ಜೋಸ್ ಬಟ್ಲರ್ ಅವರ ಮತ್ತೊಂದು ಅಮೋಘ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು, ಕೋಲ್ಕತ್ತಾ ನೈಟ್ ರೈಡರ್ಸ್ಗೆ 218 ರನ್ಗಳ ಬಿಗ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಸಂಜು ಸ್ಯಾಮ್ಸನ್ ಬಳಗ ನಿಗಧಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 217 ರನ್ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದೆ. ಎಂದಿನಂತೆ ಕ್ರೀಸ್ಗೆ ಬಂದ ಬಟ್ಲರ್ ಇಂದೂ ಕೂಡ ಫೂರು, ಸಿಕ್ಸರ್ಗಳ ಮೂಲಕ ಕೆಕೆಆರ್ ತಂಡದ ಬೌಲರ್ಗಳನ್ನ ಚೆನ್ನಾಗಿ ಚೆಚ್ಚಿದರು.
ರಾಜಸ್ಥಾನ್ ಪರ ಬಟ್ಲರ್ 103, ದೇವದತ್ ಪಡಿಕಲ್ 24, ಕ್ಯಾಪ್ಟನ್ ಸಂಜು ಸ್ಯಾಮ್ಸನ್ 38 ರನ್, ಪರಾಗ್ 9, ಹಿಟ್ಮೇಯರ್ 26, ಕರುಣ್ ನಾಯರ್ 3, ಅಶ್ವಿನ್ 2 ರನ್ಗಳನ್ನ ಗಳಿಸಿದ್ರು. ಹಾಗೆಯೇ ಕೆಕೆಆರ್ ಪರ ಅನುಭವಿ ಸುನಿಲ್ ನರೈನ್ 2, ಕಮ್ಮಿಸ್ ಹಾಗೂ ರಸೇಲ್, ಮಾವಿ ತಲಾ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಒದಿ: ಇಂದೂ ಕೂಡ ಬಟ್ಲರ್ ‘ರಾಯಲ್’ ಆಟ.. ಜೋಸ್ರ 2ನೇ ಶತಕದ ಜೋಶ್ ಹೇಗಿತ್ತು ಗೊತ್ತಾ..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post