ಇದುವರೆಗೂ ಹೇಳದ ಸತ್ಯವನ್ನೊಂದು ಈಗ ವಿರಾಟ್ ಕೊಹ್ಲಿ ಬಾಯ್ಬಿಟ್ಟಿದ್ದಾರೆ. ಸುಮಾರು 5-6 ವರ್ಷಗಳಿಂದ ಮನಸಲ್ಲೇ ಇಟ್ಕೊಂಡಿದ್ದನ್ನ ಕಹಿ ಸತ್ಯವನ್ನ, ಆರ್ಸಿಬಿ ಕ್ಯಾಂಪ್ನಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ, ಮನಸಲ್ಲೇ ಕೊರಗುತ್ತಿದ್ದ ಆ ಕಹಿ ಘಟನೆಗಳು ಯಾವುದು ಗೊತ್ತಾ..?
ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್ನ ಸಾಮ್ರಾಟ. ದಾಖಲೆಗಳ ವೀರನಾಗಿ ಎದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಈ ರನ್ ಸಾಮ್ರಾಟನಿಗೆ ಇವತ್ತಿಗೂ, ಎರಡು ಕಹಿ ಘಟನೆಗಳು ಇನ್ನಿಲ್ಲದಂತೆ ಕಾಡ್ತಿದೆ. ಐದಾರು ವರ್ಷಗಳ ಹಿಂದೆ ನಡೆದಿದ್ದ ಹಾರ್ಟ್ ಬ್ರೇಕಿಂಗ್ ಸ್ಟೋರಿಯನ್ನ ಬಿಚ್ಚಿಟ್ಟಿದ್ದಾರೆ. ಇದೆಕ್ಕೆಲ್ಲಾ ಕಾರಣವಾಗಿರೋದು, ಜಸ್ಟ್ ಎರಡೇ ಎರಡು ಪಂದ್ಯಗಳು.
ಹೌದು.. ವಿರಾಟ್ ಕೊಹ್ಲಿ ಜೀವನದಲ್ಲಿ ನಡೆದ ಆ ಎರಡು ಕಹಿ ಘಟನೆಗಳು, ಇಂದಿಗೂ ಕಾಡುತ್ತಿವೆ. ಆ ಎರಡು ಘಟನೆಗಳಿಗೆ ಸಾಕ್ಷಿಯಾಗಿರುವುದು 2016ರ ವರ್ಷ. ಯಾಕಂದ್ರೆ ಈ ವರ್ಷದಲ್ಲಿ ವಿಶ್ವ ಕ್ರಿಕೆಟ್ನಲ್ಲಿ ನಡೆದಿದ್ದು, ವಿರಾಟ್ ಕೊಹ್ಲಿಯ ದರ್ಬಾರ್. ಆದರೂ ಎರಡು ಕನಸುಗಳು, ನನಸಾಗಲಿಲ್ಲ ಎಂಬ ಕೊರಗು ಕೊಹ್ಲಿಗೆ ಕಾಡ್ತಿವೆ.
2016ರ T20 ವಿಶ್ವಕಪ್ ಸೆಮಿಫೈನಲ್ ಸೋಲು
2016ರ ಟಿ20 ವಿಶ್ವಕಪ್.. ಭಾರತದಲ್ಲಿ ನಡೆದ ಈ ವಿಶ್ವಕಪ್ನಲ್ಲಿ, ಟೀಮ್ ಇಂಡಿಯಾ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುತ್ತೆ ದಿಗ್ಗಜರು ಭವಿಷ್ಯ ನುಡಿದಿದ್ರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್ಗೆ ಎಂಟ್ರಿ ಕೊಟ್ಟಿತ್ತು. ಸೆಮಿಫೈನಲ್ ಹಣಾಹಣಿಯಲ್ಲಿ ಟಿ20 ದೈತ್ಯ ವಿಂಡೀಸ್ ವಿರುದ್ಧ ಸೆಣಸಾಡಿತ್ತು. ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 192 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ನಂತರ ಟಾರ್ಗೆಟ್ ಬೆನ್ನತ್ತಿದ್ದ ವಿಂಡೀಸ್, ಆರಂಭದಲ್ಲೇ ವಿಕೆಟ್ ಕೈಚೆಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದ್ರೆ ಕೊನೆಯಲ್ಲಿ ಲಿಂಡಲ್ ಸಿಮನ್ಸ್, ಌಂಡ್ರೆ ರಸೆಲ್ ಸಿಡಿಲಬ್ಬರಕ್ಕೆ ನಲುಗಿದ ಟೀಮ್ ಇಂಡಿಯಾ, ಮುಖಭಂಗ ಅನುಭವಿಸಿತ್ತು. ಈ ಸೋಲು ಇವತ್ತಿಗೂ ವಿರಾಟ್ ಕೊಹ್ಲಿಯನ್ನ ಕಾಡ್ತಿದೆ. ಯಾಕಂದ್ರೆ ಈ ಟೂರ್ನಿಯಲ್ಲಿ ವಿರಾಟ್, ಸೆಕೆಂಡ್ ಲೀಡಿಂಗ್ ಸ್ಕೋರರ್.
2016ರ ಐಪಿಎಲ್ ಫೈನಲ್ ಸೋಲು
ಒಂದೆಡೆ ಟಿ20 ವಿಶ್ವಕಪ್ ಸೋಲಿನ ಶಾಕ್ನಲ್ಲಿದ್ದ ವಿರಾಟ್ ಕೊಹ್ಲಿ, ನಂತರ ಐಪಿಎಲ್ನಲ್ಲಿ ಕಪ್ ಗೆಲ್ಲಲೇಬೇಕೆಂಬ ಛಲದಿಂದಲೇ ಹೋರಾಟ ನಡೆಸಿದ್ದರು. ಟೂರ್ನಿಯೂದ್ದಕ್ಕೂ ಸಿಡಿಲಮರಿಯಂತೆ ಆರ್ಭಟಿಸಿದ್ದ ವಿರಾಟ್, 4 ಸೆಂಚೂರಿ ಸಹಿತ 973 ರನ್ ಕೊಳ್ಳೆ ಹೊಡೆದಿದ್ದರು. ಕೊಹ್ಲಿಯ ರೆಡ್ ಹಾಟ್ ಫಾರ್ಮ್ಗೆ, ಆರ್ಸಿಬಿಯ ಕಪ್ ಗೆಲ್ಲೋ ಕನಸು, ನನಸಾಗುತ್ತೆ ಅಂತಾನೇ ಊಹಿಸಲಾಗಿತ್ತು. ಸ್ವತಃ ವಿರಾಟ್ ಕೊಹ್ಲಿಯೇ, ಕಪ್ ನಮ್ದೇ ಅಂತ ಭವಿಷ್ಯ ನುಡಿದಿದ್ದರು. ಆದ್ರೆ ಫೈನಲ್ ಪಂದ್ಯದಲ್ಲಿ ಆಗಿದ್ದೇ ಬೇರೆ.
ಐಪಿಎಲ್ 2016ರ ಫೈನಲ್ ಮತ್ತು 2016 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸೋಲುಗಳು ಅತ್ಯಂತ ಹೃದಯ ವಿದ್ರಾವಕ.
ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್
ಗುಜರಾತ್ ಲಯನ್ಸ್ ವಿರುದ್ಧದ ಕ್ವಾಲಿಫೈಯರ್ ಮ್ಯಾಚ್ ಗೆದ್ದಿದ್ದ ಆರ್ಸಿಬಿ, ನೇರ ಫೈನಲ್ ಪ್ರವೇಶಿಸಿತ್ತು. ಆದ್ರೆ ಬೆಂಗಳೂರಿನಲ್ಲಿ ನಡೆದ ಫೈನಲ್ನಲ್ಲಿ, ವಾರ್ನರ್ ನೇತೃತ್ವದ ಸನ್ ರೈಸರ್ಸ್ ಎದುರು ತಲೆಬಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್ ಹೈದ್ರಾಬಾದ್, 7 ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿತ್ತು. ಆದ್ರೆ ಕ್ರಿಸ್ ಗೇಲ್, ವಿರಾಟ್ ಕೊಹ್ಲಿಯ ಅಬ್ಬರದ ಹೊರತಾಗಿ, 8 ರನ್ಗಳ ಸೋಲುಂಡಿತ್ತು. ಈ ಬಗ್ಗೆ ಈಗ ಸ್ವತಃ ವಿರಾಟ್ ಕೊಹ್ಲಿಯೇ ನೋವು ಹೊರಹಾಕಿದ್ದಾರೆ.
ಒಟ್ನಲ್ಲಿ.. 2016ರ ವರ್ಷ ವಿರಾಟ್ಗೆ, ವೈಯಕ್ತಿಕವಾಗಿ ಯಶಸ್ಸನ್ನೇ ನೀಡಿದೆ. ಆದ್ರೆ, ಅದೇ ವರ್ಷದಲ್ಲಿ ಟಿ20 ವಿಶ್ವಕಪ್, ಐಪಿಎಲ್ ಕಿರೀಟ ಒಲಿಸಿಕೊಳ್ಳಲಿಲ್ಲ ಎಂಬ ಕೊರಗು, ಕೊಹ್ಲಿಗೆ ಮಾತ್ರ ಹಾಗೇ ಉಳಿದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post