ರೆಕಾರ್ಡ್,,,,,ರೆಕಾರ್ಡ್,,,,ರೆಕಾರ್ಡ್,,,,,,ಸಿನಿ ದುನಿಯಾದಲ್ಲಿ ಈಗ ಯಶ್ ಕಾಲಿಟ್ಟೆಲೆಲ್ಲಾ ರೆಕಾರ್ಡ್. ಕೆಜಿಎಫ್ ಎಂಟ್ರಿಕೊಟ್ಟಲೆಲ್ಲಾ ರೆಕಾರ್ಡ್. ದಿನಕ್ಕೊಂದು ರೆಕಾರ್ಡ್. ಈ ಹಳೆ ರೆಕಾರ್ಡ್ಗಳಿಗೆಲ್ಲಾ ರಾಕಿ ಭಾಯ್ ಮಾಸ್ಟರ್ ಅನ್ನೋಥರ ಆಗೋಗಿದೆ. ಬಹುಶಃ ಕೆಜಿಎಫ್ ಚಾಪ್ಟರ್ 2 ಕ್ರಿಯೇಟ್ ಮಾಡಿರೋ ಈ ರೆಕಾರ್ಡ್ ಈಗ ಯಾರೂ ಬ್ರೇಕ್ ಮಾಡೋ ಚಾನ್ಸೇ ಇಲ್ಲ ಅನ್ಸುತ್ತೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ರೆಕಾರ್ಡ್ಗಳನ್ನು ನೋಡ್ತಿದ್ರೆ ಈ ರೆಕಾರ್ಡ್ ಅನ್ನೋ ಪದಕ್ಕೆ ಈಗ ಸ್ಟಾರ್ ಬ್ರಾಂಡ್ ಅಂಬಾಸಿಡರ್ ಅಂತ ಅನಿಸ್ತಿದೆ. ಚಿತ್ರಜಗತ್ತಿನಲ್ಲಿ ಸದ್ಯ ಎಲ್ಲಿ ನೋಡಿದ್ರು ಕೆಜಿಎಫ್ ಸಿನಿಮಾದ ದಾಖಲೆಗಳೇ ಕಣ್ಣಿಗೆ ಬೀಳ್ತಿದೆ. ಟೀಸರ್, ಟ್ರೈಲರ್, ಸಾಂಗ್, ಪೋಸ್ಟರ್ ಯಾವುದನ್ನು ನೋಡಿದ್ರು ದಾಖಲೆ ದಾಖಲೆ ಬರಿ ದಾಖಲೆ ಮಾತ್ರ.ಕೆಜಿಎಫ್ ಥಿಯೇಟರ್ಗೆ ಬರೋಕೆ ಇನ್ನೇನು 9 ದಿನ ಬಾಕಿಯಿದೆ. ತುಂಬಾ ಕಡೆ ಅದಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದ್ದು, ಶರವೇಗದಲ್ಲಿ ಟಿಕೆಟ್ ಸೇಲ್ ಆಗ್ತಿರೋದು ಅಚ್ಚರಿ ಮೂಡಿಸಿದೆ. ಅಂದ್ಹಾಗೆ, ಈ ಪರಿ ಟಿಕೆಟ್ ಬುಕ್ ಆಗ್ತಿರೋದು ಬರಿ ಕರ್ನಾಟಕದೊಳಗೆ ಮಾತ್ರವಲ್ಲ, ಹೊರಾಜ್ಯಗಳಲ್ಲು, ಹೊರದೇಶಗಳಲ್ಲೂ ಕೂಡ.
ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ತೆರೆ ಕಂಡಿದ್ದ ಕೆಜಿಎಫ್ 2 ಟೀಸರ್ ಭಾರತೀಯ ಸಿನಿಮಾರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ದಾಖಲೆಯನ್ನು ಹಿಂದೆ ಯಾವ ಚಿತ್ರವೂ ಮಾಡಿಲ್ಲ, ಮುಂದೆ ಯಾವ ಚಿತ್ರಗಳು ಮಾಡುತ್ತಾ ಅಂತ ಗೊತ್ತಿಲ್ಲ. ಹೌದು, ಯಶ್ ಬರ್ತ್ಡೇಗೆ ಬಂದಿದ್ದ ಚಾಪ್ಟರ್ 2ನ ಯೂನಿವರ್ಸೆಲ್ ಟೀಸರ್ ಯೂಟ್ಯೂಬ್ನಲ್ಲಿ 250 ಮಿಲಿಯನ್ ಅರ್ಥಾತ್ 25 ಕೋಟಿ ವೀಕ್ಷಣೆ ಕಂಡಿದೆ. ಇದು ಭಾರತೀಯ ಸಿನಿಮಾ ಪ್ರಪಂಚದಲ್ಲಿ ಹೊಸ ಇತಿಹಾಸವೇ ಸರಿ. ಬರಿ ಟೀಸರ್ ಮಾತ್ರವಲ್ಲ, ಟ್ರೈಲರ್ ವಿಚಾರದಲ್ಲೂ ಕೆಜಿಎಫ್ ಬಹುದೊಡ್ಡ ದಾಖಲೆಯನ್ನ ತನ್ನ ಹೆಸರಿಗೆ ಹಾಕಿಕೊಂಡಿದೆ. ಈ ಹಿಂದೆ ದೊಡ್ಡ ದೊಡ್ಡ ಚಿತ್ರಗಳು 24 ಗಂಟೆಯಲ್ಲಿ ಮಾಡಿದ್ದ ದಾಖಲೆಯನ್ನು ಚಾಪ್ಟರ್ 2 ಟ್ರೈಲರ್ ಕೇವಲ 12 ಗಂಟೆಯಲ್ಲಿ ಅಳಿಸಿಹಾಕಿತ್ತು. ರಾಕಿ ಭಾಯ್ ಎಂಟ್ರಿ ಮುಂದೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಚಿತ್ರಗಳೆಲ್ಲವೂ ಮಂಡಿಯೂರಿದ್ದವು.
ಮಾರ್ಚ್ 27ರಂದು ಕೆಜಿಎಫ್ ಟ್ರೈಲರ್ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಟ್ರೈಲರ್ ಬಂದ ಮೊದಲ 24 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಾಣೋ ಮೂಲಕ ಹಳೆ ರೆಕಾರ್ಡ್್ಗಳನ್ನು ಪೀಸ್ ಪೀಸ್ ಮಾಡಿತ್ತು ಯಶ್ ಸಿನಿಮಾ. ಈಗ ಐದು ಭಾಷೆಯ ಟ್ರೈಲರ್ನ ವೀವ್ಸ್ ಒಟ್ಟು 163 ಮಿಲಿಯನ್ ದಾಟಿದ್ದು, ರೆಕಾರ್ಡ್ ಬುಕ್ನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್, ಅತಿ ಹೆಚ್ಚು ಲೈಕ್ಸ್ ಪಡೆದ ಟ್ರೈಲರ್. 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್, ಅತಿ ಹೆಚ್ಚು ಲೈಕ್ಸ್ ಪಡೆದ ಟೀಸರ್ ಎಲ್ಲವೂ ಕೆಜಿಎಫ್ ಎರಡನೇ ಅಧ್ಯಾದ ಹೆಸರಿನಲ್ಲಿದೆ.
ಒಟ್ನಲ್ಲಿ ಕೆಜಿಎಫ್ ದಾಖಲೆಗಳನ್ನು ಬೆನ್ನತ್ತಿ ಹೋದ್ರೆ ಹೆಜ್ಜೆ ಹೆಜ್ಜೆಗೂ ಒಂದೊಂದು ಹೊಸ ರೆಕಾರ್ಡ್್ಗಳು ಕಣ್ಣಿಗೆ ಬೀಳೋದಂತು ಪಕ್ಕಾ. ಇದು ಜಸ್ಟ್ ರಿಲೀಸ್ಗೂ ಮುಂಚೆ, ರಿಲೀಸ್ ಆದ್ಮೇಲೆ ಇನ್ನು ಬೇಜಾನ್ ಇರುತ್ತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post