ಸದ್ಯ ಯಾವ ಕಡೆ ನೋಡಿದ್ರು ಕೆಜಿಎಫ್ ಸಿನಿಮಾದ್ದೇ ಸದ್ದು, ರೋಡ್ಲ್ಲೂ ಕೆಜಿಎಫ್ ಬ್ಯಾನರ್ಗಳು, ಬಸ್ಸ್ಯಾಂಡ್ನಲ್ಲೂ ಕೆಜಿಎಫ್ ಪೋಸ್ಟರ್, ಮಾಲ್-ಕಾಂಪ್ಲೇಕ್ಸ್ನಲ್ಲೂ ಕೆಜಿಎಫ್.. ಕೆಜಿಎಫ್.. ಕೆಜಿಎಫ್ ಈಗ ಸಾಗರದ ಮೇಲೂ ಕೆಜಿಎಫ್ ಸಿನಿಮಾದ್ದೇ ಕಾರುಬಾರು. ಸಿನಿಮಾ ಮಾಡೋದು ಒಂದು ಸಾಹಸ, ಆ ಸಿನಿಮಾ ಮಾಡಿದ್ಮೇಲೆ ಜನರಿಗೆ ತಲುಪಿಸೋದು ಮತ್ತೊಂದು ಮಹಾಸಾಹಸ. ಒಳ್ಳೆಯ ಚಿತ್ರ ಮಾಡಿದ್ರು ಕೆಲವೊಮ್ಮೆ ಸರಿಯಾದ ಪ್ರಮೋಷನ್ ಮಾಡದ ಕಾರಣ ಜನರಿಗೆ ರೀಚ್ ಆಗಲ್ಲ. ಹಾಗಾಗಿ, ಆ ಚಿತ್ರ ಮತ್ತು ಚಿತ್ರದ ನಿರ್ಮಾಪಕ ಲಾಸ್ ಆಗ್ಬೇಕಾಗುತ್ತೆ. ಬಟ್, ಪ್ರಮೋಷನ್ ವಿಷ್ಯದಲ್ಲಿ ಹೊಂಬಾಳೆ ಫಿಲಂಸ್ ಹತ್ತು ಹೆಜ್ಜೆ ಮುಂದೆಯಿಟ್ಟಿದ್ದು, ಇಡೀ ದೇಶದಲ್ಲಿ ಕೆಜಿಎಫ್ ಹಬ್ಬ ಮಾಡ್ತಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೆಜಿಎಫ್ ಸಿನಿಮಾದ ಪ್ರಚಾರ ಮಾಡುತ್ತಾ ಸಾಗಿದೆ ಹೊಂಬಾಳೆ ತಂಡ.
ದೆಹಲಿ, ಮುಂಬೈನಲ್ಲಿ ಪ್ರಮೋಷನ್ ಮಾಡಿದ ರಾಕಿ ಭಾಯ್ ಅಂಡ್ ಟೀಂ ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರದ ಕರೆಯೋಲೆ ಹಂಚಿದೆ. ತಮಿಳುನಾಡು ಮುಗಿಸಿ ಈಗ ಕೇರಳಕ್ಕೆ ಕಾಲಿಟ್ಟಿದ್ದು, ಅಲ್ಲಿಯೂ ಕೆಜಿಎಫ್ ಫೀವರ್ ಜಾಸ್ತಿ ಮಾಡಿದೆ. ಹೀಗೆ, ಎಷ್ಟು ಸಾಧ್ಯವೋ ಅಷ್ಟು ಕಡೆ ಕೆಜಿಎಫ್ ತಂಡ ಭೇಟಿ ಕೊಟ್ಟು ಪ್ರೇಕ್ಷಕರನ್ನ ಸೆಳೆಯೋ ಕೆಲಸ ಮಾಡ್ತಿದೆ. ಇದೀಗ, ಕೆಜಿಎಫ್ ಚಿತ್ರದ ಪ್ರಚಾರ ಇನ್ನೊಂದು ಹಂತಕ್ಕೆ ತಲುಪಿದ್ದು, ಈ ಸೀನ್ ಒಂಥಾರ ಅದ್ಭುತ ಎನಿಸುವಂತಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಕಬಾಲಿ’ ಸಿನಿಮಾ ರಿಲೀಸ್ ಅದಾಗ ಇಂಥಾ ಪ್ರಮೋಷನ್ಗಳನ್ನು ನೋಡಿದ್ವಿ. ವಿಮಾನ, ರೈಲಿನ ಮೇಲೆ ರಜನಿಕಾಂತ್ ರಾರಾಜಿಸಿದ್ದರು. ಇದೀಗ, ಕೆಜಿಎಫ್ ಸಿನಿಮಾ ವಿಷ್ಯದಲ್ಲೂ ಅಂಥದ್ದೇ ಪ್ರಚಾರ ನಡೆದಿದೆ. ಸಮುದ್ರದಲ್ಲಿ ಸಂಚರಿಸುತ್ತಿರುವ ಹಡುಗಿನ ಮೇಲೆ ಕೆಜಿಎಫ್ ಅಧೀರನ ಬ್ಯಾನರ್ ರಾರಾಜಿಸಿದ್ದು, ಫೋಟೋ ವೈರಲ್ ಆಗಿದೆ. ಈ ಮೂಲಕ ಸಮುದ್ರದಲ್ಲಿ ಸಂಚರಿಸೋರು, ಬೀಚ್ನಲ್ಲಿ ಟೈಂಪಾಸ್ ಮಾಡೋರಿಗೂ ಕೆಜಿಎಫ್ ತಲುಪಿದೆ.
ತಮಿಳುನಾಡಿನಲ್ಲಿ ಜೋರಾಯ್ತು ಕೆಜಿಎಫ್ ತೂಫಾನ್
ತಮಿಳುನಾಡಿನಲ್ಲಿ ‘ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್’ ಸಂಸ್ಥೆ ಕೆಜಿಎಫ್ ಚಾಪ್ಟರ್2 ಸಿನಿಮಾವನ್ನು ರಿಲೀಸ್ ಮಾಡ್ತಿದ್ದು, ದೊಡ್ಡ ಮಟ್ಟದಲ್ಲಿ ಓಪನಿಂಗ್ ಕೊಡೋ ಲೆಕ್ಕಚಾರದಲ್ಲಿದೆ. ಕೆಜಿಎಫ್ಗೂ ಒಂದು ದಿನ ಮುಂಚೆ ತಮಿಳು ಸೂಪರ್ ಸ್ಟಾರ್ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಬರ್ತಿದ್ದರೂ, ಹೆಚ್ಚು ಸ್ಕ್ರೀನ್ಗಳಲ್ಲಿ ಕೆಜಿಎಫ್ ಪ್ರದರ್ಶಿಸಲು ನಿರ್ಧರಿಸಲಾಗಿದೆ. ತಮಿಳುನಾಡಿನಾದ್ಯಂತ ಸುಮಾರು 800 ಥಿಯೇಟರ್ಗಳಲ್ಲಿ ‘ಬೀಸ್ಟ್’ ಬರ್ತಿದ್ರೆ, ‘ಕೆಜಿಎಫ್’ 250 ಚಿತ್ರಮಂದಿರದಲ್ಲಿ ಎಂಟ್ರಿ ಕೊಡಲಿದೆಯಂತೆ.
250 ಥಿಯೇಟರ್ ಚಿಕ್ಕದು ಎನಿಸಿದರೂ ವಿಜಯ್ ಸಿನಿಮಾದ ಎದುರು ಇದು ಬಹಳ ದೊಡ್ಡ ಸಂಖ್ಯೆಯಾಗಿದೆ. ಇನ್ನು ತಮಿಳುನಾಡಿನ ಹಲವು ಕಡೆ ಮುಂಜಾನೆಯೇ ಕೆಜಿಎಫ್ ರಿಲೀಸ್ ಆಗಲಿದೆ. ಚೆನ್ನೈನ ಹಲವು ಸೆಂಟರ್ಗಳಲ್ಲಿ 4 ಗಂಟೆಗೆ ಕೆಜಿಎಫ್ ಪ್ರದರ್ಶನವಾಗಲಿದೆ. ಈಗಾಗಲೇ ತಮಿಳುನಾಡಿನಲ್ಲಿ ಕೆಜಿಎಫ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಶರವೇಗದಲ್ಲಿ ಟಿಕೆಟ್ ಸೇಲ್ ಆಗ್ತಿದೆ. ತುಂಬಾ ಕಡೆ ಮೊದಲ ದಿನದ ಟಿಕೆಟ್ಗಳು ಸೋಲ್ಡ್ ಆಗಿದೆ.
ತಮಿಳುನಾಡು ಮಾತ್ರವಲ್ಲ ಕೇರಳದಲ್ಲೂ ಕೆಜಿಎಫ್ ಸಿನಿಮಾ ಗ್ರ್ಯಾಂಡ್ ಆಗಿ ತೆರೆಕಾಣ್ತಿದೆ. ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ರಿಲೀಸ್ ಮಾಡ್ತಿದ್ದು, ಅಲ್ಲಿಯೂ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಕೇರಳದಲ್ಲೂ ಅರ್ಲಿ ಮಾರ್ನಿಂಗ್ ಶೋಗಳು ಸಾಮಾನ್ಯವಾಗಿವೆ.
ವಿಶ್ವದ ಹಲವು ಕಡೆ ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದೆ. ಆದರೆ, ಯೂರೋಪ್ನಲ್ಲಿ ಬಹಳ ದೊಡ್ಡದಾಗಿ ಯಶ್ ಸಿನಿಮಾ ಬಿಡುಗಡೆಯಾಗುತ್ತಿದೆಯಂತೆ. ಯೂರೋಪ್ನ ಸುಮಾರು 28 ದೇಶಗಳಲ್ಲಿ ಕೆಜಿಎಫ್ ಎರಡನೇ ಅಧ್ಯಾಯ ತೆರೆಗೆ ಬರ್ತಿದ್ದು, ಇದು ಹೊಸ ದಾಖಲೆಯಾಗಿದೆ. ಇನ್ನು ಯುಎಸ್ನಲ್ಲಿ ಏಪ್ರಿಲ್ 13ಕ್ಕೆ ಕೆಜಿಎಫ್ ಪ್ರಿಮಿಯರ್ ಆಗ್ತಿದ್ದು, ಬರಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ನಿಂದಲೇ 1.90 ಕೋಟಿ ಕಲೆಕ್ಷನ್ ಆಗಿದೆಯಂತೆ.
ಕರ್ನಾಟಕ ಬಿಟ್ಟು ಬೇರೆ ಎಲ್ಲಾ ಕಡೆಯೂ ಕೆಜಿಎಫ್ 2 ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಕರ್ನಾಟಕದಲ್ಲಿ ಭಾನುವಾರದಿಂದ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್ ಆಗಲಿದ್ದು, ತಮಿಳುನಾಡು, ಕೇರಳ, ಮುಂಬೈ, ಉತ್ತರ ಭಾರತಕ್ಕಿಂತ ದೊಡ್ಡ ತೂಫಾನ್ ಸೃಷ್ಟಿಯಾಗಬಹುದು ಅನ್ನೋ ನಿರೀಕ್ಷೆಯಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post