ಧಾರವಾಡ: ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ನೆಪದಲ್ಲಿ ಬಡಪಾಯಿಗಳ ವ್ಯಾಪಾಗಳ ಹೊಟ್ಟೆಗೆ ಕಲ್ಲು ಹಾಕಲಾಗುತ್ತಿದೆ. ಇನ್ನೂ ಮುಂದುವರೆದ ಭಾಗವಾಗಿ ಇತ್ತೀಚೆಗೆ ಧಾರವಾಡದಲ್ಲೂ ಈ ರೀತಿಯ ಅಮಾನುಷ ಘಟನೆ ನಡೆದು ಹೋಗಿದೆ. ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಬಳಿ ಇದ್ದಂತಹ 4 ಮುಸ್ಲಿಂ ಅಂಗಡಿಗಳನ್ನ ಶ್ರೀರಾಮ ಸೇನೆ ಕಾರ್ಯಕರ್ತರು ಸೇರಿ ಧ್ವಂಸ ಮಾಡಿದ್ದಾರೆ.
ವ್ಯಾಪಾರಿ ಹೆಸರು ನಬಿಸಾಬ್.. ಅವರ ಅಂಗಡಿಯಲ್ಲಿರುವ ಎಲ್ಲಾ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಧ್ವಂಸ ಮಾಡಿದ್ದರು ಶ್ರೀರಾಮ ಸೇನೆ ಕಾರ್ಯಕರ್ತರು. ಈ ದಾಂಧಲೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದರು. ಇಂತಹ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಅಂತ ಆಗ್ರಹಿಸಿದ್ದರು.
ಈ ಬೆನ್ನಲ್ಲೀಗ ನೊಂದ ವ್ಯಾಪಾರಿ ನಬಿಸಾಬ್‌ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಆಪ್ತರ ಮೂಲಕ ಸಹಾಯ ಮಾಡಿದ್ದಾರೆ. ಹತ್ತು ಸಾವಿರ ರೂಪಾಯಿ ನೀಡಿ ಆರ್ಥಿಕವಾಗಿ ನೆರವು ನೀಡಿದ್ದಾರೆ.
ಇದನ್ನು ಓದಿ : ಧಾರವಾಡದಲ್ಲಿ 4 ಮುಸ್ಲಿಂ ಅಂಗಡಿಗಳ ತೆರವು.. ವ್ಯಾಪಾರಿ ಕಣ್ಣೀರು- ಹೆಚ್ಡಿಕೆ ತೀವ್ರ ಖಂಡನೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post