ಒಂದು ಸೀರಿಯಲ್ ಆರಂಭದ ದಿನಗಳಿಂದಲೂ ನಂಬರ್ ಸ್ಥಾನದಲ್ಲಿದೆ. ಇನ್ನೊಂದು ಸೀರಿಯಲ್ ಟಾಫ್ ಫೈವ್ನಲ್ಲಿ ಖಾಯಂ ಸ್ಥಾನ ಪಡೆದಿದೆ. ಆಶ್ಚರ್ಯ ಅಂದ್ರೆ, ಈ ವಾರ ನಂಬರ್ ಒನ್ ಸ್ಥಾನವನ್ನ ಇನ್ನೊಂದು ಸೀರಿಯಲ್ ಕಬಳಿಸಿದ ಧಾರವಾಹಿಯೇ ಗಟ್ಟಿಮೇಳ. ಸೀರಿಯಲ್ ಲೋಕದಲ್ಲಿ ಸದ್ಯ ಸೆನ್ಸೇಷನ್ ಸೃಷ್ಟಿಸಿರೋ ಸುದ್ದಿಯಿದು. ಪುಟ್ಟಕ್ಕನ ಮಕ್ಕಳ ನಂಬರ್ ಜಾಗವನ್ನ ಗಟ್ಟಿಮೇಳ ಪಡೆದುಕೊಂಡಿದೆ. ಇಡೀ ಟೀಮ್‌ಗೆ ಇದು ನಿಜಕ್ಕೂ ಸಂತಸದ ವಿಚಾರವಾಗಿದೆ.
ಆದ್ರೆ, ಜನರ ಪ್ರಶ್ನೆ ಏನಂದ್ರೆ, ಹೇಗೆ ಅನ್ನೋದು?
ಅಫ್ಕೋಸ್ ಗಟ್ಟಿಮೇಳ ಧಾರವಾಹಿಯಲ್ಲಿ ಸಖತ್ ಇಂಟರೆಸ್ಟಿಂಗ್ ಸ್ಟೋರಿ ನಡೀತಾ ಇದೆ. ಜನರು ಗಟ್ಟಿಮೇಳ ಧಾರವಾಹಿಯನ್ನ ಮೆಚ್ಚಿಕೊಂಡಿದ್ದಾರೆ. ಧ್ರುವಾ-ಅದಿತಿ ಲವ್ ಸ್ಟೋರಿ . ಧ್ರುವಾ ಆ್ಯಕ್ಸಿಡೆಂಟ್ ಕಥೆ ಜನರ ಕಾತರದಿಂದ ನೋಡುವಂತೆ ಮಾಡಿರೋದು ಸುಳ್ಳಲ್ಲ. ಈಗ ಈ ಧಾರವಾಹಿ ನಂಬರ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಗಟ್ಟಿಮೇಳ ಧಾರವಾಹಿ ಶುರುವಾಗಿ ವರ್ಷಗಳೇ ಕಳೆದಿವೆ. ಹಾಗಾಗಿ ಮತ್ತೆ ನಂಬರ್ ಒನ್ ಸ್ಥಾನ ಅಲಂಕರಿಸೋದು ಕಷ್ಟದ ವಿಚಾರವೇ.
ಯಾಕಂದ್ರೆ, ಸೀರಿಯಲ್ ಹಳೆಯದ್ದು ಆಗ್ತಾ ಇದ್ದಂತೆ, ನೋಡೋ ಜನರು ಕಡಿಮೆಯಾಗ್ತಾ ಹೋಗ್ತಾರೆ. ಆದ್ರೆ, ಈ ವಿಚಾರದಲ್ಲಿ ಗಟ್ಟಿಮೇಳ ಸ್ವಲ್ಪ ಮುಂದಿದೆ. ಕಥೆಯಿಂದ ಈ ಸೀರಿಯಲ್ ಮತ್ತೆ ನಂಬರ್ ಸ್ಥಾನ ಅಲಂಕರಿಸಿದೆ. ನಟ ಹಾಗೂ ನಿರ್ಮಾಪಕರಾಗಿರೋ ರಕ್ಷ್ ಗಟ್ಟಿಮೇಳ ಮತ್ತೆ ನಂಬರ್ ಒನ್ ಸ್ಥಾನ ಅಲಂಕರಿಸಿರೋದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇಡೀ ತಂಡಕ್ಕೆ ಈ ಕ್ರೆಡಿಟ್ ಕೊಟ್ಟಿದ್ದಾರೆ. ನಮ್ಮ ಕಡೆಯಿಂದಲೂ ಇಡೀ ತಂಡಕ್ಕೆ ಕಂಗ್ರಾಜುಲೇಷನ್ಸ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post