊತ್ತು ಅಷ್ಟು ಸುತ್ತಿಸಿದ್ದಾರೆ ಇವ್ರು ನನ್ನ ಅಂತಾ ಹೇಳಿ ದೊಡ್ಡದೊಂದು ನಗು ಕೊಡ್ತಾರೆ ಅನು.
ಪ್ರತಿಯೊಬ್ಬರಿಗೂ ಒಂದೊಂದು ಹಾಬಿ, ಫ್ಯಾಷನ್ ಅಂತಾ ಇದ್ದೇ ಇರುತ್ತೆ. ರಕ್ಷ್ ಅವ್ರಿಗೆ ಕಾರ್, ಬೈಕ್ ಅಂದ್ರೇ ಸಖತ್ ಕ್ರೇಜ್. ಈಗಿಂದ ಅಲ್ಲ ಅವ್ರ ಸ್ಕೂಲ್ ಡೇಸ್ನಿಂದಲೂ ವೆಹಿಕಲ್ಸ್ ನೋಡದ್ರೇ ಎಕ್ಸೈಟ್ ಆಗ್ತಿದ್ರಂತೆ. ಸೀರಿಯಲ್‌ಗೆ ಬರೋ ಮೊದಲು ಸಾಕಷ್ಟು ಬೈಕ್ ರೇಸಿಂಗ್ನಲ್ಲಿ ಭಾಗವಹಿಸಿದ್ರಂತೆ ರಕ್ಷ್.
ಸದ್ಯ ರಕ್ಷ್ ಹತ್ರ ಆಡಿ ಎ5 ಸ್ಪೋರ್ಟ್ಸ್ ಬ್ಯಾಕ್ ಕಾರ್ ಸೇರಿದಂತೆ ದುಬಾರಿ ಬೆಲೆಯ ಬೈಕ್ ಕಾರ್ಗಳಿವೆ. ನಾನ್ ಯಾವ್ದೇ ಗಾಡಿ ತಗೊಂಡ್ರು ಎಲ್ಲವೂ ನನ್ನ ಸ್ವಂತ ದುಡಿಮೆಯದ್ದು, ಯಾವತ್ತು ಅಪ್ಪ ಅಮ್ಮನಿಗೆ ತೊಂದ್ರೇ ಕೊಟ್ಟಿಲ್ಲ ಅಂತಾರೆ ರಕ್ಷ್.
ಕಾರ್ ಕಾರ್ ಎಲ್ಲ್ ನೋಡಿದ್ರು ಕಾರ್ ಅಂತಾ ಕಾರ್ ಜಪ ಮಾಡ್ತಾನೆ ಇರ್ತಾರೆ ನಮ್ಮ ರಕ್ಷ್. ಮಾರ್ಕೆಟ್ಗೆ ಯಾವುದೇ ಕಾರ್, ಬೈಕ್ ಬಂದ್ರು ಅದ್ರ ಫುಲ್ ಡಿಟೈಲ್ಸ್ ತಿಳ್ಕೊಳ್ಳೊವರೆಗೂ ಸುಮ್ನಿರಲ್ಲ ರಕ್ಷ್. ವೆಹಿಕಲ್ಸ್ ಅಂದ್ರೇ ಅಷ್ಟು ಎಕ್ಸೈಟ್ಮೆಂಟ್ ಅವ್ರಿಗೆ.
ರಕ್ಷ್ ವೆಹಿಕಲ್ ಕುಟುಂಬಕ್ಕೆ ಮತ್ತೊಂದು ಬ್ಯೂಟಿಫುಲ್ ಜಿಪ್ಸಿ ಆ್ಯಡ್ ಆಗಿದೆ. ರಕ್ಷ್ ಹೊಸ ಜಿಪ್ಸಿ ಕಾರ್ ಖರೀದಿಸಿದ್ದು, ಅದ್ರ ಫೋಟೋಗಳನ್ನ ಶೇರ್ ಮಾಡಿ ಸಂಭ್ರಮಿಸಿದ್ದಾರೆ.
ಕಿರುತೆರೆಯ ಡ್ಯಾಶಿಂಗ್ ಹಿರೋ ರಕ್ಷ್ ಗಟ್ಟಿಮೇಳ ಸೀರಿಯಲ್ನ ಸಂಪೂರ್ಣ ಜವಾಬ್ದಾರಿಯನ್ನ ನಿಭಾಯಿಸ್ತಿದ್ದಾರೆ. ಪರಿಶ್ರಮ ಪ್ಲಸ್ ಪ್ರತಿಭೆ ಇದ್ರೇ ಟಾಪ್ ಸ್ಥಾನದಲ್ಲಿ ನಿಲ್ಲಬಹುದು ಅನ್ನೋಕೆ ರಕ್ಷ್ ದಿ ಬೆಸ್ಟ್ ಎಕ್ಸಾಂಪಲ್. ಜೀರೋದಿಂದ ಶುರುವಾಗಿತ್ತು ಇವ್ರ ಕಲಾ ಬದುಕು. ಈಗ ಸಕ್ಸಸ್ಫುಲ್ ಹಿರೋ ಕಮ್ ನಿರ್ಮಾಪಕರಾಗಿ ಮಿಂಚಿತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post