ವರ್ಲ್ಡ್ ಸಿನಿಮಾರಂಗದಲ್ಲಿ ಬಾಲಿವುಡ್ ಚಿತ್ರಗಳಿಗೆ ಇರೋ ಇಂಪಾರ್ಟೆಂಟ್ ಕನ್ನಡ ಹಾಗೂ ಸೌತ್ ಸಿನಿಮಾಗಳಿಗೆ ಇರಲಿಲ್ಲ. ಈಗ ಟ್ರೆಂಡ್ ಕಂಪ್ಲೀಟ್ ಚೇಂಜ್ ಆಗಿದೆ. ಇದು ಕೆಜಿಎಫ್ ಕಾಲ. ಕನ್ನಡ ಮಾತ್ರವಲ್ಲ, ಸೌತ್ ಸಿನಿಮಾಗಳೇ ರಿಲೀಸ್ ಆಗದ ಕಡೆನೂ ಈಗ ಕೆಜಿಎಫ್ ಎಂಟ್ರಿ ಕೊಟ್ಟಿದೆ. ಬರಿ ರಿಲೀಸ್ ಅಲ್ಲ, ರಿಲೀಸ್ಗೂ ಮೊದಲೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಕನ್ನಡ ಚಿತ್ರರಂಗಕ್ಕೆ ಮೊದಲಿನಿಂದಲೂ ಒಳ್ಳೆಯ ಮಾರ್ಕೆಟ್ ಇತ್ತು. ಆದ್ರೆ ಅದರ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿದ ಕೀರ್ತಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಸಲ್ಲುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ಅಲ್ಲೊಮ್ಮೆ, ಇಲ್ಲೊಮ್ಮೆ ಮಾತನಾಡುವಂತಿದ್ದ ಟ್ರೆಂಡ್ ಬದಲಿಸಿ, ಪ್ಯಾನ್ ಇಂಡಿಯಾ ಆಡಿಯೆನ್ಸ್ ಸ್ಯಾಂಡಲ್ವುಡ್ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಈಗ ಚಾಪ್ಟರ್ 2 ಸಿನಿಮಾದಿಂದ, ಪ್ಯಾನ್ ಇಂಡಿಯಾ ಮಾತ್ರವಲ್ಲ ಇಡೀ ವರ್ಲ್ಡ್ ಪ್ರೇಕ್ಷಕರು ಕನ್ನಡ ಸಿನಿಮಾನಾ ನೋಡೋಥರ ಆಗಿದೆ. ಏಪ್ರಿಲ್ 14ರಂದು ಕೆಜಿಎಫ್ ಸಿನಿಮಾ ವರ್ಲ್ಡ್ವೈಡ್ ತೆರೆಕಾಣ್ತಿದೆ. ಯುಎಸ್ ಹಾಗೂ ಇನ್ನಿತರ ಕೆಲವು ದೇಶಗಳಲ್ಲಿ ಒಂದು ದಿನ ಮುಂಚೆಯೇ ಪ್ರೀಮಿಯರ್ ಕಾಣ್ತಿದೆ. ಇನ್ನು ಸಿನಿ ಜಗತ್ತಿನಲ್ಲಿ ಕೆಜಿಎಫ್ ಕ್ರೇಜ್ ಎಷ್ಟಿದೆ ಅಂದ್ರೆ, ಹಲವು ದೇಶಗಳಲ್ಲಿ ಕೆಜಿಎಫ್ ಪ್ರಿ-ಬುಕ್ಕಿಂಗ್ ಓಪನ್ ಆಗಿದ್ದು, ದಾಖಲೆ ಮಟ್ಟದಲ್ಲಿ ಟಿಕೆಟ್ ಸೇಲ್ ಆಗಿದೆ.
ಯುಕೆಯಲ್ಲಿ ಕೆಜಿಎಫ್ ಚಾಪ್ಟರ್ 2 ನಯಾ ರೆಕಾರ್ಡ್
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಯುನೈಟೆಟ್ ಕಿಂಗ್ಡಮ್ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ. ಯುಕೆಯಲ್ಲಿ ಈವರೆಗೂ ಬಾಲಿವುಡ್ ಸಿನಿಮಾಗಳೇ ಹೆಚ್ಚು ರಿಲೀಸ್ ಆಗಿರೋದು ಮತ್ತು ಗಳಿಕೆ ವಿಚಾರದಲ್ಲಿಯೂ ಬಾಲಿವುಡ್ ಚಿತ್ರಗಳದ್ದೇ ಸಿಂಹಪಾಲು. ಆದ್ರೀಗ, ಕೆಜಿಎಫ್ ಈ ರೆಕಾರ್ಡ್ ಬ್ರೇಕ್ ಮಾಡಿದೆ. ಕೆಜಿಎಫ್ 2 ಟಿಕೆಟ್ ಬುಕ್ಕಿಂಗ್ ಓಪನ್ ಆದ ಕೇವಲ 12 ಗಂಟೆಯಲ್ಲಿ 5 ಸಾವಿರ ಟಿಕೆಟ್ ಖರೀದಿ ಆಗಿದೆಯಂತೆ. ಭಾರತದ ಸಿನಿಮಾವೊಂದು ಇಷ್ಟು ವೇಗವಾಗಿ 5 ಸಾವಿರ ಟಿಕೆಟ್ ಮಾರಾಟವಾಗಿರೋದು ಯುಕೆಯಲ್ಲಿ ಫಸ್ಟ್ ಟೈಂ ಅಂತ ಅಲ್ಲಿನ ಡಿಸ್ಟ್ರೂಬ್ಯೂಟರ್ ‘RFT ಫಿಲಂಸ್’ ಅನೌನ್ಸ್ ಮಾಡಿದ್ದಾರೆ.
ಕೆಜಿಎಫ್ ಚಿತ್ರಕ್ಕೆ ವರ್ಲ್ಡ್ವೈಡ್ ಆಡಿಯೆನ್ಸ್ ಇದ್ದಾರೆ. ಮೊದಲ ಚಾಪ್ಟರ್ಗಿಂತ ಎರಡನೇ ಚಾಪ್ಟರ್ಗೆ ವೀಕ್ಷಕ ಬಳಗ ಹೆಚ್ಚಾಗಿದೆ. ಇಷ್ಟು ದಿನ ಬಾಲಿವುಡ್ ಚಿತ್ರಗಳನ್ನ ಬಿಟ್ಟರೆ ದಕ್ಷಿಣದ ಯಾವ ಭಾಷೆಯ ಸಿನಿಮಾಗಳನ್ನು ನೋಡದ ಜನರಿಗೂ ಈಗ ಕೆಜಿಎಫ್ ತಲುಪಿದೆ. ಹೌದು, ಗ್ರೀಸ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸೌತ್ ಇಂಡಿಯಾ ಸಿನಿಮಾ ರಿಲೀಸ್ ಆಗ್ತಿದೆ. ಅದು ರಾಕಿಂಗ್ ಸ್ಟಾರ್ ನಟನೆಯ ಕನ್ನಡ ಸಿನಿಮಾ ಅನ್ನೋದು ತುಂಬಾನೇ ಸ್ಪೆಷಲ್.
ವಿಶ್ವದಾದ್ಯಂತ ಇಷ್ಟು ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರೋ ಕೆಜಿಎಫ್ ಸಿನಿಮಾ ಇಂಗ್ಲೀಷ್ನಲ್ಲಿ ಬಿಡುಗಡೆಯಾಗುತ್ತಿಲ್ಲ ಅನ್ನೋದು ಸ್ವಲ್ಪ ನಿರಾಸೆ ಮೂಡಿಸಿರಬಹುದು. ಆದರೂ ಜಗತ್ತಿನಾದ್ಯಂತ ಸಿನಿಮಾ ಅಭಿಮಾನಿಗಳನ್ನು ಸಂಪಾದಿಸಿದೆ ಕೆಜಿಎಫ್. ಈಗ ಗ್ರೀಸ್ ದೇಶದಲ್ಲೂ ಅಷ್ಟೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೆಜಿಎಫ್ ಬರ್ತಿದ್ದು, ಇಂಗ್ಲೀಷ್ ಸಬ್ಟೈಟಲ್ ಇರಲಿದೆಯಂತೆ. ಗ್ರೀಸ್ನಲ್ಲಿ ಮಾತ್ರವಲ್ಲ ಇಟಲಿಯಲ್ಲೂ ಕೆಜಿಎಫ್ ಸಿನಿಮಾ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ರಾಕಿ ಭಾಯ್, ಸಂಜಯ್ ದತ್, ರವೀನಾ ಟಂಡನ್ ಈಗಾಗ್ಲೇ ಪ್ಯಾನ್ ಇಂಡಿಯಾ ಪ್ರಮೋಷನ್ ಸ್ಟಾರ್ಟ್ ಮಾಡಿದ್ದಾರೆ.
ವಿದೇಶಗಳಲ್ಲಿ ಯಾವುದೇ ಪ್ರಮೋಷನ್ ಇಲ್ಲದೆಯೇ ಈ ಮಟ್ಟಕ್ಕೆ ಸೌಂಡ್ ಮಾಡ್ತಿರೋದು ಕೆಜಿಎಫ್ ಬ್ರಾಂಡ್ ಹೇಗಿದೆ ಅಂತ ಹೇಳ್ತಿದೆ. ಅಂದ್ಹಾಗೆ, ಇದು ಜಸ್ಟ್ ಬಿಗಿನಿಂಗ್, ಸಿನಿಮಾ ರಿಲೀಸ್ ಆದ್ಮೇಲೆ ಇನ್ನು ಯಾವೆಲ್ಲಾ ರೆಕಾರ್ಡ್ ಮಾಡುತ್ತೆ ಅನ್ನೋದು ರಾಕಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post