ಬೆಳಗಾವಿ: ಮನೆ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. 1 ವರ್ಷದ ಬಾಲಕಿಯನ್ನು, ಅನಿಲ್ ರಾಮು ಲಂಬೂಗೋಳ (31) ಎಂಬ ಖದೀಮ ಭಾನುವಾರ ತಡರಾತ್ರಿ ಅಪಹರಿಸಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡುವಾಗ ಮನೆಯವರ ಕಣ್ಣಿಗೆ ಬಿದ್ದಿದ್ದ ಅನಿಲ್ ರಾಮು, ಹೊರಗಡೆ ನಿಂತಿದ್ದ ಮಗುವನ್ನ ಅಪಹರಿಸಿದ್ದಾನೆ.
ಈ ಬಗ್ಗೆ ಪೋಷಕರು ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಮಾಡಿದ ಬಾಲಕಿ ಮತ್ತು ಆರೋಪಿ ಸದಲಗಾ ಪೋಲಿಸ್ ಠಾಣಾ ವ್ಯಾಪ್ತಿಯ ಕಾರದಗಾ ಗ್ರಾಮದಲ್ಲಿ ಪತ್ತೆಯಾಗಿದ್ದಾಳೆ. ಇನ್ನೂ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರೆದು ತಂದು ವೈದ್ಯಕೀಯ ತಪಾಸಣೆಯನ್ನು ಮಾಡಲಾಗಿದೆ. ಸದ್ಯ ಬಾಲಕಿಯನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಆರೋಪಿಯ ಮೇಲೆ ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post