ಧಾರವಾಡ : ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ ಮತ್ತು ಬಸವರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಬಸವರಾಜ್ ಪಿಎಸ್ಐ ಆಗಬೇಕು ಅಂತ ಕನಸು ಕಂಡಿದ್ದ, ಪರೀಕ್ಷೆ ಸಹ ಬರೆದು ಜೀವನದ ಭವಿಷ್ಯದ ಬಗ್ಗೆ ಎದುರು ನೋಡುತ್ತಿದ್ದ.
ಇನ್ನೂ ಪೋಷಕರು ಅನ್ಯ ಜಾತಿಯ ಪ್ರೀತಿಗೆ ವಿರೋಧಿಸಿದ್ದಕ್ಕಾಗಿ ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದಾರೆ. ಅಲ್ಲದೇ ಯುವತಿಯ ಮನೆಯಲ್ಲಿ ಬೇರೆ ಯುವಕನೊಂದಿಗೆ ವಿವಾಹ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಮನನೊಂದು ಪ್ರೇಮಿಗಳು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಗೆ ತರುವ ಮಾರ್ಗ ಮದ್ಯೆಯೇ ಸಾವಿತ್ರಿ ಕೊನೆಯುಸಿರು ಎಳೆದಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಯುವಕ ಬಸವರಾಜ್ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಚಿಕಿತ್ಸೆ ಫಲಿಸದೆ ಬಸವರಾಜ್ ಸಾವನ್ನಪ್ಪಿದ್ದಾನೆ. ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post