ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸುಂದರವಾದ ಶಿಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವೀಕರಿಸಿದರು. ಈ ಶಿಲ್ಪವನ್ನು ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ. ಅಸಾಧಾರಣ ಶಿಲ್ಪವನ್ನು ಹಂಚಿಕೊಂಡಿದ್ದಕ್ಕಾಗಿ ಅರುಣ್ ಯೋಗಿರಾಜ್ ಅವರಿಗೆ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದು ಏಕಶಿಲೆ ಎಂದು ಕರೆಯಲ್ಪಡುವ ಒಂದೇ ಕಲ್ಲಿನಿಂದ ಮಾಡಿದ ಎರಡು ಅಡಿ ಎತ್ತರದ ವಿಗ್ರಹವಾಗಿದೆ ಎಂದಿದ್ದಾರೆ ಮೋದಿ. ಅರುಣ್ ಯೋಗಿರಾಜ್ ಅವರು ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿರುವ ಶಿಲ್ಪಿ ಕಲಾವಿದರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ನಮ್ಮ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರನ್ನು ಭೇಟಿಯಾಗುವುದು ಗೌರವದ ಸಂಗತಿ. ಈ ಬಾರಿ ನಾನು ಅವರನ್ನು ನಮ್ಮ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಮತ್ತು ನನ್ನ ಕುಟುಂಬದೊಂದಿಗೆ ಭೇಟಿಯಾದೆ. ಎಲ್ಲಾ ಸಹಾಯ ಮತ್ತು ಆಶೀರ್ವಾದಗಳಿಗಾಗಿ ಪ್ರಹ್ಲಾದ ಜೋಶಿ ಸರ್ ಅವರಿಗೆ ಧನ್ಯವಾದಗಳು. ಮತ್ತು ಈ ವರ್ಷದ ಯೋಗ ದಿನಕ್ಕೆ ಮೋದಿಜಿಯನ್ನು ಮೈಸೂರಿಗೆ ಆಹ್ವಾನಿಸಿದ್ದೇವೆ ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ.
ಇನ್ನೂ ಪ್ರತಾಪ್ ಸಿಂಹ ಅವರ ಮಗಳಿಗೆ ಮೋದಿ ಜೀ ಅವರು ಚಾಕೊಲೇಟ್ ಕೊಟ್ಟರು.
ಇನ್ನೂ ಅರುಣ್ ಯೋಗಿರಾಜ್ ಅವರು, ಸುಭಾಸ್ ಚಂದ್ರ ಬೋಸ್ ಅವರ 2 ಅಡಿ ಏಕಶಿಲೆಯ ಮಾದರಿಯನ್ನು ಪ್ರಸ್ತುತಪಡಿಸಲು ಅವಕಾಶ ಸಿಕ್ಕಿತು. ನರೇಂದ್ರ ಮೋದಿ ಜೀ ಮತ್ತು ನಮ್ಮ ಕ್ರಿಯಾತ್ಮಕ ಸಂಸದರಿಗೆ ಧನ್ಯವಾದಗಳು. ಪ್ರತಾಪ್ ಸಿಂಹ ಅವರಿಗೂ ಧನ್ಯವಾದಗಳು ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Thanks sir … 🙏🏾🙏🏾🙏🏾 it was pleasure meeting you… https://t.co/CINcDGCDGY
— Arun Yogiraj (@yogiraj_arun) April 5, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post